ನಮ್ಮೂರಿಗೆ ಮಗಳ ರಜೆಯೆಂದು ಬಂದೆ. ನಾನು ಇಪ್ಪತ್ತ ಮೂರು ವರ್ಷಗಳನ್ನು ಕಳೆದ ನಮ್ಮ ಊರು ನನಗೆ ಯಾವಾಗಲೂ ಆಪ್ಯಾಯಮಾನ. ಮೊದಲು ಪುಣೆಯಿಂದ ಬಸ್ಸಿನಲ್ಲಿ ಬರುವಾಗಲೂ ತೆಂಗಿನಮರಗಳ ಸಾಲು , ಕೆಂಪು ಮಣ್ಣಿನ ನೆಲ ಬಂದೊಡನೆ ಮನಸ್ಸಿಗೆ ಏನೋ ಸಂತಸ. ಅವಲ್ಲ ನನ್ನವು ಎಂಬ ಭಾವನೆ.ನಾನು ಬೆಳೆದ ಮನೆ,ರಸ್ತೆಗಳು, ನಾನು ಹೋದ ಶಾಲೆ, ನಾನು ಚಿಕ್ಕವಳಿದ್ದಾಗ ಸಾಮಾನು ತರಲು ಹೋದ ಅಂಗಡಿಗಳು- ಪ್ರತಿಯೊಂದು ಕೊಡುವ, ತರುವ ನೆನಪು ಸಾವಿರಾರು.ಆದ್ದರಿಂದಲೇ ಇರಬೇಕು ರಾಮ ಸುವರ್ಣಮಯ ಲಂಕೆಯನ್ನು ಬಿಟ್ಟು ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಷಿ ಎಂದು ತಾಯ್ನಾಡಿಗೆ ಮರಳಿದ್ದು. ಈಗಂತೂ ನಾನಿರುವ ಮರುಭೂಮಿಯ ನಾಡಿಗೂ ನಮ್ಮೂರಿಗೂ ಹೊಲಿಕೆಯೀ ಅಸಾದ್ಯ. ನಮ್ಮೂರಿನಲ್ಲಿ ಹಸಿರಿದೆ, ಎಲ್ಲೆಂದರಲ್ಲಿ ಗಿಡಗಳು ಬೆಳೆಯುತ್ತವೆ,ನಮ್ಮೊರಿನ ಮಳೆಯಂತೂ ಅದರ ಸವಿಯನ್ನು ಸವಿಯಲು ಇಲ್ಲಿಗೆ ಬರಬೇಕು.
| ಎಲ್ಲಿ ಭೂರಮೆ ದೇವಸಂನಿಧಿ ಬಯಸಿ ಭಿಮ್ಮನೆ ಬಂದಳೋ |
ಈಗ ಮಳೆಯೇ ಬರದ ನಾಡಿನಲ್ಲಿರುವ ನನಗೆ ವರ್ಷಕ್ಕೆ ಒಮ್ಮೆ ಮಾತ್ರ ಕೆಲವು ದಿನ ಈ ಮಳೆಯ ಸವಿ ಸಿಗುತ್ತದೆ.ಕಳೆದ ವರ್ಷ ಬರಲಾಗಲಿಲ್ಲ ಆದ್ದರಿಂದ ಎರಡು ವರ್ಷದ ಬಳಿಕ ದೊರೆತಿರುವ ನಮ್ಮೊರಿನ ಮಳೆಯ ಬಗೆಗೆ ಅದು ನನಗೆ ತಂದು ಕೊಡು ನೆನಪುಗಳ ಬಗೆಗೆ ಬರೆಯುತ್ತೇನೆ. ಮಳೆಯನ್ನೂ ನೋಡುವ ಕಾತರದಿಂದ ಬಂದ ನನಗೆ ಬಿಸಿಲು, ಸೆಕೆ ಸ್ವಾಗತಿಸಿತು. ನಾಳೆ ಬರಬಹುದು ಎಂದು ಕಾದೆ. ಎಂಟು ದಿನ ಕಾಯಿಸಿದ ಮಳೆರಾಯ ಕೊನೆಗೂ ಸುರಿಯಲಾರಂಬಿಸಿದ.ಎಷ್ಟು ಸುರಿದನೆಂದರೆ ನಾಲ್ಕು ದಿನ ನಾವು ಸೂರ್ಯನನ್ನು ನೋಡಲೇ ಇಲ್ಲ!! ನೀರು ತುಂಬಿದ ರಸ್ತೆಗಳು, ಕೊಡೆ ಹಿಡಿದು ಹೋಗುವ ಮಕ್ಕಳು, ನಾನೂ ಕಾಲೇಜಿಗೆ ಹೋಗುವ ಆಸೆಯಾಯಿತು.ಮಳೆಯ ರಜೆಗಾಗಿ ನಾವು ಹಂಬಲಿಸುತ್ತಿದ್ದ ದಿನಗಳು ನೆನಪಾಯಿತು. ಶಾಲೆ ಕಾಲೇಜುಗಳನ್ನು ಮುಗಿಸಿ ಮಳೆಯಲ್ಲಿ ನಡೆದು ಬರುವ ಆ ಸಂತೋಷ ಅನುಭವಿಸಿದವರಿಗೆ ಗೊತ್ತು.
ಜೋರಾಗಿ ಮಳೆ ಸುರಿಯ ತೊಡಗಿತೆಂದರೆ ಮಕ್ಕಳಿಗೆ ಶಾಲೆಗೇ ರಜೆ ಕೊಡುವರೇನೋ ಎಂಬ ಆಸೆ. ಮಳೆ ಗಾಳಿಗೆ ದಿನಗಟ್ಟಲೆ ಕರೆಂಟು ಇಲ್ಲದಿರುವುದು ನಮ್ಮೊರಿನ ಮಳೆಗಾಲದಲ್ಲಿ ಸಾಮಾನ್ಯ.ನಾನು ಕಾನೂನು ಪದವಿ ಪಡೆದ ಉದುಪಿಯಂತೂ ಮಳೆಯ ನೆರೆಗೆ ಪ್ರಸಿಧ್ಧ. ಊರಿನ ನಡುವೆ ಇರುವ ಕಲ್ಸಂಕದ ಕಟ್ಟೆ ತುಂಬಿ ನೆರೆ ಬರುತಿತ್ತು. ಮಣಿಪಾಲ ಮತ್ತು ಉಡುಪಿಯ ನಡುವಿನ ಸಂಪರ್ಕ ಕಡಿದು ಹೋಗಿ ಅಲ್ಲಿಂದ ದಿನ ಪಯಣಿಸುವ ವಿದ್ಯಾರ್ಥಿಗಳಾದ ನಾವು ನೆರೆಯಲ್ಲಿ ನಡೆದು ಬಸ್ಸು ತಂಗುದಾಣ ತಲುಪಿ ಊರನ್ನು ಸೇರಬೇಕಿತ್ತು. ಆದರೂ ವಿದ್ಯಾರ್ಥಿ ಜೀವನದ ಈ ಸವಿ ಇನ್ನು ಮರಳಿ ಬಾರದು. ಶಾಲೆಯಿಂದ ನಡೆದು ಬರುವಾಗ ರಸ್ತೆಯ ತುಂಬಾ ಕಾಣುವ ಬಣ್ಣಬಣ್ಣದ ಕೊಡೆಗಳು, ರೈನುಕೊಟುಗಳು ಕಲ್ಪನೆಗೆ ಒಳ್ಳೆಯ ಸ್ಪೂರ್ತಿಯನ್ನು ನೀಡುತ್ತವೆ.ಹಿತ್ತಲಿನಲ್ಲಿ ನೀರು ಸರಿಯಾಗಿ ಹರಿಯಲು ವ್ಯವಸ್ತೆ ಮಾಡುವ ಕೆಲಸ. ಅಮ್ಮನಿಗೂ ದೊಡ್ದಮ್ಮನಿಗೂ ನೀರು ಹಾಯಿಸುವ ಕೆಲಸದಿಂದ ಬಿಡುಗಡೆ.
ಮೇಲಿನದು ನನ್ನ ಮಳೆಗಾಲವಾದರೆ ನನ್ನಜಿಯ ಮಳೆಗಾಲದ ಚಿತ್ರಣವೇ ಬೇರೆ. ನನಗಿಂತಲೂ ಸುಮಾರು ನಲವತ್ತು ವರ್ಷಗಳಷ್ಟು ಮೊದಲು ಬಾಲ್ಯವನ್ನು ಅನುಭವಿಸಿದ ಅವರ ಕಾಲದಲ್ಲಿ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಶಾಲೆಗೇ ಹೋಗುವ ಅವಕಾಶ ಸಿಗುತ್ತಿದುದು ಅಪರೂಪ. ಮಕ್ಕಳೆಂದರೆ ಮನೆಯ ಕೆಲಸಗಳಲ್ಲಿ ಪಾಲ್ಗೊಳ್ಳುವ ಎರಡು ಹೆಚ್ಚಿನ ಕೈಗಳು. ಆದ್ದರಿಂದ ಅವರಿಗೆಲ್ಲ ಮಳೆಗಾಲ ವೆಂದರೆ ಕೈತುಂಬಾ ಕೆಲಸದ ಕಾಲ. ಬೆಳಿಗ್ಗೆ ಎದ್ದು ಚುಮು ಚುಮು ಮಳೆಯಲ್ಲಿ ಗದ್ದೆಗೆ ಕೆಲಸಕ್ಕೆ ಹೋಗುತ್ತಿದ್ದ ಅವರು ಅದನ್ನೆಲ್ಲ ಸಂತೋಷದಿಂದಲೇ ನಮಗೆ ವಿವರಿಸುತ್ತಿದ್ದರು. ಮಳೆ ಬರುವ ಮೊದಲು ಮಾಡುವ ತಯ್ಯಾರಿ, ಮಳೆ ಬಂದ ನಂತರ ಬಿತ್ತುವುದು, ನೆಡುವುದು, ಕಳೆ ಕೀಳುವುದು ಎಲ್ಲದರಲ್ಲೂ ಮಕ್ಕಳಾದ ಇವರ ಪಾತ್ರ ಮಹತ್ತರದ್ದಾಗಿರುತ್ತಿತ್ತಂತೆ !! ನಟ್ಟಿಮಾಡಿದ ನಂತರ ಇರುತ್ತಿದ್ದ ಬಿಡುವಿನ ಸಮಯದಲ್ಲಿ ಅವರು ಮೆಲ್ಲುತ್ತಿದ್ದ ಹಪ್ಪಳ ಸಂಡಿಗೆಯ ಸಂಬ್ರಮವನ್ನು ಅವರ ಬಾಯಿಯಲ್ಲಿಯೇ ಕೇಳಬೇಕು.
ಈಗ ಮರುಭೂಮಿಯ ನಾಡಿನಲ್ಲಿ ಬೆಳೆಯುತ್ತಿರುವ ನನ್ನ ಮಗಳಿಗಂತೂ ಮಳೆಗಾಲವೆಂದರೆ ಕುಂದಾಪುರಕ್ಕೆ ಹೋದಾಗ ಸಿಗುವ ಮೋಜಿನ ಸಮಯ. ಮೋಜಿಗೆಂದು ಮಳೆಯಲ್ಲಿ ನೆನೆಯುವುದು, ಕಾಗದದ ದೋಣಿಗಳನ್ನು ಮಾಡಿ ನೀರಿನಲ್ಲಿ ಬಿಡುವುದು....ಇವಲ್ಲದೆ ಮಳೆಗಾಲದ ಇನ್ನಾವ ಚಿತ್ರಣವೂ ಅವಳಿಗೆ ಬರಲಾರದು!! ತಲೆಮಾರಿನಿದ ತಲೆಮಾರು ಬದಲಾದರೂ ಮಳೆರಾಯ ಮಾತ್ರ ಯಾರ ಪರಿವೆಯೂ ಇಲ್ಲದೆ ಪ್ರತಿ ವರ್ಷವೂ ಬರುತ್ತಾನೆ, ಹೊಸ ಅನುಭವಗಳೊಂದಿಗೆ, ಹೊಸರಿತಿಯ ಜನರಿಗಾಗಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ