ನನ್ನ ಜೀವನದ ಅನುಭವಗಳನ್ನು ದಾಕಲಿಸುವುದು ನನ್ನ ಬ್ಲಾಗಿನ ಮುಖ್ಯ ಉದ್ದೇಶ. ಅಂತೆಯೇ, ನನ್ನ ವಿವಿದ ದೇಶದ ಅನುಭವಗಳನ್ನು ದಾಕಲಿಸುತ್ತ ಬರುತ್ತಿರುವ ನಾನು ಈಗ ಸೌದಿ ಅರೇಬಿಯಾದ ನನ್ನ ಒಂದು ವರ್ಷದ ಅನುಭವಗಳನ್ನು ಬರೆಯಲು ಹೊರಟಿದ್ದೇನೆ. ಜೀವನದ ಬಗೆಗೆ ಸರಿಯಾದ ದ್ರಷ್ಟಿಕೋನ ಬೆಳೆಸಿಕೊಳ್ಳಲು ಪ್ರಪಂಚದ ಎಲ್ಲರೂ ಈ ದೇಶಕ್ಕೆ ಭೇಟಿ ಕೊಡಬೇಕು, ಅಷ್ಟು ಆಸಕ್ತಿದಾಯಕ, ವಿಶಿಷ್ಟ ಈ ಜಾಗ!! ಇತ್ತಿಚೀನ ಪತ್ರಿಕೆಗಳು ಅರಬ್ ಜನರ ಪ್ರತಿಭಟನೆಗಳ ಸುದ್ದಿಯಲ್ಲಿ ತುಂಬಿ ಹೋಗಿರುತ್ತದೆ. ಅದರ ನಡುವೆ ಸೌದಿ ಮಹಿಳೆಯರೂ ತಮ್ಮ ಹಕ್ಕಿಗಾಗಿ ಹೋರಾಡುತ್ತ್ತಿರುವ ಸುದ್ದಿಗಳನ್ನು ಓದಿ ನನ್ನ ಸೌದಿಯ ಅನುಭವಗಳ ನೆನಪು ನನ್ನನು ಬಹಳವಾಗಿ ಕಾಡಲು ತೊಡಗಿವೆ. ಅವನ್ನು ಬರಹ ರೂಪಕ್ಕಿಲಿಸಲು ಇದೆ ಸಕಾಲವೆಂದು ಸುರು ಮಾಡಿದ್ದೇನೆ.
ವಕೀಲೆಯಾಗಿ ಗುರುತಿಸಿಕೊಳ್ಳಬೇಕು ಎಂಬ ಬಯಕೆಯಿಂದ ಕಾನೂನು ಪದವಿ ಪಡೆದು, ಅದರಲ್ಲಿ ಉನ್ನತ ವ್ಯಾಸಂಗ ಮಾಡಿ, ಕೊನೆಗೆ ಬಂದಿಳಿದಿದ್ದು ಸೌದಿ ಅರೇಬಿಯಾದ ಪಶ್ಚಿಮದ ಕೆಂಪು ಸಮುದ್ರದ ತೀರದಲ್ಲಿರುವ ಯಾನ್ ಬೂ ಎಂಬ ಚಿಕ್ಕ ಪಟ್ಟಣದಲ್ಲಿ.ಮೊದಲ ಬಾರಿಗೆ ವಿದೇಶಕ್ಕೆ ಹೊರಟಿದ್ದು, ಅದೂ ಸೌದಿ ಅರೇಬಿಯಾಕ್ಕೆ!! ಯಾವುದೇ ನಿರಿಕ್ಷೆಗಳಿಲ್ಲದೆಯೇ, ಆರು ತಿಂಗಳ ಹಿಂದೆಯೇ ಇಲ್ಲಿಗೆ ಬಂದಿದ್ದ ಪತಿಯನ್ನು ಸೇರಿಕೊಳ್ಳುವ ಉದ್ದೇಶದಿಂದ ಮಗಳೊಂದಿಗೆ ಬಂದಿಳಿದೆ.ಇಳಿದೊಡನೆ ಶಶಿ ಹಾಕಿಕೊಳ್ಳಲು ಬುರ್ಖಾ ಕೊಟ್ಟಾಗಲೂ ನನಗೆ ನಾನು ಬಂದಿಳಿದ ದೇಶದ ಕಟ್ಟುಪಾಡುಗಳು ಇಷ್ಟು ಶಿಸ್ತಿನಿಂದ ಪಾಲಿಸ ಬೇಕಾದ ನಿಯಮಗಳೆಂಬ ಅರಿವಾಗಲಿ ಗೊತ್ತಾಗಲಿಲ್ಲ. ಬುರ್ಖಾ ದರಿಸದೆ ಹಾಗೆಯೇ ಕಾರಿನಲ್ಲಿ ಕುಳಿತು ಜೆದ್ದದಿಂದ ಯಾನ್ ಬೂಗೆ ಬಂದಿಳಿದೆವು.ನಮಗೆಂದು ಶಶಿಯ ಕಂಪನಿಯವರು ನೀಡಿದ್ದ ಮನೆಯೇನೂ ಸುಂದರವಾಗಿತ್ತು. ಆದರೆ ಇಲ್ಲಿನ ಬುರ್ಖಾ ಹಾಕಿಕೊಳ್ಳಬೇಕಾದ ಅನಿವಾರ್ಯತೆ ನನ್ನನ್ನು ಗಾಬರಿಗೊಳಿಸಿತ್ತು. ಬುರ್ಖಾ ಹಾಕಿಕೊಳ್ಳಲು ಏನಂತೆ! ಹಾಕಿಕೊಂಡರಾಯಿತು, ಎಂದುಕೊಂಡು ಇಲ್ಲಿಗೆ; ಲಘುವಾಗಿ ಇಲ್ಲಿಗೆ ಬಂದ ನನಗೆ ಈಗ ಪರಿಸ್ತಿತಿಯ ಗಂಭೀರತೆ ಅರ್ಥವಾಯಿತು. ಆದರೆ ಇಲ್ಲಿ ಬಹಳ ಭಾರತಿಯರಿರುವುದು, ಅದರಲ್ಲಿ ಹಿಂದುಗಳಲ್ಲೆಲರೂ ಬುರ್ಖಾ ಹಾಕುವುದು ನೋಡಿ ನಿದಾನವಾಗಿ ಅದಕ್ಕೆ ಹೊಂದಿಕೊಳ್ಳತೊಡಗಿದೆ.
ಕಿಂಗ್ದೊಂ ಆಫ್ ಸೌದಿ ಅರೇಬಿಯ '- ಇಪ್ಪತ್ತನೆಯ ಶತಮಾನದ ಒಂದು ಅತ್ಯಾದುನಿಕ ರಾಜ್ಯ.ಇಲ್ಲಿನ ಆಡಳಿತವನ್ನು ಪಿತ್ರಪ್ರಧಾನ ರಾಜ ವಂಶದವರು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ರಾಜನು ಮುಸ್ಲಿಮರ ಎರಡು ಪವಿತ್ರ ಮಸಿದಿಗಳಾದ ಮಕ್ಕ ಮತ್ತು ಮದಿನಾದ ರಕ್ಷಕ. ಇಲ್ಲಿನ ಕಾನೂನು ಇಸ್ಲಾಮಿಕ್ ಕಾನೂನು. ಇವರು ಇಸ್ಲಾಮನ್ನು ಅನುಸರಿಸುವ ರೀತಿಯೇ ವಿಶಿಷ್ಟ. ಇಲ್ಲಿ ಮಹಿಳೆಯರಿಗೆ ಬಹಳ ಕಟ್ಟುಪಾಡುಗಳು-ಹೆಂಗಸರು ಹೊರಕ್ಕೆ ಹೋಗಬೇಕಾದರೆ ಬುರ್ಖಾ ದರಿಸಬೇಕು; ಹೆಂಗಸರು ಹೊರಾಗೆ ಕೆಲಸ ಮಾಡುವಂತಿಲ್ಲ; ಹೆಂಗಸರು ಒಬ್ಬರೇ ಹೊರಗಡೆ ಎಲ್ಲಿಗೂ ಹೋಗಬಾರದು; ಅಂದರೆ ತಮ್ಮ ಗಂಡ ಅಥವಾ ಮಗನೊಂದಿಗೆ ಮಾತ್ರ ಹೊರಗೆ ಹೋಗಬಹುದು,....... ಹೀಗೆ . ಅವುಗಳನ್ನು ಕಾರ್ಯರೂಪಕ್ಕೆ ತರಲು 'ಮುತ್ತಾವ' ನೆಂಬ ಆರಕ್ಷಕ. ಈತ ಯಾರಾದರೂ ಬುರ್ಖಾ ದರಿಸದೆ, ಅಥವಾ ತಲೆಯ ಕೊದಲನ್ನು ಮುಚ್ಚದೆ ಹೋಗುತ್ತಿದ್ದರೆ ತಡೆದು ನಿಲ್ಲಿಸಿ ತಲೆಯ ಮೇಲೆ ಬಟ್ಟೆ ಹಾಕಿ ಮುಚ್ಚಿಕೊಳ್ಳಲು ಹೇಳುತ್ತಾನೆ.
ಇಲ್ಲಿನ ಕಾನೂನಿನ ಪ್ರಕಾರ ಇಲ್ಲಿ ಚಿತ್ರ ಮಂದಿರಗಳಾಗಲಿ, ಮನರಂಜನೆಯ ಇತರ ತಾಣಗಳಾಗಲಿ ಇಲ್ಲ. ಏನೇ ಮಾಡಬೇಕಾದರೂ ಅದಕ್ಕೆ ಒಂದು ನಿಯಮವಿರುತ್ತದೆ. ಅದಕ್ಕೆ ಸರಿಯಾಗಿಯೇ ಮಾಡಬೇಕು. ಮುಸಲ್ಮಾನರ ದಿನದ ಐದು ಬಾರಿಯ ನಮಾಜಿಗೆ ಇಲ್ಲಿ ಸಲಾ ಎನ್ನುತ್ತಾರೆ. ಈ ಪ್ರಾರ್ಥನೆಯ ಸಮಯದ ಸುತ್ತಲೇ ಇವರ ದಿನಚರಿ ಸುತ್ತುತ್ತದೆ, ಇಡಿ ದೇಶವೇ ಆ ಸಮಯದ ಆಧಾರದ ಮೇಲೆ ನಡೆಯುತ್ತದೆ ಎನ್ನಬಹುದು. ಪ್ರತಿ ಪ್ರಾರ್ತನೆಯ ಕರೆ ಮಸೀದಿಯ ದ್ವನಿವರ್ಧಕದಲ್ಲಿ ಕೇಳಿದೊಡನೆ ಎಲ್ಲ ಅಂಗಡಿ ಮುಂಗಟ್ಟುಗಳು ವ್ಯವಹಾರ ನಿಲ್ಲಿಸಿ ಬಾಗಿಲು ಮುಚ್ಚುತ್ತಾರೆ. ಒಳಗಿದ್ದ ಗ್ರಾಹಕರು ಹೊರಗೆ ಹೋಗಬೇಕು!! ಅಲ್ಲದೆ ಮುತ್ತವಗಳು ಎಲ್ಲಾ ಮುಸಲ್ಮಾನರೂ ಪ್ರಾರ್ಥನೆಗೆ ಹೋಗಿದ್ದಾರ ಎಂದು ಮೇಲ್ವಿಚಾರಣೆ ನಡೆಸುತ್ತಿರುತ್ತಾರೆ. ಹೊರಗಿದ್ದ ಜನರ ಧರ್ಮ ಕೇಳಿ, ಅವರು ಮುಸಲ್ಮಾನರಾದರೆ ಪ್ರಾರ್ಥನೆಗೆ ಹೋಗುವಂತೆ ಕಳಿಸುತ್ತಾರೆ.
ಬೇರೆ ಧರ್ಮೀಯರು ಪ್ರಾರ್ಥನೆ ಮುಗಿದು ಬಾಗಿಲು ತೆಗೆಯುವ ತನಕ ಹೊರಗೆ ಕಾಯಬೇಕಾಗುತ್ತದೆ. ಅಲ್ಲದೆ ಇಲ್ಲಿ ಇಸ್ಲಾಂ ಅಲ್ಲದೆ ಬೇರೆ ಧರ್ಮಗಳ ಆಚರಣೆ ಸಾರ್ವಜನಿಕವಾಗಿ ಮಾಡುವಂತಿಲ್ಲ. ಆದ್ದರಿಂದ ಕ್ರ್ಯಸ್ತರ ಚರ್ಚುಗಲಾಗಲಿ, ಹಿಂದೂಗಳ ದೇವಾಲಯಗಲಾಗಲಿ ಇಲ್ಲ. ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳಗಳಾದ ಮಕ್ಕ ಮತ್ತು ಮದಿನಾಗಳಿಗೆ ಮುಸ್ಲ್ಮಾನರಲ್ಲದವರಿಗೆ ಪ್ರವೇಶವಿಲ್ಲ.ಈ ದೇಶ ಪ್ರವಾಸವನ್ನು ಪ್ರೋತ್ಸಾಹಿಸುವುದಿಲ್ಲ. ಆದ್ದರಿಂದ ಇಲ್ಲಿ ಪ್ರವಾಸಿಗರಾಗಿ ಹೋಗುವಂತಿಲ್ಲ, ನಾವು ಅಲ್ಲಿ ಇದ್ದೇವೆಂದು ನಮ ತಂದೆ ತಾಯಿಯರನ್ನಗಲಿ, ಇನ್ನಾವುದೇ ಸಂದಿಕರನ್ನಗಲಿ ಅಲ್ಲಿಗೆ ಬರಹೇಳುವಂತಿಲ್ಲ!
ಇಷ್ಟೆಲ್ಲಾ ಕಟ್ಟು ಕಟ್ಟಳೆಗಳ ನಡುವೆಯೂ ಇಲ್ಲಿ ಲಕ್ಷಾಂತರ ಮಂದಿ ವಿದೇಶಿಯರು,ಪೂರ್ವ ಪಶ್ಚಿಮಗಳ ಬೇದವಿಲ್ಲದೆ ಉದ್ಯೋಗ ಅರಸಿಕೊಂಡು ಬಂದಿದ್ದಾರೆ, ಬರುತ್ತಿದ್ದಾರೆ; ಆ ನಿಯಮಾವಳಿಗಳ ನಡುವೆಯೂ ಸಂತೋಷದಿಂದ ಜೀವನ ಕಳೆಯುವ ವಿಧಾನವನ್ನು ತಿಳಿದುಕೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ