ಬಹುದಿನಗಳಿಂದ ಬ್ಲಾಗ್ ಮಾಡಬೇಕೆಂದು ಹೆಣಗುತ್ತಿದ್ದೆ. ಆದರೆ ಹೇಗೆ ಮಾಡಬೇಕೆಂದು ತಿಳಿಯುತ್ತಿರಲಿಲ್ಲ. ನಿನ್ನೆ ಮಧುರ ಬ್ಲೋಗ್ಗೆರನ ವಿಷಯ ಹೇಳಿದಳು. ನನ್ನ ಬ್ಲಾಗ್ ಶುರುವಾಯಿತು.ಬರವಣಿಗೆ ಆರಂಬಿಸಬೇಕೆಂಬ ನನ್ನ ಆಸೆಯೂ ಇಲ್ಲಿಂದ ಆಗಬಹುದು ಎನ್ನುವುದು ನನ್ನ ಆಶಯ. ನೋಡೋಣ ಎಷ್ಟೆಲ್ಲಾ ಬರೆಯುತ್ತೇನೆಂದು!
ಐದು ವರ್ಷಗಳಾಯಿತು ನಾವು ಭಾರತ ಬಿಟ್ಟು ವಿದೇಶಕ್ಕೆ ಬಂದು. ನಮ್ಮ ಜೀವನದ ಗತಿಯೇ ಬದಲಾಗಿದೆ. ಸೌದಿ ಅರೇಬಿಯ, ಒಮಾನ್, ಸ್ಪೇನ್, ಅಬುಧಾಬಿ....ಹೀಗೆ ತಿರುಗಿದ ದೇಶಗಳ ಪಟ್ಟಿ ಉದ್ದ ಇದೆ. ಹಾಗೆ ಈ ತಿರುಗಾಟಗಳು ಕೊಟ್ಟ ಅನುಭವಗಳೂ ಬಹಳ. ಅಲ್ಲದೆ ನನ್ನ ಮಿತ್ರನಂತಿದ್ದ ನನ್ನ ತಂದೆ ನಮ್ಮನ್ನು ಅಗಲಿದ್ದು ಈ ಸಮಯದಲ್ಲಿಯೇ. ಆ ಘಟನೆ ನಾನು ಜೀವನವನ್ನು ನೋಡುವ ರೀತಿಯನ್ನು ಬದಲಿಸಿತು. ಅನಾಥ ಪ್ರಜ್ಞೆ ನನ್ನನ್ನು ಯಾವಾಗಲೂ ಕಾಡುತಿರುತ್ತದೆ, ಜೀವನದ ನಶ್ವರತೆ ಸರಿಯಾಗಿ ಅರಿವಾಗಿದೆ. ಇಡಿದಿನ ನನ್ನ ಮನಸ್ಸಿನಲ್ಲಿ ಮೂಡುವ ನೂರು ಭಾವನೆಗಳನ್ನು ಎಲ್ಲಾದರೂ ಹೊರಹಾಕುವ ಒಂದು ವೇದಿಕೆಯಾಗಿ ಈ ಬ್ಲಾಗು ನನಗೆ ಸಹಕಾರಿಯಾಗಬಹುದು ಎನಿಸುತ್ತದೆ.
ಜೀವನವು ನನಗೆ ಒದಗಿಸಿದ ಅನುಭವಗಳನ್ನು ಒಂದು ಕಡೆ ದಾಕಲಿಸಿದರೆ ನನ್ನ ಮಗಳೂ ಯಾವಾಗಲಾದರೂ ಓದಿಯಾಳು. ಈ ನಿಟ್ಟಿನಲ್ಲಿ ಅವಳು ಸ್ವಲ್ಪ ಕನ್ನಡ ಓದುವಳು-ಎಂಬ ಆಶಯವೂ ಈ ಬ್ಲಾಗನ್ನು ಮಾಡಿದ ಒಂದು ಉದ್ದೇಶ.ನಾನು ಏನೂ ಮಾಡದೇ ದಿನಗಳನ್ನು ಕೊಲ್ಲುತ್ತಿದ್ದೇನೆ ಎಂಬ ನನ್ನ ಕೊರಗು ಸ್ವಲ್ಪ ಮಟ್ಟಿಗಾದರೂ ಇದರಿಂದ ದೂರವಾಗಬಹುದು. ಹೀಗೆ ಇಂದು ಆರಂಭವಾದ ಸುಧಕ್ಕನ ಬ್ಲಾಗು ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ ಎಂದು ನನಗೆ ನಾನೇ ಹಾರೈಸಿಕೊಳ್ಳುತ್ತೇನೆ.

ಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿನಂದೂ ಹಾರೈಕೆ ಇದೆ. ಬರೆಯುತ್ತಿರಿ.. :)
ಪ್ರತ್ಯುತ್ತರಅಳಿಸಿAll the best for your blogging venture.
ಪ್ರತ್ಯುತ್ತರಅಳಿಸಿninna baravanige nirantaravagi sagali
ಪ್ರತ್ಯುತ್ತರಅಳಿಸಿ