ಕನ್ನಡ ಭಾಷೆ ನಮ್ಮ ಜೀವನದ ಅಂಗ, ನಮ್ಮ identity ಎಂಬ ಅರಿವಾಗಿದ್ದು ನಮ್ಮ ದೇಶವನ್ನು ಬಿಟ್ಟಾಗಲೇ. ನಮ್ಮ ಜನರೊಂದಿಗೆ ಬೆರೆಯಬೇಕು, ನಮ್ಮ ಮಕ್ಕಳಿಗೆ ನಮ್ಮ ಭಾಷೆಯನ್ನೂ ಸರಿಯಾಗಿ ಕಲಿಸಬೇಕು ಎಂಬ ತುಡಿತ ನಾವು ನಮ್ಮ ನೆಲದಿಂದ ದೂರವಾದಾಗ ಜಾಸ್ತಿಯಾಗುತ್ತದೆ ಎನಿಸುತ್ತದೆ.ಎಲ್ಲರಿಗೂ ಈ ಭಾವನೆಗಳು ಬರಲೇಬೇಕೆಂದಿಲ್ಲ! ಆದರೆ ಹೊರಬಂದಾಗ ಇಂತಹ ಜನರು ಒಟ್ಟಾಗುತ್ತಾರೆ . ಅವರ ಪ್ರಯತ್ನಗಳ ಪಲವೇ ಹಲವು ಕನ್ನಡ ಸಂಗಟ ನೆಗಳು ವಿಶ್ವದೆಲ್ಲೆಡೆ ತಲೆ ಎತ್ತಲು ಕಾರಣ.
ನಾನು ಕರ್ನಾಟಕವನ್ನು ಬಿಟ್ಟು ಹೊರಗಿದ್ದು ಈಗ ಹದಿನೈದು ವರ್ಷಗಳೇ ಕಳೆದಿವೆ. ಈ ಹದಿನೈದು ವರ್ಷಗಳಲ್ಲಿ ೮ ವರ್ಷಗಳನ್ನು ಹೊರನಾಡ ಕನ್ನಡಿಗಳಾಗಿ ಕಳೆದಿದ್ದೇನೆ ಮತ್ತು ಉಳಿದ ವರ್ಷಗಳನ್ನು ಹೊರದೇಶದ ಕನ್ನಡಿಗಳಾಗಿ ಕಳೆದಿದ್ದ್ದೇನೆ. ಆದರೆ ಅಷ್ಟೂ ವರ್ಷ ಕನ್ನಡದೊಂದಿಗಿನ ನನ್ನ ನಂಟು ಗಾಢವಾಗುತ್ತ ಬಂದಿದೆ, ನನ್ನ ಭಾಷೆಯ ಬಗೆಗಿನ ನನ್ನ ಅಭಿಮಾನವನ್ನು ಹೆಚ್ಚಿಸಿವೆ.
ನನ್ನ ದಾಂಪತ್ಯ ಜೀವನದ ಮೊದಲ ವರ್ಷಗಳನ್ನು ಕಳೆದ ಪುಣೆ ನನಗೆ ಮೊದಲಿಗೆ ಕನ್ನಡ ಸಂಘದ ಪರಿಚಯ ಮಾಡಿಸಿತು. ಅಲ್ಲಿನ ಕನ್ನಡ ಸಂಘದ ಸಕ್ರಿಯ ಸದಸ್ಯೆಯಾಗಿದ್ದ ನಾನು ಅಲ್ಲಿನ ಕನ್ನಡ ಗ್ರಂಥಾಲಯ ಸಂಪೂರ್ಣ ಲಾಭವನ್ನು ಪಡೆದವರಲ್ಲಿ ಒಬ್ಬಳಾಗಿದ್ದೆ. ಭೈರಪ್ಪನವರ ತಂತು, ಮಂದ್ರ ಮುಂತಾದ ಕೃತಿಗಳನ್ನು ಓದುವ ಅವಕಾಶ, ಹೊರರಾಜ್ಯದಲ್ಲಿದ್ದೂ ಕನ್ನಡದ ಪತ್ರಿಕೆಗಳನ್ನು ಓದುವ ಭಾಗ್ಯ ನನ್ನದಾಗಿತ್ತು. ಕನ್ನಡ ಮಹಿಳೆಯರ ಭಜನಾ ತಂಡವೂ ಇತ್ತು, ನಾವೆಲ್ಲಾ ಕೂಡಿ ಗಣಪತಿ ಹಬ್ಬದಲ್ಲಿ ಕನ್ನಡ ದಾಸರ ಪದಗಳನ್ನು ಹಾಡುತ್ತಲೂ ಇದ್ದೆವು. ಇವೆಲ್ಲವನ್ನೂ ಬಿಟ್ಟು ವಿದೇಶಗಳನ್ನು ನೋಡೋಣವೆಂದು ಸೌದಿ ಅರೇಬಿಯಾಕ್ಕೆ ಬಂದೆವು.
ಸೌದಿಯಲ್ಲಿ ಕನ್ನಡ ಶಿಕ್ಷಕಿಯಾಗಿ:
ಐದು ವರ್ಷದ ಮಗಳನ್ನು ಶಾಲೆಗೇ ಸೇರಿಸಲು ನಾವಿದ್ದ ಯಾನ್ಬು ಎಂಬ ಹಳ್ಳಿಯಲ್ಲಿದ್ದ ಏಕಮಾತ್ರ ಭಾರತಿಯ ಶಾಲೆಗೇ ಹೋದಾಗ ಅಲ್ಲಿ ಶಿಕ್ಷಕಿಯರ ಅಗತ್ಯವಿದೆ ಎಂಬ ವಿಚಾರ ತಿಳಿಯಿತು. ನಾನೊಂದು ಅರ್ಜಿ ಗುಜರಾಯಿಸಿದೆ, ಇರಲಿ ನೋಡೋಣ ಎಂದು. ನನ್ನ ಅಚ್ಚರಿಗೆ ಒಂದು ತಿಂಗಳಲ್ಲಿ ನನಗೆ ಸಂದರ್ಶನಕ್ಕೆ ಕರೆ ಬಂತು, ಕೆಲಸವೂ ಸಿಕ್ಕಿತು. ಚಿಕ್ಕ ಮಕ್ಕಳ ಶಿಕ್ಷಕಿಯಾಗಿ ನನ್ನ ನೋಂದಾವಣೆಯಾಯಿತು . ಅಲ್ಲದೆ ಅಲ್ಲಿದ್ದ ಕನ್ನಡ ಮಕ್ಕಳಿಗೆ ಐಚ್ಚಿಕ ವಿಷಯವಾಗಿ ಕನ್ನಡ ಕಲಿಸುವ ಜವಾಬ್ದಾರಿಯೂ ನನಗೆ ಒದಗಿತು. ಇದು ಅಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ ಅವಧಿಯ ಅತ್ಯಂತ ಆನಂದದಾಯಕ ಭಾಗವಾಗಿತ್ತು. ನನ್ನ ಮಗಳ ಕನ್ನಡ ಕಲಿಕೆಯ ಬದ್ರ ಬುನಾದಿ ಇಲ್ಲಿ ಆಯಿತು.
ಮಕ್ಕಳಿಗೆ ''ಅ ಆ'' ದೊಂದಿಗೆ ಕೆಲವು ಕನ್ನಡ ಕವಿತೆಗಳನ್ನು ಹೇಳಿಕೊಟ್ಟು ಅನಂದಿಸಿದ್ದಲ್ಲದೆ, ಇಲ್ಲಿನ ಶಾಲೆಯ ವಾರ್ಷಿಕೋತ್ಸವದಲ್ಲಿ ನಮ್ಮ ಕನ್ನಡ ಮಕ್ಕಳಿಂದ ನಿಸ್ಸಾರ್ ಅಹ್ಮದ್ ಅವರ ನಿತ್ಯೋತ್ಸವ ವನ್ನು ಹಾಡಿಸಿ, ಕನ್ನಡದ ಒಂದು ಜಾನಪದ ಹಾಡಿಗೆ ನ್ರತ್ಯ ಮಾಡಿಸಿದೆ. ನನ್ನೊಳಗಿನ ಶಿಕ್ಷಕಿಯನ್ನು ಕಂಡು ಕೊಳ್ಳಲು ಈ ಅವಕಾಶ ನನಗೆ ಸಹಾಯ ಮಾಡಿತು.
ಅಷ್ಟರಲ್ಲಿ ನನ್ನ ಪತಿಗೆ ಈ ಮರಳುಗಾಡಿನ ಇನ್ನೊಂದು ದೇಶವಾದ ಒಮಾನಿನ ರಾಜಧಾನಿ ಮಸ್ಕತ್ತಿನಲ್ಲಿ ಹೊಸ ಕೆಲಸದ ಅವಕಾಶ ದೊರೆಯಿತು. ಮೊದಲು ಸಿಕ್ಕಿದ ಅವಕಾಶದಲ್ಲಿ ಈ ಕಟ್ಟುನಿಟ್ಟಿನ ಸೌದಿ ಅರಬಿಯಾವನ್ನು ಬಿಡೋಣ, ಮಗಳನ್ನು ಸ್ವಲ್ಪ ಒಳ್ಳೆಯ ವಾತಾವರಣದಲ್ಲಿ ಬೆಳೆಸೋಣ ಎಂದುಕೊಂಡು ನಮ್ಮ 15 ತಿಂಗಳ ಸೌದಿ ವಾಸವನ್ನು ಅಂತ್ಯಗೊಳಿಸಿ, ಗಂಟು ಮೂಟೆ ಕಟ್ಟಿಕೊಂಡು ಹೊಸ ನಾಡಿಗೆ ಹೊರೆಟೆವು.
ಮಸ್ಕತ್ ಕನ್ನಡ ಸಂಘ ಮತ್ತು ನಾನು:
| ಸಂಪೂರ್ಣ ತಂಡ |
ಹೊಸ ದೇಶ,ಹೊಸ ಊರು; ಯಾರ ಪರಿಚಯವೂ ಇಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ಕಾಡುವ ಏಕಾಕಿತನವನ್ನು ಕೊನೆಗಾಣಿಸಲು ನಾವು ನಮ್ಮ ಸಂಘ ಸಂಸ್ಥೆಗ ಳತ್ತ ತಿರುಗುತ್ತೇವೆ. ಅಂತೆಯೇ ನಾವು ಮಸ್ಕತ್ತಿನಲ್ಲಿ ಬಲವಾಗಿ ನೆವೂರಿರುವ ಬಾರಿತೀಯ ಸಮುದಾಯದ ಭಾರತೀಯ ಸಂಘ ಮಸ್ಕತ್ತಿನ, ಇಲ್ಲಿನ ಕನ್ನಡ ಸಂಘದ ಸದಸ್ಯತ್ವವನ್ನು ತೆಗೆದುಕೊಂಡೆವು. ಭಾರತಿಯ ಸಂಘದ ಚಟುವಟಿಕೆಗಳು ನಮ್ಮನ್ನು ನಿರಾಸೆಗೊಳಿಸಿದರೂ, ಕನ್ನಡ ಸಂಘ ನಮಗೆ ಚಟುವಟಿಕೆಗಳ ಬಾಗಿಲನ್ನೇ ತೆರೆಯಿತು. ಇಲ್ಲಿನ ಸಂಘ ಕ್ರೀಡೆ, ಸಾಹಿತ್ಯ, ಸಾಂಸ್ಕ್ರತಿಕ , ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಸಕ್ರಿಯವಾಗಿದೆ.ನಾನು ಮತ್ತು ನನ್ನ ಮಗಳು ಇವರು ಏರ್ಪಡಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಬಾಗವಹಿಸುವ ಕಡ್ಡಾಯ ನಿಯಮವನ್ನು ಪಾಲಿಸಿದೆವು. ಇದರ ಪಲವೆಂದರೆ ನಮ್ಮ ನಾಲ್ಕು ವರ್ಷದ ಸದಸ್ಯತ್ವದ ಅವಧಿಯಲ್ಲಿ ನಾವು ಪಟ್ಟಿ ಮಾಡಲು ಸಾದ್ಯವಿಲ್ಲದಷ್ಟು ಸಾಂಸ್ಕ್ರತಿಕ , ಸಾಹಿತ್ಯಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಿದ್ದು !!
| ಅಮ್ಮ &ಮಗಳು ನ್ರತ್ಯದ ಭಂಗಿ |
ಇಪ್ಪತ್ತು ವರ್ಷಗಳ ನಂತರ ನಾನು ಭರತ ನಾಟ್ಯವನ್ನು ಮಗಳೊಂದಿಗೆ ನರ್ತಿಸುವಂತಾಗಿದ್ದು, ಕನ್ನಡ ಸಂಘದ ಕಾರ್ಯಕ್ರಮಗಳ ನಿರೂಪಕಿಯಾಗಿ ಬೆಳೆದಿದ್ದು - ನನಗೆ ಗೊತ್ತಿಲ್ಲದ ನನ್ನ ವ್ಯಕ್ತಿತ್ವದ ಮಜಲುಗಳನ್ನು ಈ ಕನ್ನಡಸಂಘ ನನಗೆ ಪರಿಚಯಿಸಿತು. ನನ್ನ ಮಗಳಂತೂ ನಟನೆ, ಮಾತುಗಾರಿಕೆ, ನ್ರತ್ಯ, ಕನ್ನಡ ಕಲಿಕೆ- ಹೀಗೆ ಅವಳ ಹತ್ತು ಹಲವು ಪ್ರತಿಭೆಯನ್ನು ಗುರುತಿಸಿಕೊಳ್ಳುವಂತಾಗಿದ್ದು - ಇವೆಲ್ಲ ನಮ್ಮ ಮಸ್ಕತ್ ಕನ್ನಡ ಸಂಘದ ಒಡನಾಟದ ಮುಖ್ಯ ಅಂಶಗಳು ಎನ್ನಬಹುದು.
ಇಲ್ಲಿನ ಕನ್ನಡ ಸಂಘದ ಕನ್ನಡ ತರಗತಿಯಲ್ಲಿ ಶಿಕ್ಷಕಿಯಾಗಿದ್ದು ಒಂದು ಉತ್ತಮ ಅನುಭವ. ದೂರ ದೇಶದಲ್ಲಿ ಬಂದು ನಮ್ಮ ಭಾಷೆಯನ್ನು ಕಲಿಸುವುದು ಒಂದು ಮನಸ್ಸಿಗೆ ಸಂತೋಷ ಕೊಡುವ ಚಟುವಟಿಕೆ. ಅಂತೆಯೇ ನಾನು ಈ ಚಟುವಟಿಕೆಯಲ್ಲಿ ತೊಡಗಿಕೊಂಡೆ. ಕಲಿಸುತ್ತಾ ಹೋದಂತೆ ನಮ್ಮ ಮಕ್ಕಳ ಉತ್ಸಾಹ ನನ್ನನ್ನು ಹುರಿದುಂಬಿಸುತ್ತಿತ್ತು . ನಾನು ಓದಿ ಮರೆತಿದ್ದ ಹಳಗನ್ನಡ , ನಡುಗನ್ನಡವನನೆಲ್ಲ ನೆನಪಿಸಿಕೊಂಡೆ ಮತ್ತು ಮಕ್ಕಳಿಗೆ ಕಲಿಸಲಾರಂಭಿಸಿದೆ . ನನ್ನ ಶಿಷ್ಯರು ಸೇರಿ ಕುಮಾರವ್ಯಾಸ ಭಾರತದ ಒಂದು ಭಾಗವನ್ನು ನಿರರ್ಗಳವಾಗಿ ವಾಚಿಸಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ.
| ಪುಣ್ಯಕೋಟಿ ಯಾಗಿ ಪ್ರೀತಿ |
| ಪುಣ್ಯಕೋಟಿ ಯಾಗಿ ಪ್ರೀತಿ |
ಕನ್ನಡ ಸಂಘದೊಂದಿಗಿನ ನಮ್ಮ ಚಟುವಟಿಕೆಗಳಲ್ಲಿ ನಮ್ಮ ಇನ್ನೊದು ಅವಿಸ್ಮರಣೀ ಯ ಆನುಭವ ವೆಂದರೆ ಇಲ್ಲಿಗೆ ಪ್ರಭಾತ ಕಲಾವಿದರ ಭೇಟಿ . ಪ್ರಭಾತ್ ಕಲಾವಿದರು ಇಲ್ಲಿನ ಕೆಲವು ಸ್ಥಳೀಯ ಕಲಾವಿದರನ್ನು ಅವರ ಕಿನ್ದರಿಜೋಗಿಗಾಗಿ ಬೇಕೆಂದರು. ಉತ್ಸಾಹಿ ಸದಸ್ಯರೆಲ್ಲ ಸೇರಿಕೊಂಡೆವು. ಅವರ "ಕರ್ನಾಟಕ ವೈಭವ' ರೂಪಕದ ಭಾಗವಾದ "ಪುಣ್ಯಕೋಟಿಯ ಕರುವಾಗಿ ನನ್ನ ಮಗಳು ಪ್ರೀತಿ ಆಯ್ಕೆಯಾದಳು. 8 ವರ್ಷದ ಬಾಲಕಿಯಾದ ಅವಳಿಗೆ ಎರಡು ದಿನಗಳಲ್ಲಿ ಕಲಿತು ಆ ನುರಿತ ಕಲಾವಿದರಿಗೆ ಸರಿಸಮನಾಗಿ ನಟಿಸುವುದು ಅವಳಿಗೊಂದು ಸವಾಲಾಗಿತ್ತು. ಆದರೆ ಅವಳು ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮನಗೆದ್ದಳು.
ಇನ್ನೂ ಈ ಸಂಘದಿಂದ ಏನನ್ನೆಲ್ಲ ಸಾದಿಸುತ್ತೆವೂ ಕಾಡು ನೋಡೋಣ. ಜೈ ಕರ್ನಾಟಕ.
U r doing a great job...keep it up. good luck to the Kannada Sangha..
ಪ್ರತ್ಯುತ್ತರಅಳಿಸಿ:-)
malathi S
Very nice of Malathi to read & appreciate my work. I'm very excited when somebody reads my article. Thank you
ಅಳಿಸಿಮಸ್ಕತ್ ನಲ್ಲಿ ಕನ್ನಡ ಬ್ಲಾಗ್ ಬರೆಯೋರು ಯಾರು ಇಲ್ಲ ಅಂದ್ಕೊಂಡಿದ್ದೆ, ನಿಮ್ಮ ಬ್ಲಾಗ್ ನೋಡಿ ಖುಷಿ ಯಾಯ್ತು ಮೇಡಂ. ಚೆನ್ನಾಗಿ ಬರೆದಿದ್ದೀರಾ, ಹಾಗೆ ಮುಂದುವರೆಸಿ, ನನ್ನ ಬ್ಲಾಗ್ ಗಳಿಗೆ ಸಹ ಭೇಟಿಕೊಡಿ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿhttp://ranganatha-ps.blogspot.com
http://omankannadigaru.blogspot.com/
Join us in facebook for Oman kannadigaru group.
http://www.facebook.com/groups/164193920330519/