ಬುಧವಾರ, ಏಪ್ರಿಲ್ 24, 2013

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ

ನಮ್ಮ ಮಸ್ಕತ್ ಕನ್ನಡ ಸಂಘ 'ಕನ್ನಡ ಸಾಹಿತ್ಯ' ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಲ್ಲಿ ನೆಲಸಿರುವ ಕನ್ನಡ ಸಾಹಿತ್ಯಾಸಕ್ತರು ಭಾಗವಹಿಸಿದ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಈ ವಿದೇಶಿ ನಾಡಿನಲ್ಲಿ ಬೆಳೆದ ನಮ್ಮ
ಮಕ್ಕಳು ಕನ್ನಡ ಸಾಹಿತ್ಯ ಚರಿತ್ರೆ, ವಚನ, ಗಾದೆಗಳು -ಎಲ್ಲವನ್ನೂ ಪ್ರೌಢವಾಗಿ ವೇದಿಕೆಯಲ್ಲಿ ವಾಚಿಸಿದ್ದಲದೆ, ಶುದ್ದ ಕನ್ನಡದಲ್ಲಿ ನಿರರ್ಗಳವಾಗಿ ಪ್ರಶ್ನಾವಳಿಯನ್ನು ಪ್ರಸ್ತುತಪಡಿಸಿದ್ದು.  ಈ ಕಾರ್ಯಕ್ರಮದಲ್ಲಿ ನಾನು ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಎಂಬ ವಿಚಾರವಾಗಿ ಮಾತನಾಡಿದ್ದೆ. ನನ್ನ ಭಾಷಣವನ್ನು ಇಲ್ಲಿ ದಾಖಲಿಸಿಡುತ್ತೇನೆ.
 
ಇಂದಿನ ದಿನ ಕರ್ನಾಟಕದ ಯಾವ ಚಿಕ್ಕ ಹಳ್ಳಿಯೂ ಇಂಟರ್ನೆಟ್ ಅಂದರೆ ಅಂತರ್ಜಾಲದ ,ಕಂಪ್ಯೂಟರ್ ಬಳಕೆ ಇಲ್ಲದೆ ಇಲ್ಲ ಅನಿಸುತ್ತದೆ. ನಮ್ಮ ಕೈಯ್ಯೊಳಗಿರುವ ಚಿಕ್ಕ ಸಾದನವಾದ ಮೊಬೈಲ್ ಫೋನುಗಳಂತೂ ಪ್ರಪಂಚವನ್ನೇ ನಮ್ಮ ಅಂಗೈಯೊಳಗೆ ತಂದಿದೆ. ಈ ಯಂತ್ರಗಳ ಬಳಕೆಗೆ ಇಂಗ್ಲಿಷ್ ಅನಿವಾರ್ಯ. ಈ ಯಂತ್ರಗಳು  ಸ್ರಷ್ಟಿಸಿರುವ ಉದ್ಯೋಗ ಮತ್ತು ದುಡಿಮೆಯ
ಅವಕಾಶಗಳೂ ಅಪಾರ. ಆದ್ದರಿಂದ ನಮ್ಮಮುಂದಿನ ತಲೆಮಾರಿನ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಇದರ ಮೋಡಿಗೆ  ಒಳಗಾಗುವುದು ಸಹಜ. ಆದ್ದರಿಂದಲೇ ಚಿಕ್ಕ ಚಿಕ್ಕ ಹಳ್ಳಿಗಳಲ್ಲಿಯೂ ಇಂದು ಪೋಷಕರು ತಮ್ಮಮಕ್ಕಳನ್ನು
ಇಂಗ್ಲಿಷ್ ಮಾದ್ಯಮದ ಶಾಲೆಗಳಿಗೆ ಸೇರಿಸುವ ತವಕದಲ್ಲಿದ್ದಾರೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ.ಕೇವಲ ೨೦-೩೦ ವರ್ಷಗಳ ಹಿಂದೆ ನಾವೆಲ್ಲಾ ಓದಿದ, ಶತಮಾನೋತ್ಸವವನ್ನು ಆಚರಿಸಿಕೊಂಡ ನಮ್ಮೂರಿನ ಶಾಲೆಗಳನ್ನು ಕೇಳುವವರಿಲ್ಲವಾಗಿದೆ. ಇವನ್ನೆಲ್ಲ ನೋಡಿದರೆ ಮಾಹಿತಿ ತಂತ್ರಜ್ನಾನದ ಈ ಜಾಗತಿಕ ಹಳ್ಳಿಯಲ್ಲಿ ನಮ್ಮ ಈ ಕನ್ನಡ ಉಳಿದೀತಾ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಮಾಹಿತಿ ತಂತ್ರಜ್ನಾನದ ವೇಗ, ಅದು ಜೀವನದ ಎಲ್ಲ ಭಾಗಗಳನ್ನು ಆವರಿಸಿಕೊಳ್ಳುತ್ತಿರುವ ರೀತಿ ನೋಡಿದರೆ  ಇನ್ನು ಹೆಚ್ಚು ಸಮಯ ನಮ್ಮ ಭಾಷೆ ಉಳಿಯಲಾರದು ಎಂದು ದಿಗಿಲಾಗುವುದು ಸಹಜ.
 
ಆದರೆ ತನ್ನ ಎರಡು ಸಾವಿರಕ್ಕೂ ಮಿಗಿಲಾದ ಇತಿಹಾಸದಲ್ಲಿ ಕನ್ನಡ ಇಂತಹ ಹತ್ತು ಹಲವು ಅಪಾಯಗಳ ನಡುವೆಯೇ ಇಷ್ಟು
ಸಮ್ರುಧ್ಧವಾಗಿ ಬೆಳೆದಿರುವಾಗ ಈ ಸವಾಲನ್ನೂ ದಾಟಿ ಕನ್ನಡ ಬೆಳೆಯ ಬಹುದೆಂಬ ಆಶಾವಾದ ಮೂಡುತ್ತದೆ. ಹಾಗೆ 
ನೋಡಿದರೆ ಯಾವ ಪ್ರಾಂತೀಯ ಭಾಷೆಯೂ ಈ ಮಾಹಿತಿ ತಂತ್ರಜ್ಞಾನದ ದಾಳಿಯಿಂದ ಹೊರತಾಗಿಲ್ಲ. ಆದ್ದರಿಂದ ಇದನ್ನು 
ನಾವು ಪ್ರಾಂತೀಯ ಭಾಷೆಗಳ ಸಂಕ್ರಮಣ ಕಾಲ ಎನ್ನಬಹುದು. ಎಲ್ಲ ಪ್ರಾಂತೀಯ ಭಾಷೆಗಳಂತೆ ಕನ್ನಡವೂ ಈ ಹೊಸ 
ತಂತ್ರಜ್ಞಾನದ ಸಹಾಯದಿಂದ ಹೊಸ ಯುಗಕ್ಕೆ ಕಾಲಿಡುತ್ತಿದೆ ಎನ್ನೋಣ. 
 
ಈಗ ನಮಗೆ ಕನ್ನಡ ಓದಲೇ ಬೇಕೆಂದಿದ್ದರೆ ಪುಸ್ತಕಗಳೇ ಬೇಕೆಂದಿಲ್ಲ. ಕನ್ನಡದ ಯಾವುದೇ ದಿನಪತ್ರಿಕೆ, ವಾರಪತ್ರಿಕೆ ಈಗ ಅಂತರ್ಜಾಲದಅತಿಯ ಲ್ಲಿ ಲಭ್ಯ. ಕುಮಾರವ್ಯಾಸ ಭಾರತದ ಪಿಡಿಎಫ್ ಅವತರಿಣಿಕೆ ಅಂತರ್ಜಾಲದಲ್ಲಿ ಓದಬಹುದು. ಪ್ರಪಂಚದ ಯಾವ ಮೂಲೆಯಲ್ಲಿದ್ದುಕೊಂಡೂ ಆಸಕ್ತರು ಕನ್ನಡವನ್ನು ಓದಬಹುದು. ಆಸಕ್ತರೂ ಬಹಳ ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದಕ್ಕೆ ಅಂತರ್ಜಾಲದಲ್ಲಿ ಲಭ್ಯವಿರುವ ಕನ್ನಡದ ಮಾಹಿತಿಯ ಆಗಾಧತೆಯೇ ಸಾಕ್ಷಿಯಲ್ಲವೇ? ಕನ್ನಡದ ನಿಘಂಟುಗಳು, ಕನ್ನಡದ ಯಾವುದೇ ಸಾಹಿತಿಯ ಬಗೆಗಿನ ಮಾಹಿತಿ, ಯಾವುದೇ ಜನಪ್ರಿಯ ಕನ್ನಡ ಕವಿತೆಯ ಸಾಹಿತ್ಯ- ಹೀಗೆ ನಾವು ಹೆಸರಿಸಿದ ಎಲ್ಲ ಮಾಹಿತಿಯೂ ನಮ್ಮ ಎದುರಿರುವ ಚಿಕ್ಕ ಯಂತ್ರ ನಿಮಿಷದಲ್ಲಿ ಒದಗಿಸುತ್ತದೆ. 

ಕನ್ನಡ ಬರವಣಿಗೆ & ಮಾಹಿತಿ ತಂತ್ರಜ್ಞಾನ :

ಕನ್ನಡದಲ್ಲಿ ಬರವಣಿಗೆಯನ್ನೂ ಈ ಹೊಸ ತಂತ್ರಜ್ಞಾನ  ಸರಳಗೊಳಿಸಿದೆ. ಮೊದಲೆಲ್ಲ ನಾವು ಏನನ್ನಾದರೂ ಬರೆದರೆ ಅವುಗಳನ್ನು ಓದುಗರಿಗೆ ತಲುಪಿಸಲು ಯಾವುದಾದರೂ ಪತ್ರಿಕೆಗೆ ಕಳುಹಿಸಿ ಅದು ಪ್ರಾತಗೊಳ್ಳುವ ತನಕ ಕಾಯಬೇಕಾಗಿತ್ತು. ಆದರೆ ಈಗ ಮಾಹಿತಿ ತಂತ್ರಜ್ನಾನದ ಕೃಪೆಯಿಂದ ಯಾರು ಬೇಕಾದರೂ ಲೇಖನ ಬರೆದು ನಿಮಿಷಕ್ಕೆ ಸಾವಿರ ಜನರನ್ನು ತಲುಪಲೂಬಹುದು. ಅಂತರ್ಜಾಲ ಅದಕ್ಕೆ ನೂರು ದಾರಿಗಳನ್ನು ಕಲ್ಪಿಸಿದೆ, ಕಲ್ಪಿಸುತ್ತಿದೆ. ನಾವು ನಮ್ಮ ಲೇಖನವನ್ನು ನಮ್ಮ ಮುಖಪುಸ್ತಕದ ಗೋಡೆಯ ಮೇಲೆ ಹಂಚಬಹುದು; ನಮ್ಮದೇ ಬ್ಲಾಗ್ನಲ್ಲಿ ಬರೆಯಬಹುದು!........ 
 
ಭಾರತಿಯ ಭಾಷೆಗಳನ್ನು ಗಣಕಯಂತ್ರದ ಪರೆದೆಯ ಮೇಲೆ ಮೂಡಿಸಲು ಮೊದಲು ಸವಾಳದದ್ದು ಅಂಗ್ಲ ಕೀಲಿಮಣೆ. ಈಗಿನ ಪರಿಸ್ತಿತಿಯಲ್ಲಿ ಇಂಗ್ಲಿಷ್ ಬಾಷೆ ಮತ್ತು querty ಕಿಲಿಮಣೆ ಕಂಪ್ಯೂಟರ್ ಬಳಕೆಗೆ ಅನಿವಾರ್ಯ. ಈ ಕೀಲಿಮಣೆಯನ್ನು ಬಳಸಿಯೇ ಭಾಷೆಗಳನ್ನುಯಲು ಸಾಧ್ಯವಾಗಿಸಿದ್ದು ಬರಹದ ಸಾಧನೆ. ಈ ತಂತ್ರಾಂಶವನ್ನು ಬಳಸಿ ಕನ್ನಡವನ್ನು ಸಮರ್ಥವಾಗಿ ಎ-ಮೈಲ್ , ಫೆಸ್ ಬುಕ್ ,ಬ್ಲಾಗ್ಗಳಲ್ಲಿ ಬಳಸಬಹುದು. ಇದೆ ಮಾದರಿಯಲ್ಲಿ ' ನುಡಿ' ಮತ್ತು 'ಕನ್ನಡ ಸ್ಲೇಟ್' ತಂತ್ರಾಂಶಗಳಿವೆ.ಇವೆಲ್ಲವೂ ಇಂಗ್ಲಿಷ್ ಭಾಷೆಯ phonetics ಆದರಿಸಿ ಇರುವುದರಿಂದ ಉಪಯೋಗಿಸುವುದು ಬಹಳ ಸುಲಭ. ವಿದೇಶದಲ್ಲಿಯೇ ಬೆಳೆದ ನನ್ನ ಮಗಳು ಕನ್ನಡದಲ್ಲಿ ಅವರಿ ಅಜ್ಜಿಗೆ ಮೇಯ್ಲ್ ಬರೆಯುವುದನ್ನು ನೋಡುವಾಗ ತಂತ್ರಜ್ಞಾನದಲ್ಲಿ ಮಾನವ ಸಾದಿಸಿದ ಔನ್ನತ್ಯ ನನ್ನನ್ನು ಬೆರಗುಗೊಲಿಸುತ್ತದೆ. 
 
ನಮ್ಮಲ್ಲಿ ಬರೆಯುವ ಹವ್ಯಾಸವಿದ್ದರೆ, ಅದನ್ನು ಬೆಳೆಸಿಕೊಳ್ಳಲು ಬ್ಲಾಗ್ ಒಂದು ಉತ್ತಮ ಮಾದ್ಯಮ. google, wordpress ಮುಂತಾದ ತಾಣಗಳಲ್ಲಿ ನಾವು ನಿಮಿಷದಲ್ಲಿ ನಮ್ಮ ಬ್ಲಾಗ್ ಆರಂಭಿಸಿ ನಮ್ಮ ಹವ್ಯಾಸವನ್ನು ಮುಂದುವರೆಸಬಹುದು. ಲೇಖನ ಬರೆಯುವಷ್ಟು ಆಸಕ್ತಿ ಇಲ್ಲದಿದ್ದರೂ ನಾವು ಕನ್ನಡವನ್ನು ನಮ್ಮ ದಿನನಿತ್ಯದ ಮೇಯ್ಲ್, ಫೇಸ್ ಬುಕ್ ಸಂದೇಶಗಳಲ್ಲಿ ಬಳಸಿ ಈ ಮಾದ್ಯಮದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸಬಹುದು.
 
'ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಗಸು'ಎಂಬ ಡಿ.ವಿ.ಜಿ ಯವರ ಮಾತಿನಂತೆ ಕನ್ನಡ  ಮತ್ತು ಸಾಹಿತ್ಯ ಮಾಹಿತಿ ತಂತ್ರಜ್ಞಾನ ಎಂಬ ಹೊಸ ಚಿಗುರಿನೊಂದಿಗೆ ಇನ್ನೂ ಸತ್ವಯುತವಾಗಿ ಬೆಳೆಯುತ್ತಿದೆ ಎಂಬುದು ನನ್ನ ಅನಿಸಿಕೆ.  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ