ಇಷ್ಟು ವರ್ಷಗಳೂ ನನ್ನದು ಒಂದೇ ಗೋಳು . ಮಗಳ ಮೇಲೆ, ಗಂಡನ ಮೇಲೆ ಸಿಟ್ಟು ಬಂದಾಗಲೆಲ್ಲ , ನಾನೊಬ್ಬಳು ಇಲ್ಲಿ ಬಿಟ್ಟಿ ಇದ್ದೀನಿ; ನಾನು ಓದಿದಕ್ಕೆ ಕೆಲಸ ಮಾಡಿದರೆ ಇಷ್ಟು ಹೊತ್ತಿಗೆ ಎಲ್ಲಿರುತ್ತಿದೇನೋ, ಮನೆಯಲ್ಲಿದ್ದೇ ಕೆಟ್ಟೆ ಎಂಬ ಕೊರಗು.
ಕೆಲಸಕ್ಕೆ ಹೋಗುತ್ತಿರುವ ಹೆಂಗಸರನ್ನು ನೋಡಿದರೆ ಎಲಿಲ್ಲದ ಗೌರವ. ಅವರ ಜಾಗದಲ್ಲಿ ನಾನಿದ್ದಿದ್ದರೆ ಎಂಬ ಆಸೆ.
ಅಂತೆಯೇ ನನ್ನ ಕೆಲಸ ಹುಡುಕುವ ಪ್ರಕ್ರಿಯೆಯೂ ನಿಲ್ಲಲಿಲ್ಲ. ಸಾಂಸಾರಿಕ ಜೀವನದ ೧೬ ವರ್ಷಗಳಲ್ಲಿ ನಾನು ಎಲ್ಲೆಲ್ಲ ಸಾದ್ಯವೋ ಅಲ್ಲೆಲ್ಲ ನಾನು ಕೆಲಸ ಮಾಡುವ ಅವಕಾಶಕ್ಕಾಗಿ ಹುಡುಕಿದ್ದೇನೆ, ಮಾಡಿದ್ದೇನೆ . ನಾನು ಕಲಿತ ಯಾವ ಕ್ಷೆತ್ರವಾದರೂ ನನಗೆ ಅಡ್ಡಿ ಇರಲಿಲ್ಲ.
ಪುಣೆಯಲ್ಲಿದ್ದಾಗ ಪತ್ರಿಕೆಯಲ್ಲಿ ಬರುವ ಜಾಹಿರಾತಿನಲ್ಲಿ ಚಿಕ್ಕ ಮಗಳನ್ನು ಹಿಡಿದುಕೊಂಡು ಹುಡುಕುತ್ತಿದ್ದೆ.ನನಗೆ
ಸಿಗಬಹುದುಎಣಿಸಿದ ಕೆಲಸಗಳಿಗೆ ಅರ್ಜಿಯನ್ನೂ ಗುಜರಾಯಿಸುತ್ತಿದ್ದೆ. ನನ್ನಅರ್ಜಿಯನ್ನು ಗುರುತಿಸಿ ಬರುತ್ತಿದ್ದ ಕರೆಗಳಿಗೆ
ಮಗಳೊಡನೆ ಉತ್ತರಿಸಿ,ಅದಕ್ಕೆತಯಾರಿಯನ್ನೂ ಅವಳೊಡನೆ ಮಾಡುತ್ತಿದ್ದೆ.ಭಾರತದ ಸಂವಿದಾನದ ಬಗ್ಗೆ demolecture ಕರೆ ಬಂದಾಗ,ಎರಡುವರ್ಷದ ನನ್ನ ಕಂದಮ್ಮನನ್ನಪ್ರೇಕ್ಷಕಿ. ನಾನು ನನ್ನ ಪ್ರಾತ್ಯಕ್ಷಿಕೆಯನ್ನು ಕೊಡುವ ಹೊತ್ತಿಗೆ
ಅವಳೂ ಸಂವಿಧಾನದ ೧೯ನೆಯ ಕಲಮಿನ ಬಗೆಗೆ ಮಾತನಾಡುತ್ತಿದ್ದಳು. ಹೀಗೆ ನನ್ನ ಕೆಲಸದ ಬೇಟೆ ಮುಂದುವರೆಯಿತು. ಪ್ರೇಮ ಕುಲಕರ್ಣಿ ಎಂಬ ವಕೀಲೆಯ ಪರಿಚಯನನ್ನ ವಕೀಲಿ ವ್ರತ್ತಿಯ ಆರಂಭಕ್ಕೆ ಕಾರಣವಾಯಿತು.
ನನ್ನ ಮಗಳ ಶಾಲೆಯ ಸಮಯದಲ್ಲಿ ಅವರ ಕಚೇರಿಯಲ್ಲಿ ಸಹಾಯಕಳಾಗಿ ಕೆಲಸ ಮಾಡಲಾರಂಭಿಸಿದೆ.ಮಗಳ ಶಾಲೆಯ ಸಮಯ ಹೆಚ್ಚಿದಂತೆ ನನ್ನ ಕೆಲಸದ ಅವಧಿಯೂ ಹೆಚ್ಚಿತು.
ಅಷ್ಟರಲ್ಲಿ ನಾವು ಪುಣೆ ನಗರಿಯನ್ನು ಬಿಟ್ಟು ಪತಿದೇವರ ಉದ್ಯೋಗಕ್ಕಾಗಿ ಸೌದಿ ಸೇರಿದೆವು. ನನ್ನ ವಕೀಲಿ ವಿದ್ಯೆಗೆ ಆ ಊರಿನಲ್ಲಿ ಬೆಲೆ ಇರಲಿಲ್ಲ. ನಾನು ಸೋಲು ಒಪ್ಪಲು ತಯಾರಿರಲಿಲ್ಲ. ನಾನು ಕಲಿತ ಸಂಗೀತವನ್ನು ಅಭ್ಯಾಸ ಮಾಡಲು ಆರಂಭಿಸಿದೆ. ಮಗಳೊಂದಿಗೆ ಕೆಲುವು ಸ್ನೇಹಿತರ ಮಕ್ಕಳನ್ನು ಸೇರಿಸಿಕೊಂಡು ಸಂಗೀತ ಕಲಿಸಲು ಆರಂಭಿಸಿದೆ. ಅಷ್ಟರಲ್ಲಿ ನನಗೆ ಅಲ್ಲಿನ ಭಾರತಿಯ ಶಾಲೆಯಲ್ಲಿ ಪಾಠ ಕಲಿಸುವ ಅವಕಾಶ ದೊರೆಯಿತು. ನಾನು ಅದ್ಯಾಪಕಿಯಾದೆ. ಆದರೆ ನನ್ನ ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ನನ್ನ ಪತಿದೇವರಿಗೆ ಮಸ್ಕತ್ತಿನಲ್ಲಿ ಒಳ್ಳೆಯ ಉದ್ಯೋಗ, ನಾವು ಸೌದಿಯನ್ನು ಬಿಟ್ಟೆವು.ನನ್ನ ಅದ್ಯಾಪನ ವ್ರತ್ತಿಗೆ ಸಂಚಕಾರ ಬಂದಿತು. ಮಸ್ಕತ್ತಿನಲ್ಲಿ ಅದ್ಯಾಪಕಿಯಾಗಲು ಬಿ.ಎಡ್ ಪದವಿಯೇ ಬೇಕಂತೆ. ಇಲ್ಲಿ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ಮನೆಯ ಹತ್ತಿರದ ಒಂದೆರಡು ಮಕ್ಕಳೊಂದಿಗೆ ನನ್ನ ಸಂಗೀತ ಪಾಠಶಾಲೆ ಮುಂದುವರೆಯಿತು. ಮಗಳಿಗೆ ಇದರಿಂದಾಗಿ ಕೆಲವು ಮಿತ್ರರೂ ದೊರೆತರು, ಅವಳು ಸಂಗೀತ ಅಭ್ಯಾಸಕ್ಕೆ ಇದು ಭದ್ರ ಭುನಾದಿಯನ್ನೂ ಹಾಕಿತು. ಈಗ ಅವಳು ರಾಗ ಗುರುತಿಸಿ, ಆಲಾಪನೆಗಳನ್ನು ಮಾಡುವಾಗ, ಸುಶ್ರಾವ್ಯವಾಗಿ ಹಾಡುವಾಗ -ನನ್ನ ಸಂಗೀತ ಪಾಟಗಳು ಸಾರ್ಥಕ ವಾಯಿತೆಂದು ಮನಸ್ಸಿಗೆ ಹಿತವೆನಿಸುತ್ತದೆ.
ಹೀಗೆ ಸಂತೋಷದಿಂದ ಜೀವನ ಮುಂದುವರೆಯುತ್ತಿದ್ದರೂ ಕೆಲಸ ಮಾಡಬೇಕೆಂಬ ನನ್ನ ತುಡಿತ ಮಾತ್ರ ಹಾಗೇ ಇತ್ತು. ಒಮ್ಮೆ ಹಳೆ ಬಟ್ಟೆಗಳನ್ನು ದಾನಕ್ಕಾಗಿ ಒಟ್ಟುಮಾಡುವ ಪ್ರಜ್ಞಾ ಎಂಬವಳ ಮನೆಗೆ ಹಳೆ ಬಟ್ಟೆಗಳನ್ನು ಕೊಡಲು ಹೋದಾಗ, ಅನೌಪಚಾರಿಕವಾಗಿ ಮಾತನಾಡುತ್ತ ಅವಳೊಬ್ಬ ವಕೀಲೆ ಮತ್ತು ಮಸ್ಕಿತ್ತನ್ನಿಲ್ಲಿ ಉತ್ತಮ ಕೆಲಸದಲ್ಲಿದ್ದಾಳೆಂದು ತಿಳಿಯಿತು, ನಾನೂ ಒಬ್ಬಳು ವಕೀಲೆಯೆಂದು ಅವಳೊಡನೆ ಹೇಳಿಕೊಂಡೆ. ಅವಳು ಇಲ್ಲಿ ವಕೀಲರಿಗೆ ಉದ್ಯೋಗ ಅವಕಾಶಗಳ ಬಗೆಗೆ ಹೇಳಿ, ಕೆಲವು ವಿಳಾಸಗಳನ್ನು ಕೊಟ್ಟಳು. ಉತ್ಸಾಹದಿಂದ ಅರ್ಜಿ ಗುಜರಾಯಿಸಿದ ನಾನು ,ಈ ಅರ್ಜಿಗಳ ಉತ್ತರಕ್ಕಾಗಿ ಒಂದು ವರ್ಷ ಕಾಯಬೇಕಾಯಿತು. ಆದರೂ भगवान के घर ढेर है अन्दॆर नहीं ಎಂಬ ಹಿಂದಿ ನಾಣ್ನುಡಿಯಂತೆ ನನಗೆ ಒಂದು ಕೆಲಸ ನಾನೇ ನಂಬಲು ಆಗದಂತೆ ಸಿಕ್ಕಿತು. ನಾನೀಗ ಇಲ್ಲಿನ ಒಂದು ಉತ್ತಮ law firm ನಲ್ಲಿ legal advisor.ಈ ಅವಕಾಶಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತ ನನ್ನ ಹೊಸ ಜೀವನವನ್ನು ಅನಂದದಿಂದ ಅನುಭವಿಸುತ್ತಿದ್ದೆನೆ.
All the best ;)
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿNinna blog nodi thumba khushi aitu.. Allade kelsa kooda sikkitu anno suddi innoo santosha tantu.. Blog mattu job eradaralloo yashassu, hesaru sigali antha haaraisuttene..
ಅಳಿಸಿSwathi
Swathi, odi protsahisiddakkaagi danyavaadagalu
ಅಳಿಸಿakka nivu tumba chennagi baritira..
ಪ್ರತ್ಯುತ್ತರಅಳಿಸಿಧನ್ಯವಾದಗಳು.....
ಪ್ರತ್ಯುತ್ತರಅಳಿಸಿ