ಪ್ರಜಾಪ್ರಭುತ್ವದ ಗಾಳಿ ಎಲ್ಲೆಡೆ ಬೀಸುತ್ತಿದೆ. ಇರುವ ಆಡಳಿತದ ವಿರುದ್ದ ಜನರ ಚಳವಳಿ ನಡೆಯುತ್ತಿದೆ. ತುನಿಶಿಯ, ಅಲ್ಜೀರಿಯ, ಈಜಿಪ್ಟ್, ಲಿಬಿಯ, ಇಲ್ಲೆಲ್ಲಾ ಆಳುತ್ತಿದ್ದ ಸರಕಾರವನ್ನು ಬಿಳಿಸಿದ ಚಳವಳಿಗಳು ಈಗ ಬಹರೈನ್ ಮತ್ತು ಒಮಾನುಗಳಿಗೂ ಹಬ್ಬಿದೆ. ಸೌದಿ ಅರೇಬಿಯಾದಲ್ಲಿ ಸರಕಾರದ ವಿರುಧ್ಧ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆಯಂತೆ! ಬಹರೈನಿನಲ್ಲಿ ತುರ್ತು ಪರಿಸ್ತಿತಿ ಗೋಷಿಸಲಾಗಿದೆ.
ಇಲ್ಲಿರುವ ಲಕ್ಷೋಪಲಕ್ಷ ಜನ ಭಾರತೀಯರು ಮೌನವಾಗಿ ಪರಿಸ್ತಿತಿಯನ್ನು ನೋಡುತ್ತ ದೇವರಲ್ಲಿ ಎಲ್ಲವೂ ಸರಿಯಾಗಲಿ ಎಂದು ಹಾರೈಸುತ್ತಿದ್ದಾರೆ.ಒಂದು ಪಕ್ಷ ಪರಿಸ್ತಿತಿ ಕೈ ಮಿರಿ ಭಾರತೀಯರು ಈ ದೇಶಗಳನ್ನು ಬಿಟ್ಟು ಹೋಗಬೇಕಾದರೆ ಏನಪ್ಪ ಗತಿ ಎಂದು ಯೋಚಿಸಲೂ ಭಯವಾಗುತ್ತದೆ.ನಾವು ಅರಬ್ಬರ ಪ್ರಪಂಚದಲ್ಲಿ ಸೇರಿ ಆರು ವರ್ಷಗಳಾಯಿತು. ಅದರಲ್ಲಿ ಮೊದಲ ಒಂದು ವರ್ಷ ಸೌದಿ ಅರೆಬಿಯಾದಲ್ಲಿ ಕಳೆದಿದ್ದೇವೆ. ಈ ವರ್ಷ ಸಂಯುಕ್ತ ಅರಬ್ ಸಂಸ್ತಾನದಲ್ಲಿ (ಯು ಎ ಇ ) ಇದ್ದೇವೆ. ಇಲ್ಲೆಲ್ಲಾ ಈ ವರ್ಷ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿದರೆ ಇನ್ನು ಹೆಚ್ಚು ಸಮಯ ಭಾರತೀಯರು ಇಲ್ಲಿರಲಾರರು ಎನಿಸುತ್ತಿದೆ.
ನಾವು ಕಳೆದ ಐದು ವರ್ಷಗಳಿಂದ ವಾಸವಾಗಿರುವ ದೇಶ ಒಮಾನ್. ಶಾಂತಿ ಪ್ರಿಯ ಒಮಾನಿ ಜನತೆ ಸ್ನೇಹಪರರು. ಆದ್ದರಿಂದಲೇ, ಇಲ್ಲಿ ಶತಮಾನಗಳಿಂದ ಭಾರತೀಯರು ಬಂದು ಬೀಡು ಬಿಟ್ಟಿದ್ದಾರೆ ಎನಿಸುತ್ತದೆ..ಈ ದೇಶದ ಒಟ್ಟು ಜನಸಂಖ್ಯೆ ೨೭,೦೦,೦೦೦. ಅದರಲ್ಲಿ ೭,೦೦,೦೦೦ ಜನ ವಿದೇಶಿಯರು. ಅವರಲ್ಲಿ ೮೦% ಭಾರತೀಯರು. ಅಂದರೆ ಯೋಚಿಸಿ ಎಷ್ಟು ಭಾರತೀಯರು ಇಲ್ಲಿರಬಹುದೆಂದು! ನಾವು ಕಳೆದ ಐದು ವರ್ಷಗಳಲ್ಲಿ ಈ ದೇಶದ ಉದ್ದಗಲ ಸಂಚರಿಸಿದ್ದೇವೆ, ಇಲ್ಲಿ ನಡೆಯುವ ಸಾಮಾಜಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ, ಈ ದೇಶದ ಅನ್ನ, ನೀರು ಕುಡಿದಿದ್ದೇವೆ, ಇಲ್ಲಿನವರಾಗಿದ್ದೇವೆ. ಇಲ್ಲಿನ ದೊಡ್ಡ ಭಾರತಿಯ ಸಮುದಾಯ ಸಾಂಸ್ಕ್ರತಿಕವಾಗಿ ಬಹಳ ಚುರುಕಾಗಿದೆ. ಇಲ್ಲಿ ನಡೆಯುವಷ್ಟು ಸಂಗೀತ, ನೃತ್ಯ ಕಾರ್ಯಕ್ರಮಗಳು ಭಾರತದಲ್ಲಿ ನಡೆಯುವುದಿಲ್ಲ ಎನಿಸುತ್ತದೆ. ಇಲ್ಲಿದ್ದ ಐದು ವರ್ಷಗಳಲ್ಲಿ ನಾವು ಕುನ್ನುಕುಡಿ ವೈದ್ಯನಾಥನ್, ಹರಿಪ್ರಸಾದ್ ಚೌರಾಸಿಯಾ, ಏನ್.ರಮಣಿ, ಹಿಂದಿ ಹಾಡುಗಾರ ಶಾನ್, ರೆಮೋ, ಕನ್ನಡದ ಗುರುಕಿರಣ್, ಸಿ.ಅಶ್ವಥ್, ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್, ಮುಂತಾದ ಹತ್ತು ಹಲವು ಭಾರತಿಯ ಕಲಾವಿದರ ಪ್ರದರ್ಶನಗಳನ್ನು, ನಾಟಕಗಳನ್ನು ನೋಡಿದ್ದೇವೆ; ಅದೂ ಉಚಿತವಾಗಿ. ನನ್ನ ಮಗಳು ಮತ್ತು ನಾನು ಪ್ರಭಾತ್ ಕಲಾವಿದರ ತಂಡದೊಂದಿಗೆ ವೇದಿಕೆಯಲ್ಲಿ ಅಭಿನಯಿಸಿದ್ದೇವೆ, ಮಲ್ಲಾಡಿ ಸಹೋದರರಿಂದ ಕೆಲವು ಕೃತಿಗಳನ್ನು ಕಲಿತಿದ್ದೇವೆ. ಹಲವು ಭಾರತಿಯ ಶಾಲೆಗಳು ದೇಶದ ಎಲ್ಲ ನಗರಗಳಲ್ಲೂ ಇವೆ; ರಾಜಧಾನಿ ಮಸ್ಕತ್ತಿನಲ್ಲಿ ಈಗಾಗಲೇ ಐದು ಭಾರತಿಯ ಶಾಲೆಗಳಿವೆ. ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಇಲ್ಲಿನ ಅತಿ ದೊಡ್ಡ ಭಾರತಿಯ ಶಾಲೆಯಲ್ಲಿ ೭,೦೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ನಮ್ಮ ಮಗಳು ಇಲ್ಲಿ ಉತ್ತಮ ಗುರುವಿನ ಸಹಾಯದಿಂದ ಶಾಸ್ತ್ರಿಯ ಸಂಗೀತ ಕಲಿಯುತ್ತಿದ್ದಾಳೆ, ಎಲ್ಲ ಐದು ಪಂಚರತ್ನ ಕೃತಿಗಳನ್ನು ಹತ್ತು ವರ್ಷ ವಯಸ್ಸಿನಲ್ಲಿ ಹಾಡಬಲ್ಲವಲಾಗಿದ್ದಾಳೆ. ನಾನೂ ನನ್ನ ಹತ್ತು ವರ್ಷಗಳಿಂದ ಮುಉಲೇ ಹಿಡಿದು ಕುಳಿತಿದ್ದ ವೀಣೆಯನ್ನು ತಂದು ವೇದಿಕೆಯ ಮೇಲೆಯೂ ನುಡಿಸುವಂತಾಗಿದ್ದು ಮಸ್ಕತ್ತಿನಲ್ಲಿ! ಇಲ್ಲಿ ಹಿಂದುಗಳಿಗೆ ಎರಡು ದೇವಾಲಯಗಳು, ಕ್ರಿಸ್ತರಿಗೆ ಚರ್ಚು ಇದೆ. ಎಲ್ಲ ಹಬ್ಬಗಳನ್ನೂ ಒಟ್ಟಾಗಿ ಅವರವರ ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಬಹುದು. ಕನ್ನಡದವರ ಗಣೇಶ ಹಬ್ಬ, ಬಂಗಾಳದವರ ದುರ್ಗಾಪೂಜೆ, ದೇವಸ್ತಾನದ ದಂಡಿಯ, ಜನ್ಮಾಷ್ಟಮಿ, ಮೊಸರುಕುಡಿಕೆ......ಹೀಗೆ ಎಲ್ಲ ಹಬ್ಬಗಳು ಸಾಂಪ್ರದಾಯಿಕವಾಗಿ ಆಚರಿಸಲ್ಪದುತ್ತವೆ. ದೇವಸ್ಥಾನದ ಬಾಗಿಲಿನಲ್ಲಿ ಒಮಾನಿಗಳು ಕುಳಿತು "ಶಿವಜಿ ಕೇಳಿಯೇ ತೆಳ, ದೂದ್ಹ್", "ಬೆಹಂಜಿ ನಾರಿಯಲ್ ಲೇಲೋ", ಎಂದು ಮಾರುತ್ತಿರುತ್ತಾರೆ. ಆದ್ದರಿಂದ ಮಸ್ಕತ್ತಿನಲ್ಲಿ ನಮಗೆ ಯಾವತ್ತೂ ವಿದೇಶಲ್ಲಿದ್ದೇವೆಂದು ಅನಿಸಲೇ ಇಲ್ಲ. ಭಾರತೀಯ ಸಾಮಾಜಿಕ ಒಕ್ಕೂಟದ ಕೆಳಗೆ ಎಲ್ಲಾ ರಾಜ್ಯಗಳ ವಿವಿದ ಶಾಖೆಯಿದೆ. ಕನ್ನಡ ,ಸಂಘ ತುಂಬಾ ಚಟುವಟಿಕೆಯಿಂಡಿದೆ. ನಾವು ಕನ್ನಡ ತರಗತಿಗಳನ್ನು ನಡೆಸುತ್ತಿದೇವೆ. ತಮಿಳರು ತಮಿಳು ತರಗತಿಗಳನ್ನು ನಡೆಸುತ್ತಿದ್ದಾರೆ.ವರ್ಷಕ್ಕೊಮ್ಮೆ ಸ್ವಾತಂತ್ರ್ಯ ಹಬ್ಬವನ್ನು ಎಲ್ಲ ರಾಜ್ಯಗಳವರು ಒಟ್ಟಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳಿಂದ ಆಚರಿಸುತ್ತೇವೆ. ಒಟ್ಟಿನಲ್ಲಿ ಮಿನಿ ಭಾರತವೇ ಇಲ್ಲೇ ನಿರ್ಮಾಣವಾಗಿದೆ.
ಇಲ್ಲಿನ ಸುಲ್ತಾನ ಕಬುಸ್ ಬಿನ್ ಸೈದ್ ಭಾರತೀಯರಿಗೆ ಬಹಳ ಸಹಾಯಕಾರಿ ರಾಜ.ನಲವತ್ತು ವರ್ಷಗಳ ಹಿಂದೆ ಇವನು ಗದ್ದುಗೆಗೆ ಏರಿದಂದಿನಿಂದ ಓಮಾನಿನ ಈಗಿನ ಸ್ಥಿತಿಗೆ ಕಾರಣನಾಗಿದ್ದಾನೆ. ದೇಶದ ಮೂಳೆ ಮೂಲೆಗೂ ಉತ್ತಮ ರಸ್ತೆಗಳ ನಿರ್ಮಾಣವಾಗಿದೆ, ನಿರಂತರ ವಿದ್ಯುತ್ ಸರಬರಾಜಿದೆ. ವರ್ಷಕ್ಕೊಮ್ಮೆ ನಡೆಯುವ ಮಸ್ಕತ್ ಹಬ್ಬ ಸ್ಥಳಿಯರಿಗೆ, ವಿದೇಶಿಯರಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದು ತಿಂಗಳಿಡಿ ಉಚಿತವಾಗಿ ಒದಗಿಸುತ್ತದೆ. ರಾಜನ ಆಡಳಿತದಡಿಯು ಪ್ರಜೆಗಳಿಗೆ ಸ್ವಾತಂತ್ರ ಕೊಡಲು ಸಾಧ್ಯ ಎಂಬುದನ್ನು ತೋರಿಸಿದ್ದಾನೆ. ಸಾಮಾನ್ಯ ಜನರಿಗೂ ಭಾರತೀಯರೆಂದರೆ ಪ್ರೀತಿ. ನಾನು ಬೇಟಿಯಾದ ಒಬ್ಬ ಒಮಾನಿ ಮಹಿಳೆ ಹೇಳುತ್ತಿದ್ದಳು ಅವಳಿಗೆ ಭಾರತೀಯ ಕುಟುಂಬ, ನಾವು ಮಕ್ಕಳಿಗೆ ಕೊಡುವ ಶಿಕ್ಷಣ ಎಲ್ಲವು ಇಷ್ಟವಂತೆ. ಅವಳ ಮಕ್ಕಳಿಗೂ ಅದೇ ತರಹದ ಶಿಕ್ಷಣ ಬೇಕಂತೆ. ಮೊದಲಿಗೆ ಶಾಂತಿಯುತವಾಗಿ ಆರಂಭವಾದ ಹರತಾಲಗಳು ಕ್ರಮೇಣ ದೊಡ್ಡದಾಗುತ್ತಾ ಬಂದಿದೆ. ಮದ್ಯದಲ್ಲಿ ಕೆಲವು ಬಾರಿ ಲುಲು ಮಾರುಕಟ್ಟೆಯನ್ನು ಸುಟ್ಟರು, ಇಬ್ರಿ ಎಂಬಲ್ಲಿ ಅಲ್ಲಿನ ಶೇಖನ ಮನೆಗೆ ಬೆಂಕಿ ಇತ್ತ್ತರು. ಎಲ್ಲ ಸರಕಾರೀ, ಖಾಸಗಿ ಕಚೇರಿಯಲ್ಲೂ ಒಂದಾದ ಮೇಲೆ ಒಂದರಂತೆ ಹೆಚ್ಚಿನ ವೇತನ, ಉತ್ತಮ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಯುತ್ತಿದೆ. ಸುಲ್ತಾನರು ಮೊದಲ ವರ ಬೇಡಿಕೆಗಳಾದ ನಿರುದ್ಯೋಗ ಬತ್ಯೆ, ಕನಿಷ್ಠ ವೇತನಗಳನ್ನು ಹೆಚ್ಚಿಸಿದ್ದೆ ತಪ್ಪಯಿತೆನೂ ಎಂಬಂತೆ ದಿಡ್ನದಿಂದ ದಿನಕ್ಕೆ ಅವರ ಬೇಡಿಕೆಗಳು ಹೆಚ್ಚಾಗುತ್ತಲಿವೆ. ಮೊದಲಿಗೆ ದೇಶದ ಬ್ರಷ್ಟ ಅದಿಕಾರಿಗಳ ವಿರುಧ್ಧ ಮತ್ತು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಆರಂಭವಾದ ಚಳವಳಿ ಈಗ ದಿಕ್ಕು ತಪ್ಪ್ಪುತ್ತಿದೆ ಎನಿಸುತ್ತಿದೆ. ಪ್ರತಿಯೊಬ್ಬನು ಅವನದ್ದೇ ಒಂದು ಉದ್ದೇಶ ಸಾದನೆಗಾಗಿ ಚಳವಳಿ ಕುಳಿತಂತೆ ಕಾನುತ್ತಿದೆ. ಇನ್ಗಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೂ ಚಳವಳಿ ಮಾಡಿದರಂದೆ- ಬೇಡಿಕೆಯೆಂದರೆ ಅವರನ್ನು ಕಡಿಮೆ ಅಂಕಗಳಿಗೆ ಉತ್ತಿರ್ಣ ಮಾಡಬೇಕಂತೆ!
ಹೀಗೆ ನಡೆದರೆ ಈ ದೇಶದಲ್ಲಿ ಬೀಡು ಬಿಟ್ಟಿರುವ ವಿದೇಶಿಯರ ಗತಿ ಏನೋ ಗೊತ್ತಿಲ್ಲ. ನಾನು ಈ ಲೆಖನವನ್ನು ಬ್ಲಾಗ್ಗರನನ್ನು ಅರ್ಥಮಾಡಿಕೊಂಡು ಮುಗಿಸುವ ಹೊತ್ತಿಗೆ ಒಮಾನಿನ ಪರಿಸ್ತಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ. ಸುಲ್ತಾನರು ಪ್ರಜೆಗಳ ಬೇಡಿಕೆಗಲನ್ನೆಲ್ಲ ಪೂರೈಸಿದ್ದಾರೆ ಎನಿಸುತ್ತಿದೆ. ಆದರೂ ಭಾರತೀಯ ಸಮುದಾಯದ ಮನಸ್ಥಿತಿ ಬದಲಾಗಿದೆ. ನೋಡೋಣ ಎಷ್ಟು ದಿನ ನಡೆಯುತ್ತದೆಂದು ಎಂಬ ಮನಸ್ಥಿತಿ ಹೆಚ್ಚಿನವರಿಗೆ ಬಂದಿದೆ ಎನಿಸುತ್ತಿದೆ. ಸ್ವದೇಶ, ಭಾಷೆ, ಜನರನ್ನೆಲ್ಲ ತೊರೆದು ಬದುಕು ಕಟ್ಟಲು ಬಂದಿರುವ ಜನರ ಅತಂತ್ರತೆ ಇಂತಹ ಪರಿಸ್ತಿತಿಯಲ್ಲಿ ಅರಿವಾಗುತ್ತದೆ. ಇಲ್ಲಿಯೇ ಹತತಿಪ್ಪತ್ತುತ್ತು ವರ್ಷ ಕಳೆದ ಜನರು ಅತ್ತ ತಮ್ಮ ದೇಶಕ್ಕೇ ಪರಕಿಯವಾಗಿ, ಇತ್ತ ಇಲ್ಲಿ ತಂಗಳು ಸಾಧ್ಯವಾಗದ ಸ್ತಿತಿಯಲ್ಲಿರುತ್ತಾರೆ.
all the best Oman ;)
ಪ್ರತ್ಯುತ್ತರಅಳಿಸಿಸುಧಾ,ಒಮಾನಿನ ಬಗ್ಗೆ ನೀನು ಬರೆದಿದ್ದು ಓದಿದೆ. ಮನಸ್ಸಿಗೆ ಒನ್ದು ರೀತಿಯ ಉಮ್ಮಳ ಉ೦ಟಾಯಿತು.
ಪ್ರತ್ಯುತ್ತರಅಳಿಸಿGreat blog Amma. Thank you for mentioning me in the post. :D
ಪ್ರತ್ಯುತ್ತರಅಳಿಸಿ