ನಮ್ಮ ಯಾವುದಾದರೊಂದು ಆಸಕ್ತಿಯ ಬೆನ್ನಹಿಂದೆ ನಾವು ಜೀವನದಲ್ಲಿ ಹೋದಾಗ ಎಷ್ಟೆಲ್ಲಾ ಹೊಸ ಅನುಭವಗಳು ಆಗುತ್ತವೆ
ಎಂಬುದಕ್ಕೆ ನನ್ನ ಸಂಗೀತದ ಅನುಭವಗಳು ಒಂದು ಉತ್ತಮ ಉದಾಹರಣೆ. ಕೆಲಸ ಮಾಡ ಬೇಕೆಂಬ ನನ್ನ ಆಸೆ ನಾವು ವಿದೇಶಕ್ಕೆ ಬದುದರಿಂದ ಪಲಿಸದೇ ನಾನು ಗ್ರಹಿಣಿಯಾಗಿ ಕಾಲ ಕಳೆಯಬೇಕಾಗಿ ಬಂತು. ನನ್ನ ಒಂದು ಆಸಕ್ತಿಯಾದ ಕರ್ನಾಟಕ ಸಂಗೀತದ ಜಾಡು ಹಿಡಿದು ಹೊರಟೆ . ಈ ಪ್ರಯಾಣದ ವಿವಿದ ಅನುಭವಗಳನ್ನು ಒಮ್ಮೆ ನೆನಪಿಸಿಕೊಂಡಾಗ ಈ ಲೇಖನ ಸ್ರಷ್ಟಿಯಾಯಿತು.
ಕರ್ನಾಟಕ ಸಂಗೀತ ಕಲಿಸಲು ಸಂಗೀತ ಮಾಸ್ತರು ಮನೆಗೆ ಬರುತ್ತಿದ್ದರು. ಮಾಸ್ತರು ವಾರಕ್ಕೊಂದು ದಿನ ಬಂದು ಪಾಠ ಮಾಡುತ್ತಿದ್ದರು. ಮಾಡಿದ ಎಲ್ಲದನ್ನೂ ಗಂಭಿರವಾಗಿ ತೆಗೆದುಕೊಳ್ಳುತ್ತಿದ್ದ ನಾನು, ಸಂಗೀತದ ಜೂನಿಯಾರ್ ಪರೀಕ್ಷೆಯನ್ನು ಉತ್ತಮ ಅಂಕಗಳಿಂದಲೇ ತೇರ್ಗಡೆಯಾದೆ. ತಮ್ಮ,ತಂಗಿಯರೂ ನನ್ನೊಂದಿಗೆ ಸಂಗೀತ ಕಲಿತರು. ಎಲ್ಲರೂ ಸೇರಿ ಊರಿನ ದೇವಸ್ತಾನದ ಸಂಗೀತ ಸೇವೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆವು. ಹೀಗೆ ನನ್ನ ಸಂಗೀತಾಸಕ್ತಿಗೆ ಬಾಲ್ಯದಿಂದ ಒಂದು ಅಡಿಪಾಯ ಸಿಕ್ಕಿತು. ಮದುವೆಯಾಗಿ ವಾರಕ್ಕೊಂದು ದಿನ ಪಾಠ ಕೇಳುವ ಪರಿಪಾಟ ನಿಂತ ಮೇಲೆ ನನ್ನ ಸಂಗೀತಾಸಕ್ತಿ ಕ್ಯಾಸೆಟ್ಟುಗಳ, ಸಂಗೀತ ಕಾರ್ಯಕ್ರಮಗಳ- ಕೆಳುವಿಕೆಗೆ ಸೀಮಿತವಾಗಿತ್ತು. ಈ ಆಸಕ್ತಿಗೆ ಒಂದು ದಿಕ್ಕನ್ನು ಕೊಟ್ಟಿದ್ದು ನನ್ನ ತಾಯ್ತನ. ಮಗಳು ಹುಟ್ಟಿದ ದಿನದಿಂದ ನನ್ನ ಸಂಗೀತ ಕಲಿಕೆ ಮ
ತ್ತೆ ಮುನ್ದುವರೆಯಿತು. ಅವಳಿಗೆ ಲಾಲಿ ಹೇಳಲು ಹಲವು ಮೂಲಗಳಿಂದ ಲಾಲಿ ಹಾಡುಗಳನ್ನು ಕಲಿತೆ. ನನ್ನ ಲಾಲಿಗಳನ್ನೇ ಮಗುವಿನ ತಂದೆಯೂ ಮೂಲಕ ಹಾಕಿ ಮಲಗಿಸುವುದನ್ನು ಕೇಳಿ ಮುಗುಳ್ನಗುತ್ತಿದ್ದೆ. ಮಗಳಿಗೆ ಮಾತು ಬರಲು ಆರಂಭವಾದ ಮೇಲೆ ಅವಳಿಗೆ ಏನು ಕಲಿಸುವುದು ಏನು ಬಿಡುವುದೆಂಬ ಉತ್ಸಾಹ! ಆ ಮಗುವಿಗೂ ನಾ ಕಲಿಸಿದ್ದನ್ನೆಲ್ಲ ಕಲಿಯುವ ಅತ್ಯುತ್ಸಾಹ. ಹೀಗೆ ಅವಳಿಗೆ ಸಂಗೀತ, ನ್ರತ್ಯಗಳನ್ನು ನಾನೇ ಕಲಿಸಲು ಆರಂಭಿಸಿದೆ. ನಾವು ಇದ್ದ ಊರೂಗಳಲ್ಲಿ ಅಕ್ಕ ಪಕ್ಕದ ಮಕ್ಕಳನ್ನು ಸೇರಿಸಿಕೊಂಡು ಸಂಗೀತ ತರಗತಿಗಳನ್ನು ಮಾಡಿದೆ. ಈ ನಿಟ್ಟಿನಲ್ಲಿ ನನ್ನ ಅನುಭವಗಳನ್ನು ಸೌದಿಯ ಅನುಭವಗಳು ಮಾಲಿಕೆಯಲ್ಲಿ ಈ ಮೊದಲೇ ದಾಕಲಿಸಿದ್ದೇನೆ. ನಾನು ಮರೆತ ಪಾಟಗಳನ್ನು ನೆನಪಿಸಿಕೊಂಡೆ ; ಸಂಗೀತದ ಪಟ್ಯಪುಸ್ತಕಗಳನ್ನು ಕೊಂಡೆ -ಹೀಗೆ ನನ್ನ ಮಗು ಸಂಗೀತದ ಮೂಲ ಪಾಟಗಳನ್ನು ತಾಳ ಬದ್ದವಾಗಿ ಹಾಡತೊಡಗಿದಳು.ನಾನು ಹೋಗುತ್ತಿದ್ದ ವಾರಾಂತ್ಯದ ತ್ಯಾಗರಾಜ ಸಮಿತಿಯ ಸಂಗೀತ ಪಾಟಗಳಿಗೆನನ್ನೊಂದಿಗೆ ಬಂದು ಕೇಳುತ್ತಿದ್ದಳು. ಅವಳಲ್ಲಿ ಸಂಗೀತದ ಆಸಕ್ತಿಯನ್ನು ಕುದುರಿಸಲು ನಾನು ಆರಂಭಿಸಿದ ಈ ಚಟುವಟಿಕೆ ನನ್ನ ಸಂಗೀತವನ್ನೂ
ಮುಂದುವರೆಸಿತು . ಮಸ್ಕತ್ತಿನ ಸಂಗೀತಾಸಕ್ತರ ಪರಿಚಯ ನನಗಾಯಿತು, ಹಲವು ಸ್ನೇಹಿತರನ್ನು ಒದಗಿಸಿತು.
ಎಂಬುದಕ್ಕೆ ನನ್ನ ಸಂಗೀತದ ಅನುಭವಗಳು ಒಂದು ಉತ್ತಮ ಉದಾಹರಣೆ. ಕೆಲಸ ಮಾಡ ಬೇಕೆಂಬ ನನ್ನ ಆಸೆ ನಾವು ವಿದೇಶಕ್ಕೆ ಬದುದರಿಂದ ಪಲಿಸದೇ ನಾನು ಗ್ರಹಿಣಿಯಾಗಿ ಕಾಲ ಕಳೆಯಬೇಕಾಗಿ ಬಂತು. ನನ್ನ ಒಂದು ಆಸಕ್ತಿಯಾದ ಕರ್ನಾಟಕ ಸಂಗೀತದ ಜಾಡು ಹಿಡಿದು ಹೊರಟೆ . ಈ ಪ್ರಯಾಣದ ವಿವಿದ ಅನುಭವಗಳನ್ನು ಒಮ್ಮೆ ನೆನಪಿಸಿಕೊಂಡಾಗ ಈ ಲೇಖನ ಸ್ರಷ್ಟಿಯಾಯಿತು.
ಕರ್ನಾಟಕ ಸಂಗೀತ ಕಲಿಸಲು ಸಂಗೀತ ಮಾಸ್ತರು ಮನೆಗೆ ಬರುತ್ತಿದ್ದರು. ಮಾಸ್ತರು ವಾರಕ್ಕೊಂದು ದಿನ ಬಂದು ಪಾಠ ಮಾಡುತ್ತಿದ್ದರು. ಮಾಡಿದ ಎಲ್ಲದನ್ನೂ ಗಂಭಿರವಾಗಿ ತೆಗೆದುಕೊಳ್ಳುತ್ತಿದ್ದ ನಾನು, ಸಂಗೀತದ ಜೂನಿಯಾರ್ ಪರೀಕ್ಷೆಯನ್ನು ಉತ್ತಮ ಅಂಕಗಳಿಂದಲೇ ತೇರ್ಗಡೆಯಾದೆ. ತಮ್ಮ,ತಂಗಿಯರೂ ನನ್ನೊಂದಿಗೆ ಸಂಗೀತ ಕಲಿತರು. ಎಲ್ಲರೂ ಸೇರಿ ಊರಿನ ದೇವಸ್ತಾನದ ಸಂಗೀತ ಸೇವೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆವು. ಹೀಗೆ ನನ್ನ ಸಂಗೀತಾಸಕ್ತಿಗೆ ಬಾಲ್ಯದಿಂದ ಒಂದು ಅಡಿಪಾಯ ಸಿಕ್ಕಿತು. ಮದುವೆಯಾಗಿ ವಾರಕ್ಕೊಂದು ದಿನ ಪಾಠ ಕೇಳುವ ಪರಿಪಾಟ ನಿಂತ ಮೇಲೆ ನನ್ನ ಸಂಗೀತಾಸಕ್ತಿ ಕ್ಯಾಸೆಟ್ಟುಗಳ, ಸಂಗೀತ ಕಾರ್ಯಕ್ರಮಗಳ- ಕೆಳುವಿಕೆಗೆ ಸೀಮಿತವಾಗಿತ್ತು. ಈ ಆಸಕ್ತಿಗೆ ಒಂದು ದಿಕ್ಕನ್ನು ಕೊಟ್ಟಿದ್ದು ನನ್ನ ತಾಯ್ತನ. ಮಗಳು ಹುಟ್ಟಿದ ದಿನದಿಂದ ನನ್ನ ಸಂಗೀತ ಕಲಿಕೆ ಮ
ಮುಂದುವರೆಸಿತು . ಮಸ್ಕತ್ತಿನ ಸಂಗೀತಾಸಕ್ತರ ಪರಿಚಯ ನನಗಾಯಿತು, ಹಲವು ಸ್ನೇಹಿತರನ್ನು ಒದಗಿಸಿತು.
ಅಷ್ಟರಲ್ಲಿ ನಮ್ಮ ಹತ್ತಿರವೇ ಒಬ್ಬ ಉತ್ತಮ ಗುರು ಮಕ್ಕಳಿಗೆ ಪೀಟೀಲು ಕಲಿಸುತ್ತಾರೆಂದು ತಿಳಿದಿದ್ದೂ ಆಯಿತು; ನಾನು ಅವರ ಹಿಂದೆ ಬಿದ್ದು, ಅವರೊಡನೆ ಮಾತನಾಡಿ ಮಗಳನ್ನು ಆ ತರಗತಿಗೆ ಸೇರಿಸಿದೆವು. ಅವರು ಇವಳನ್ನು ಸೇರಿಸಿಕೊಳ್ಳುವಾಗಲೇ ಅವರ ತರಗತಿಯಲ್ಲಿರಬೇಕಾದರೆ ಪಾಲಿಸಬೇಕಾದ ನಿಯಮಗಳ ಪಟ್ಟಿ ಕೊಟ್ಟಿದ್ದರು. ಎಲ್ಲವನ್ನೂ ಒಪ್ಪಿಕೊಂಡು ಮಗಳನ್ನು ಅಲ್ಲಿ ಸೇರಿಸಿದೆವು. ಅಲ್ಲಿಂದ ನಮ್ಮ ಕುಟುಂಬದ ದಿನಚರಿಯ ಒಂದು ಭಾಗವಾಗಿ ಅವಳ ಸಂಗೀತ ತರಗತಿಗಳು ಸೇರಿಕೊಂಡವು. ಗುರುಕುಲ ಮಾದರಿಯಲ್ಲಿ ಅವರು ನೀಡುತ್ತಿದ್ದ ಶಿಕ್ಷಣಕ್ಕೆ ಮಕ್ಕಳ ಹೆತ್ತವರ ಸಹಾಯ ಸಂಪೂರ್ಣವಾಗಿ ಬೇಕಿತ್ತು. ಅವರ ವಿಜಯ ದಶಮಿಯ ಪೂಜೆ, ಬಹುಳ ಪಂಚಮಿಯ ಪೂಜೆಗಳಲ್ಲಿ ನಾವುಗಳು ಹೋಗಿ ದೇವರ ಪಾತ್ರೆ ತೊಳೆಯುವುದು, ಹೂವು ಕಟ್ಟುವುದು ಮಾಡ ತೊಡಗಿದೆವು. ಅವರ ಪಂಚರತ್ನ ತರಗತಿಯಲ್ಲಿ ಹಲವು ಅಮ್ಮಂದಿರ ಜೊತೆಗೆ ನಾನೂ ಸೇರಿಕೊಂಡೆ. ನನ್ನ ಮಗಳ ಗುರುವಿನ ಹಿರಿಯ ವಿದ್ಯಾರ್ಥಿಗಳಿಂದನಡೆಸಲ್ಪಡುತ್ತಿದ್ದ ಈ ತರಗತಿಗಳುಮತ್ತೆ ನನ್ನನ್ನು ತರಗತಿಗಳಲ್ಲಿ ಕುಳ್ಳಿರಿಸಿತು. ನಡುವಿನಲ್ಲಿ ನಮ್ಮನ್ನೆಲ್ಲ ಒಬ್ಬೊಬ್ಬರೇ ಹೇಳಿಸುವಾಗ ಮಕ್ಕಳ ಮುಂದೆ ನಾವು ತಬ್ಬಿಬ್ಬು. 
ಆದರೂ ಮಗಳೊಂದಿಗೆ ಪುನಃ ತರಗತಿಯಲ್ಲಿ ಕುಳಿತುಕೊಳ್ಳುವ ಅನುಭವವೇ ಬೇರೆ. ಎರಡು ವರ್ಷಗಳಲ್ಲಿ ಮಗಳು ಕಲಿಸುವವರಲ್ಲಿ ಒಬ್ಬಳಾಗಿ ಕುಳಿತು ಪಾಠ ಮಾಡಲು ಆರಂಭಿಸಿದಳು. ಹೆಮ್ಮೆಯಿಂದ ಮಗಳು ಕಲಿಸುವುದನ್ನು ಆಲಿಸುತ್ತಿದ್ದೆ. ಅವಳು ಕಲಿತ ಹಾಡುಗಳು,ಕೀರ್ತನೆಗಳು ಅವಳ ಅಪ್ಪನ ಸಿಳ್ಳೇಯಲ್ಲಿ ಮನೆಯೆಲ್ಲ ತುಂಬುವುದನ್ನು ಕೇಳಿ ಪುಳಕಗೊಳ್ಳುತ್ತಿದ್ದೆ. ಹೀಗೆ ಅವಳು ಒಂದು ಮಟ್ಟ ತಲುಪಿದಳು. ಅವಳ ಗುರುಗಳ ಬೈಗುಳ,೩-೪ ಗಂಟೆಗಳ ಸತತ ತರಗತಿಗಳು, ಹೋಗಿ ಚಿಕ್ಕ ಮಕ್ಕಳಿಗೆ ಪಾಠ ಮಾಡಬೇಕಾದ ಕಟ್ಟುನಿಟ್ಟು-ಯಾವುದೂ ಅವಳ ಆಸಕ್ತಿಯನ್ನು ಕುಂದಿಸಲಿಲ್ಲ. ಪಿಟೀಲು, ಹಾಡುಗಾರಿಕೆ ಎರಡರಲ್ಲೂ ಕೀರ್ತನೆಗಳನ್ನು ಕಲಿಯಲು ಆರಂಭಿಸಿದಳು. ಅವಳ ಸಂಗೀತ ಗುರುಗಳ ವಾರ್ಷಿಕ ಕಾರ್ಯಕ್ರಮವಾದ ತ್ಯಾಗರಾಜ ಆರಾಧನಾ ಕಾರ್ಯಕ್ರಮದಲ್ಲಿ ಹಾಡುವಷ್ಟು, ಪೀಟೀಲು ನುಡಿಸುವಷ್ಟು ಕಲಿತಳು. ಎರಡು ಆರಾದನೆಗಳಲ್ಲಿ ಹಾಡನ್ನೂ, ಒಂದು ಅರಾದನೆಯಲ್ಲಿ ಪಿಟೀಲನ್ನೂ ನುಡಿಸಿದಳು. ಈ ಆರಾಧನಾ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಸೇರಿ ನಿರ್ವಹಿಸುವ ಸಡಗರ ಒಂದು ಒಳ್ಳೆಯ ಅನುಭವ. ಎಲ್ಲ ಭಾಗವಹಿಸುವ ಮಕ್ಕಳ ಸಂಪೂರ್ಣ ಕುಟುಂಬ ಈ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದೆ. ಬೆಳಿಗ್ಗೆಯಿಂದ ಮದ್ಯಾಹ್ನದ ತನಕ ಕಾರ್ಯಕ್ರಮದ ಸಭಾಂಗಣವನ್ನು ಅಲಂಕರಿಸಿ ಓರಣಗೊಳಿಸಿ, ಸಂಜೆ ಪುನಃ ಬಂದು ಕಾರ್ಯಕ್ರಮ ಮುಗಿದಾಗ ಎಲ್ಲರಲ್ಲೂ ಒಂದು ಸಾರ್ಥಕ ಭಾವ!
ಇವುಗಳ ನಡುವೆ ನನ್ನ ತಂದೆಯ ಇಲ್ಲವಾಗುವಿಕೆ ನನ್ನನ್ನು ಅನಾಥ ಪ್ರಜ್ನೆಯತ್ತ ನೂಕಿತು,ಅವರು ಪ್ರೀತಿಯಿಂದ ಕೊಡಿಸಿದ
ವೀಣೆಯನ್ನು ಮಸ್ಕತ್ತಿಗೆ ಹೊತ್ತುತಂದೆ. ಸಂಪೂರ್ಣ ಮರತೇ ಹೋಗಿದ್ದ ವಿದ್ಯೆಯನ್ನುಹೊಸ ಗುರುವಿನ ಸಹಾಯದಿಂದತೆ ನೆನಪಿಸಿ
ಕೊಂಡೆ. ಷಣ್ಮುಖ ಪ್ರಿಯದ ಸಿದ್ದಿ ವಿನಾಯಕಂ,ವಾತಾಪಿ,ಪಂಚರತ್ನ ಕೃತಿಗಳನ್ನೂಸಹ ವೀಣೆಯಲ್ಲಿ ಕಲಿತೆ. ಇಲ್ಲಿ ನಡೆಯುವ trinity-day ಕಾರ್ಯಕ್ರಮದಲ್ಲಿ ಪ್ರತಿವರ್ಷ ವೀಣಾವಾದನವನ್ನೂ ಮಾಡುತ್ತಿದ್ದೀನಿ. ಕಳೆದ ವರ್ಷ ಅಮ್ಮ ಬಂದಾಗ ಇಲ್ಲಿನ ಒಪೆರಾ ಹೌಸ್ನಲ್ಲಿ ವೀಣೆ ನುಡಿಸಿದ್ದಂತೂ ಜೀವನದ ಮರೆಯಲಾಗದ ಅನುಭವಗಳಲ್ಲಿ ಒಂದು. ಒಮಾನಿ ಊದ್, ಜನಪದ ಕಲೆಗಳ ಪ್ರದರ್ಶನದ ನಡುವೆ ನಮ್ಮ ಅಚ್ಚ ದಕ್ಷಿಣ ಭಾರತದ ಸಾಂಪ್ರದಾಯಿಕ ವಾದ್ಯ ವೀಣೆ ಎಲ್ಲರ ಗಮನ ಸೆಳೆಯಿತು . ಹಲವರಿಂದ ಮೆಚ್ಚುಗೆ ಗಳಿಸಿತು. ಪಪ್ಪಾ ನಿಮಗಿದೇ ನನ್ನ ಶ್ರಧಾಂಜಲಿ ಎಂದುಕೊಂಡೆ

ನಾವು ಮಧ್ಯದಲ್ಲಿ ಎರಡು ವರ್ಷ ಊರು ಬದಲಿಸ ಬೇಕಾಯಿತು. ನನ್ನ ಕಳಕಳಿ ಎಷ್ಟಿತ್ತೆಂದರೆ, ಮಗಳು ಎಲ್ಲಿ ಕಲಿತ ಸಂಗೀತ ಮರೆಯುತ್ತಾಳೋ ಎಂದು ಅಲ್ಲಿಯೂ ಸಾಂಸ್ಕ್ರತಿಕ ವಾತಾವರಣಕ್ಕಾಗಿ ಹುಡುಕಾಡಿ ಅವಳು ಅಲ್ಲಿಯೂ ನಮ್ಮ ನ್ರತ್ಯ,ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿದೆ. ಅವಳು ಹಲವು ದಾಸ ಕೃತಿಗಳನ್ನು ಕಲಿತಳಲ್ಲದೆ ಹೊಸ ಗೆಳತಿಯರನ್ನು ಪಡೆದಳು .
ವೀಣೆಯನ್ನು ಮಸ್ಕತ್ತಿಗೆ ಹೊತ್ತುತಂದೆ. ಸಂಪೂರ್ಣ ಮರತೇ ಹೋಗಿದ್ದ ವಿದ್ಯೆಯನ್ನುಹೊಸ ಗುರುವಿನ ಸಹಾಯದಿಂದತೆ ನೆನಪಿಸಿ
ಕೊಂಡೆ. ಷಣ್ಮುಖ ಪ್ರಿಯದ ಸಿದ್ದಿ ವಿನಾಯಕಂ,ವಾತಾಪಿ,ಪಂಚರತ್ನ ಕೃತಿಗಳನ್ನೂಸಹ ವೀಣೆಯಲ್ಲಿ ಕಲಿತೆ. ಇಲ್ಲಿ ನಡೆಯುವ trinity-day ಕಾರ್ಯಕ್ರಮದಲ್ಲಿ ಪ್ರತಿವರ್ಷ ವೀಣಾವಾದನವನ್ನೂ ಮಾಡುತ್ತಿದ್ದೀನಿ. ಕಳೆದ ವರ್ಷ ಅಮ್ಮ ಬಂದಾಗ ಇಲ್ಲಿನ ಒಪೆರಾ ಹೌಸ್ನಲ್ಲಿ ವೀಣೆ ನುಡಿಸಿದ್ದಂತೂ ಜೀವನದ ಮರೆಯಲಾಗದ ಅನುಭವಗಳಲ್ಲಿ ಒಂದು. ಒಮಾನಿ ಊದ್, ಜನಪದ ಕಲೆಗಳ ಪ್ರದರ್ಶನದ ನಡುವೆ ನಮ್ಮ ಅಚ್ಚ ದಕ್ಷಿಣ ಭಾರತದ ಸಾಂಪ್ರದಾಯಿಕ ವಾದ್ಯ ವೀಣೆ ಎಲ್ಲರ ಗಮನ ಸೆಳೆಯಿತು . ಹಲವರಿಂದ ಮೆಚ್ಚುಗೆ ಗಳಿಸಿತು. ಪಪ್ಪಾ ನಿಮಗಿದೇ ನನ್ನ ಶ್ರಧಾಂಜಲಿ ಎಂದುಕೊಂಡೆ
ಈಗ ನಾನು ಒಂದು ಸಂಸ್ತೆಯ Legal Advisor. ನನ್ನ ಈ ಆಸಕ್ತಿ, ಮಗಳ ಓದು, ಸಂಗೀತ ಪಾಟಗಳು ಮನೆಯ ಕೆಲಸ- ಎಲ್ಲವನ್ನೂ ಸರಿದೂಗಿಸಿಗೊಂದು ಹೋಗಲು ಹೆಣಗುತ್ತಿದ್ದೇನೆ . ಈ ವರ್ಷ ಮಗಳೂ ೯ನೆಯ ತರಗತಿಗೆ ಬಂದಿದ್ದಾಳೆ . ಮಗಳಿಗೆ ಶಾಲೆಯ ಅಭ್ಯಾಸದ ಭಾರವೂ ಹೆಚ್ಚಾಗಿರುವುದರಿಂದ, ಅವಳ ಸಂಗೀತ ತರಗತಿಯ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಅವಳಿಗೆ ಅವಳ ಸಂಗೀತ ತರಗತಿಗಳನ್ನು ನಿಲ್ಲಿಸಬೇಕಾಗಿ ಬಂದಿದೆ. ಆದರೆ ನನ್ನ ತುಡಿತ ಅವಳನ್ನು ರತ್ನಮಾಲ ಪ್ರಕಾಶ್ ಹತ್ತಿರ ಸುಗಮ ಸಂಗೀತದ ಪಾಟಕ್ಕೂ, ಅಲ್ಲಿಂದ ಕರ್ನಾಟಕ ಸರಕಾರ ನಡೆಸುವ ಸಂಗೀತ ಮಾಧ್ಯಮಿಕ ಪರೀಕ್ಷೆಗೂ ಒಯ್ದಿದೆ. ಈ ಪರೀಕ್ಷೆಗೆ ಅವಳಿಗೆ ಗುರುವಾಗಿ ಸಹಕರಿಸಿದ್ದು ಶ್ರೀಯುತ ವೆಂಕಟ ರಾಗವನ್ ಎಂಬ ಮಹಾವಿದ್ವಾಂಸ.ನಮಗೆ ಅವರ ಬಗೆಗೆ ಏನೂ ತಿಳಿಯದೆಯ ನಾವು ಆಕಸ್ಮಿಕವಾಗಿ ಅವರ ಬಳಿಗೆ ಹೋಗಿ ಪ್ರೀತಿ ಈಗ ಅವರ ಶಿಷ್ಯೆ. ಅವರು ವಾರಕ್ಕೆ ಎರಡು ದಿನ ಅವರಿಂದ ಅಂತರ್ಜಾಲದ ಮೂಲಕ ಸಂಗೀತ ಕಲಿಯುತ್ತಿದ್ದಾಳೆ. ಅವಳು ಇನ್ನೂ ಹೆಚ್ಚಿನ ಹಂತಕ್ಕೆ ಏರುವಂತಾಗಲಿ ಎನ್ನುವುದು ನನ್ನ ಹಾರೈಕೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ