ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಯೋಗದ ಅತ್ಯಂತ ದೊಡ್ಡ ವರ್ಷಾವಧಿ ಹಬ್ಬ. ವರ್ಷದ ಅತ್ಯಂತ ದೊಡ್ಡ ಹಗಲಾದ ಜೂನ್ 21 ರಂದು ಆಚರಿಸಲಾಗುತ್ತದೆ. 2015 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆರಂಭವಾದ ಈ ಆಚರಣೆಯು ಯೋಗಕ್ಕೆ ಅಂತಾರಾಷ್ಟ್ರೀಯ ಮಹತ್ವವನ್ನು ತಂದುಕೊಟ್ಟಿದೆ. ಈ ವರ್ಷ ಹತ್ತನೆಯ ಯೋಗ ದಿನಾಚರಣೆ. ಈ ಸಂಧರ್ಭದಲ್ಲಿ "ಯೋಗ ತತ್ವ ಮತ್ತು ಬಸವತತ್ವಗಳ ಅನುಸಂಧಾನ" ಎಂಬ ವಿಚಾರದ ಬಗೆಗೆ ೨೦೨೧ರ ಯೋಗ ದಿನಾಚರಣೆಯಾ ಸಂಧರ್ಭದಲ್ಲಿ ನೀಡಿದ ಒಂದು ಭಾಷಣವನ್ನು ಲೇಖನಕ್ಕೆ ಇಳಿಸಿದ್ದೇನೆ. ಅನಾದಿಕಾಲದಿಂದಲೂ ಭಾರತದ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದ "ಯೋಗ ತತ್ವ" ಮತ್ತು ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಕ್ರಾಂತಿಕಾರಿ ವಿಚಾರಗಳೊಂದಿಗೆ ಸಮಾಜದಲ್ಲಿ ಸಮಾನತೆಯನ್ನು ಬಯಸಿದ "ಬಸವತತ್ವ" ಗಳನ್ನು ಜೊತೆಯಾಗಿ ಅವಲೋಕಿಸುವ ಒಂದು ಪ್ರಯತ್ನವನ್ನು ಮಾಡೋಣ
ಯೋಗತತ್ವ:-
ಮೊದಲಿಗೆ ಯೋಗತತ್ವ ಎಂದರೆನೆಂದು ನೋಡೋಣ. ಯೋಗ ಎನ್ನುವುದು ಒಂದು ಅಗಾಧವಾದ ಶಾಸ್ತ್ರ. ಇದರಹಿಂದೆ ದರ್ಶನ ಶಾಸ್ತ್ರವೇ ಇದೆ. ಇದೊಂದು ಜೀವನ ವಿಧಾನ ಜೀವನವಿಡೀ ಸಾಧನೆ ಮಾಡಬೇಕಾದ ಅನುಷ್ಠಾನ ವಿದ್ಯೆ. ಇವತ್ತು ಬಹಳ ಜನಪ್ರಿಯವಾಗಿರುವ ಆಸನಗಳು ಯೋಗಶಾಸ್ತ್ರದ ಅಷ್ಟಾಂಗಗಳಲ್ಲಿ ಒಂದು. ಭಾರತೀಯ ಷಟ್ ದರ್ಶನಗಳೆಂದು ಪ್ರಸಿದ್ದವಾದ ನ್ಯಾಯ, ವೈಶೇಷಿಕ, ಸಾಂಖ್ಯ, ಮೀಮಾಂಸ, ವೇದಾಂತಗಳೊಂದಿಗೆ ಯೋಗಶಾಸ್ತ್ರವೂ ಬರುತ್ತದೆ ಎಂಬ ವಿಚಾರವೇ ಸನಾತನ ಸಂಸ್ಕೃತಿಯಲ್ಲಿ ಈ ಶಾಸ್ತ್ರಕ್ಕಿರುವ ಮಹತ್ವವನ್ನು ತಿಳಿಸುತ್ತದೆ. ಯೋಗವು ಚತುರ್ಮುಖ ಬ್ರಹ್ಮನಿಂದಲೇ ಪರಿಚಯಿಸಲ್ಪಟ್ಟಿತು ಅಂತ ಯೋಗ ಯಾಜ್ಞವಲ್ಕ್ಯನು ಹೇಳುತ್ತಾನೆ. ಆದರೆ ಈ ವಿದ್ಯೆಯನ್ನು ಸೂತ್ರರೂಪದಲ್ಲಿ ಬಂಧಿಸಿ ಕೊಟ್ಟಿರುವುದು ಪತಂಜಲಿ ಮುನಿಯ ಯೋಗಸೂತ್ರ ಎನ್ನುವ ಗ್ರಂಥ. ಈ ಗ್ರಂಥದ ಕಾಲವನ್ನು ಕ್ರಿ.ಪೂ. ೯೦೦ ನೆಯ ಶತಮಾನ , ಅಂದರೆ ಸುಮಾರು 3000 ವರ್ಷಗಳ ಹಿಂದೆ. ಸಮಾಧಿಪಾದ, ಸಾಧನಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದ ಎಂಬ ನಾಲ್ಕು ಅಧ್ಯಾಯಗಳಲ್ಲಿ 195 ಸೂತ್ರಗಳಿರುವ ಈ ಗ್ರಂಥದ ಆಳ ಮತ್ತು ಯೋಗ್ಯತೆಗಳು ಇದಕ್ಕೆ ಬಂದಿರುವ ಅಸಂಖ್ಯಾತ ವ್ಯಾಖ್ಯಾನಗಳನ್ನು ನೋಡಿದರೆ ತಿಳಿಯುತ್ತದೆ.
ಮನಸ್ಸಿನ ನಿಗ್ರಹದ ಮೂಲಕ ನಮ್ಮ ವ್ಯಕ್ತಿತ್ವ ವನ್ನು ವಿಕಸನಗೊಳಿಸುತ್ತಾ ಬ್ರಹ್ಮಾನಂದ ವನ್ನು ಸಾಧಿಸುವುದು ಯೋಗಶಾಸ್ತ್ರದ ಗುರಿ. "ಯೋಗಃ ಚಿತ್ತವೃತ್ತಿ ನಿರೋಧಃ " ಎನ್ನುವುದು ಯೋಗಶಾಸ್ತ್ರವು ಯೋಗ ಎನ್ನುವ ಪದಕ್ಕೆ ಕೊಡುವ ಭಾಷ್ಯ. ಮನುಷ್ಯರಾದ ನಾವು ಚಿತ್ತದ ಮೂಲಕ ಈ ಪ್ರಪಂಚವನ್ನು ತಿಳಿಯುತ್ತೇವೆ. ಈ ಚಿತ್ತದಲ್ಲಿ ಬರುವ ಯೋಚನೆಗಳಿಂದ ಏಳುವ ಅಲೆಗಳೇ ವೃತ್ತಿಗಳು. ನಿರೋಧ ಎಂದರೆ ವ್ಯವಸ್ಥೆಯ ಸಮತೋಲನ ವನ್ನು ಕಾಯ್ದುಕೊಳ್ಳುವುದು. ಅಂದರೆ ಮನಸ್ಸಿನಲ್ಲಿ ಎದ್ದ ಭಾವನೆಗಳನ್ನು ಅಡಗಿಸುವುದು ಯೋಗವಲ್ಲ. ಹೊರಗಿನ ಏರುಪೇರುಗಳಿಂದ ಮನದ ಪ್ರಶಾಂತತೆಯನ್ನು ಕದಡದಂತೆ ಕಾಯುವ ಸ್ಥಿತಿಗೆ ಮನಸ್ಸನ್ನು ಕೊಂಡೊಯ್ಯುವುದೇ ಯೋಗವೆನಿಸುತ್ತದೆ.
ಶ್ರೀ ಕೃಷ್ಣನು ಭಗವದ್ಗಿತೆಯಲ್ಲಿ "ಯೋಗಃ ಕರ್ಮಸು ಕೌಶಲಮ್" ಎನ್ನುತ್ತಾನೆ. ಅಂದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಶುದ್ಧಚಿತ್ತದಿಂದ ಯಜ್ಞ ಭಾವನೆಯಿಂದ ಮಾಡಿ ಅದರ ಮೂಲಕ ಸಾರ್ಥ್ಕಕ್ಯವನ್ನು ಕಾಣುವುದು, ಭಗವಂತನಲ್ಲಿ ಐಕ್ಯನಾಗುವುದೇ ಯೋಗ ಎನ್ನುತ್ತಾನೆ. ಬಸವಣ್ಣನವರ ಕಾಯಕ ತತ್ವವು ಇದೇ ಅಲ್ಲವೇ !!
ಅಸಮಂಜಸದಿ ಸಮನ್ವಯ ಸೂತ್ರ ನಯವ
ವೆಸನಮಯ ಸಂಸಾರದಲಿ ವಿನಯವ ಕಾಣ್ವ
ರಸಿಕತೆಯೇ ಯೋಗವೆಲೊ ಮಂಕುತಿಮ್ಮ'
- ಯಮ ಅಂದರೆ ಬಿಡುವುದು. ಜೀವನದಲ್ಲಿ ನಾವು ಬಿಡಬೇಕಾದ ಗುಣಗಳು ಯಾವುವು ಎಂದು ಇವು ತಿಳಿಸುತ್ತದೆ. ಅಹಿಂಸೆ, ಅಸತ್ಯ ಅಸ್ತೇಯ, ಬ್ರಹ್ಮಚರ್ಯ ಅಪರಿಗ್ರಹಗಳು ಎಲ್ಲರೂ ಜೀವನದಲ್ಲಿ ಪಾಲಿಸಬೇಕಾದ ಸಾಮಾಜಿಕ ಕರ್ತವ್ಯಗಳು, ಸಮಾಜ ಜೀವಿಯಾದ ಮಾನವನ ಸಮಾಜ ಶಾಂತಿಯಿಂದ ಇರಬೇಕಾದರೆ ಎಲ್ಲರೂ ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಹಾಗಾಗಿ ಯಮ ಯೋಗ ಸಾಧನೆಯ ಮೊದಲ ಅಂಗ
- ನಿಯಮಗಳು- ಅಂದರೆ ಹಿಡಿದುಕೊಳ್ಳುವುದು ಅಂತ ಅರ್ಥ. ನಾವು ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳಿವು. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ - ಇವುಗಳು ನಿಯಮಗಳು.
- ಆಸನ- ಧ್ಯಾನದ ಅಭ್ಯಾಸಕ್ಕಾಗಿ ಸ್ಥಿರವಾಗಿ, ಸುಖವಾಗಿ ಕುಳಿತುಕೊಳ್ಳುವ ಅಂಗ ವಿನ್ಯಾಸವೇ ಆಸನಗಳು. ನಮ್ಮ ಪ್ರತಿಯೊಂದು ಆಸನವೂ ಸ್ಥಿರವಾಗಿ ಇರುವಂತೆ ನಾವು ಸಾಧನೆ ಮಾಡಿದಾಗ ಅವು ನಮ್ಮ ಮನಸ್ಸನ್ನು ಹದಗೊಳಿಸಿ ರಜಸ್ಸು ಮತ್ತು ತಮಸ್ ಗುಣಗಳನ್ನು ಕಡಿಮೆ ಮಾಡುವಲ್ಲಿ ಸಹಕಾರವನ್ನು ನೀಡುತ್ತದೆ. ಈ ಹಿನ್ನೆಲೆಯನ್ನೆಲ್ಲ ಅರಿತು ಆಸನಗಳ ಸಾಧನೆ ಮಾಡುವುದು ಬಹಳ ಮುಖ್ಯವೆನಿಸುತ್ತದೆ. ಬಾರಿಯ ಅಂಗ ಸೌಷ್ಠವವನ್ನು ಕಾಯ್ದುಕೊಳ್ಳುವ ದ್ರಿಷ್ಟಿಯಿಂದ ಮಾಡಿದ ಕ್ರಿಯೆಗಳು ವ್ಯಾಯಾಮವೆನಿಸಿಕೊಳ್ಳುತ್ತವೆಯೋ ಹೊರತು ಯೋಗಾಭ್ಯಾಸವೆನಿಸದು. ಯೋಗತತ್ವದ ಅರಿವಿನಿಂದ ; ಯಮ-ನಿಯಮಗಳ ಆಚರಣೆಯಿಂದ ಮಾಡಿದ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುತ್ತದೆ.
- ಪ್ರಾಣಾಯಾಮ-ಉಸಿರಿನ ನಿಯಂತ್ರಣದ ಮೂಲಕ ಮನೋ ನಿಯಂತ್ರಣ ; ಆ ಮೂಲಕ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣಶಕ್ತಿಯನ್ನೂ, ಮನಸ್ಸನ್ನೂ ನಿಗ್ರಹಿಸುವ ಉಪಾಯವೇ ಪ್ರಾಣಾಯಾಮ
- ಪ್ರತ್ಯಾಹಾರ- ಮನಸ್ಸನ್ನು ಮತ್ತು ಇಂದ್ರಿಯಗಳನ್ನು ಪ್ರಾಪಂಚಿಕ ಸೆಳೆತಗಳಿಂದ ವಿಮುಖಗೊಳಿಸುವುದೇ ಪ್ರತ್ಯಾಹಾರ.
- ಧಾರಣ- ಮನಸ್ಸನ್ನು ಒಂದು ಕಡೆಗೆ ಕೇಂದ್ರೀಕ ರಿಸಲು ಮಾಡುವ ತಯಾರಿಯೇ ಧಾರಣ
- ಧ್ಯಾನ - ಮನಸ್ಸನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವುದೇ ಧ್ಯಾನ
- ಸಮಾಧಿ- ನಾವು ಧ್ಯಾನ ಮಾಡಿದ ವಿಷಯದ ಸಾಕ್ಷಾತ್ಕಾರ ವೇ ಸಮಾಧಿ
ಬಸವತತ್ವ & ಯೋಗ:-
![]() |
| ಉದಯವಾಣಿ ದೇಸೀಸ್ವರದಲ್ಲಿ ಪ್ರಕಟವಾದ ಲೇಖನ |


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ