ಭಾನುವಾರ, ಸೆಪ್ಟೆಂಬರ್ 4, 2016

ಬ್ಯಾಡ್ ಮಿಂಟನ್ ಆಟ ಮತ್ತು ನಾವು

ಮಗಳಿಗೆ ಆಟ   ಹೇಳಿಕೊಡಲು  ಮೂರು ಬ್ಯಾಟ್ಗಳನ್ನು ತೆಗೆದುಕೊಂಡು ನಮ್ಮ ಮನರಂಜನಾ ಕ್ಲಬ್ಬಿನ ಆಟದ ಅಕಾಡಕ್ಕೆ ನಾವು ಪರಿವಾರ ಸಮೇತರಾಗಿ  ಆಡಲು ಆರಂಭಿಸಿದೆವು .  ಸ್ವಲ್ಪದಿನದಲ್ಲಿ ನಾನು ಆಡುವ ಹೆಂಗಸರ ಗುಂಪನ್ನು ಸೇರಿಕೊಂಡೆ. ಶಶಿ ಅವನ ಗೆಳೆಯರ ಗುಂಪನ್ನು ಸೇರಿಕೊಂಡ. ನಾನೂ ಮಗಳನ್ನು ಕರೆದುಕೊಂಡು ಸಾಧ್ಯವಾದಾಗಲೆಲ್ಲ ಆಡಲು ಹೋಗಲಾರ೦ಭಿಸಿದೆ . ಹೀಗೆ ಬ್ಯಾಡ್ಮಿಂಟನ್ ನಮ್ಮ ದಿನಚರಿಯ ಒಂದು ಮುಖ್ಯ ಭಾಗವನ್ನು ಪಡೆದುಕೊಂಡಿತು, ನಮ್ಮ ಆಟದ   ಗುಣಮಟ್ಟವೂ ಉತ್ತಮಗೊಂಡಿತು. ಇಲ್ಲಿನ ವಾರ್ಷಿಕ ಪಂದ್ಯಾವಳಿಯಲ್ಲಿ ಭಾಗವಹಿಸ  ತೊಡಗಿದೆವು, ಗೆಲ್ಲಲೂ ತೊಡಗಿದೆವು.  ನಾನೂ  ಮಹಿಳೆಯರ ವಿಭಾಗದಲ್ಲಿ ಉತ್ತಮ ಆಟಗಾತಿಯಾಗಿ ಗುರುತಿಸಿಕೊಂಡೆ. ಹೀಗೆ ಮಸ್ಕತ್ತಿನ ನಮ್ಮ  ಜೀವನದಲ್ಲಿ ಕಳೆದ ಐದು ವರ್ಷಗಳಲ್ಲಿ ಬ್ಯಾಡ್ಮಿಂಟನ್ ಆಟ ಬಹುಮುಖ್ಯ  ಸ್ಥಾನ ಪಡೆದುಕೊಂಡಿರುವ ಚಟುವಟಿಕೆ .  

ನಮ್ಮ ಕ್ರೀಡಾಂಗಣ

ದಿನ  ಕಳೆದಂತೆ ಈ  ಆಟ ನಮ್ಮ ಜೀವನದ ಗಂಭೀರ ಬಾಗವಾಯಿತು. ಶಶಿಯಂತೂ ಏನೇ ಆಗಲಿ ಈ ಆಟವನ್ನು ನಿಲ್ಲಿಸಲಾರೆ ಎಂಬ ಸ್ಥಿತಿ ತಲುಪಿದ. ನನ್ನ ಬೇಸರ, ಕೋಪ, ತಾಪ, ರಾತ್ರಿಯಲ್ಲಿ ನಾನೂಬ್ಬಳೇ  ಹೋಗಿ ಮಗಳನ್ನು ಮನೆಪಾಟಗಳಿಂದ ಕರೆದು ತರುವುದು ಯಾವುದೂ ಅವನ ಆಟಕ್ಕೆ ಭಂಗ ತರಲಾರದಾಯಿತು ಯಾರ ಮನೆಯಲ್ಲಾದರೂ ಇವನ ಆಟದ ದಿನ ಊಟಕ್ಕೆ ಕರೆದರೆ, ಅವರೆಲ್ಲ ಇವನು ಆಟ ಮುಗಿಸಿ ಬರುವ ತನಕ ಕುಳಿತು ಕಾಯಬೇಕಾಗುತ್ತಿತ್ತು !!


ದೀಪಾವಳಿ ಆಚರಣೆ

 ಈ ಚಟುವಟಿಕೆ ನಮಗೆ ಅನೇಕ ವಿಶಿಷ್ಠ ಅನುಭವ ಗಳನ್ನು ನೀಡಿತು. ಈ ಆಟದಿಂದ ನಮಗೆ ಆದ ಅತ್ಯಂತ ದೊಡ್ಡ ಉಪಯೋಗವೆಂದರೆ ಆದು  ನಮಗೆ ಒದಗಿಸಿದ ಹಲವು ದೇಶಗಳ ಸ್ನೇಹಿತರು. ನನ್ನ ಸ್ನೇಹಿತೆಯರ ಪಟ್ಟಿಯಲ್ಲಿ ಈಗ ಒಮಾನ್, ಇಂಗ್ಲಂಡ್, ನೆಥೆರ್ಲಂಡ್, ಇಂಡೋನೇಶಿಯ-ಹೀಗೆ ಬೇರೆ ಬೇರೆ ದೇಶದ ಜನರು ಸೇರಿಕೊಂಡರು. ಆ ನಮ್ಮ ಹಬ್ಬಗಳಿಗೆ ಒಮಾನಿ ಸ್ನೇಹಿತೆಯರ ಸಂದೇಶಗಳು ಬಂದಾಗ ನನ್ನ ಹೃದಯ ತುಂಬಿ ಬಂದಿತು . ಬ್ಯಾಡ್ಮಿಂಟನ್ ಮಹಿಳೆಯರೆಲ್ಲ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಹೊರಟಾಗ ನಾನು ಮೂಕವಿಸ್ಮಿತಳಾದೆ . ಒಂದು ಕ್ರೀಡೆಗೆ ಇರುವ ಶಕ್ತಿಯನ್ನು ಕಂಡು  ಅಚ್ಚರಿಗೊಂಡೆ . ದೀಪಾವಳಿಯನ್ನು ನನ್ನ ಆಟಗಾತಿ ಗೆಳತಿಯರೊಡನೆ  ಆಚರಿಸಲು ನನ್ನ ಮಗಳನ್ನು ಕರೆದುಕೊಂಡು ಹೋದೆ. ಹಣತೆಗಳನ್ನು ಜೋಡಿಸಿ  ಹಚ್ಚಿ ತೋರಿಸಿ,ದೀಪಾವಳಿ ಹಬ್ಬದ ಬಗೆಗೆ ನನ್ನ ಬಹುರಾಷ್ಟ್ರೀಯ  ವಿವರಿಸ ಎಲ್ಲರೂ ತಂದ ತಿಂಡಿಗಳನ್ನು ಹಂಚಿ ತಿಂದೆವು. ಹಿಂದಿ ಹಾಡುಗಳಿಗೆ ನರ್ತಿಸಿದೆವು. 

 ಮೊದಲ ಬಾರಿ ಒಟ್ಟಿಗೆ ಗೆದ್ದಿದ್ದು
ಶಶಿ ಇಲ್ಲಿನ ಬ್ಯಾಡ್ಮಿಂಟನ್ ಸೆಕ್ಷನ್ನಿನ ಸದಸ್ಯನಾದ ಅದರೊಂದಿಗೆ ಆ ಆಟದ ಹತ್ತು ಹಲವು ಜವಾಬ್ದಾರಿಗಳು ಅವನೊಂದಿಗೆ ನಮ್ಮ ಮೇಲೂ ಬಂದವು . ಈ ಆಟದ ವಿಚಾರವಾಗಿ ನಡೆಯುವ ರಾಜಕರಾಜಕೀಯದ ಪರಿಚಯವಾಯಿತು. ವರ್ಷದಲ್ಲಿ ಒಮ್ಮೆ ನಡೆಸುವ ವಾರ್ಷಿಕ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊರುವಂತಾಯಿತು. ಇಬ್ಬರು ಭಾರತೀಯರು ಮತ್ತು ಒಬ್ಬ ಮಲೇಷ್ಯಾದವರನ್ನು  ಒಳಗೊಂಡ   ಬ್ಯಾಡ್ಮಿಂಟನ್ ಪದಾಧಿಕಾರಿಗಳ ತಂಡ ವಾರ್ಷಿಕ ಪಂದ್ಯಾವಳಿಯನ್ನು ಆಯೋಜಿಸಿ  ಹಲವು ದೇಶದ ಜನರೆಲ್ಲ ಒಟ್ಟಿಗೆ ಆಡುವಂತಾಯಿತು. ಪಾಕಿಸ್ತಾನದ ಸಹ ಕ್ರೀಡಾಳುವಿನೊಂದಿಗೆ   ಶಶಿ , ಇಂಡೋನೇಷಿಯಾದ ಕ್ರೀಡಾಳುವಿನೊಂದಿಗೆ ನಾನು ಆಡಿ ಪಂದ್ಯಾವಳಿಯನ್ನುಗೆದ್ದಿದ್ದು, ಮನುಷ್ಯರ ಭೇದಭಾವಗಳನ್ನು ಮರೆಮಾಡುವಲ್ಲಿ ಕ್ರೀಡೆಗೆ ಇರುವ ಶಕ್ತಿಯ   ಒಂದು ಚಿಕ್ಕ ನಿದರ್ಶನ.                                                                                                                                                                                                                                                                                                               
ಬಹುರಾಷ್ಟ್ರೀಯ ಕ್ರೀಡಾಳುಗಳು 
                                                                                                                                                                                                                                                                                                                                     ಸುಮ್ಮನೆ ಮೋಜಿಗಾಗಿ, ವ್ಯಾಯಾಮಕ್ಕಾಗಿ ಆರಂಭಿಸಿದ ಈ ಚಟುವಟಿಕೆ ನಮ್ಮ ಜೀವನದಲ್ಲಿ ಹಲವು ವಿಶಿಷ್ಟ ಹೊಸ  ಅನುಭವಗಳಿಗೆ ಕಾರಣವಾಯಿತು. ಕ್ರೀಡೆಗೆ ಯಾವುದೇ   ಪ್ರಾಶಸ್ತ್ಯವಿಲ್ಲದ ವಾತಾವರಣದಲ್ಲಿ ಬೆಳೆದು ಬಂದ ನನಗೆ ಒಂದು ಕ್ರೀಡೆಯಿಂದಾಗುವ  ಅನುಭವಗಳ ವಿಶ್ವರೂಪ     ದರ್ಶನವನ್ನು ಈ ಆಟ ಮಾಡಿಸಿತು. ನಾನಂತೂ ಚಿಕ್ಕ ಮಕ್ಕಳಿಗೆ ಈ ಆಟವನ್ನು ಪರಿಚಯಯಿಸಲು ಅವಕಾಶ ಸಿಕ್ಕಾಗಲೆಲ್ಲ ಕಲಿಸುತ್ತೇನೆ. 






ಗುರುವಾರ, ಫೆಬ್ರವರಿ 18, 2016

ಕನ್ನಡ ಶಿಕ್ಷಕಿಯಾಗಿ ನನ್ನ ಸಂದೇಶ

ಹೊಸ ಚಿಗುರು ಹಳೆ  ಬೇರು ಕೂಡಿರಲು ಮರ ಸೊಗಸು 
ಹೊಸ ಯುಕ್ತಿ   ಹಳೆ ತತ್ವ ಒದಗೂಡೆ ಧರ್ಮ 
ಋಷಿ ವಾಖ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ 
ಜಸವು ಜೀವನಕೆ ಮಂಕುತಿಮ್ಮ 

ಕಗ್ಗದ ಈ  ಸಾಲುಗಳು  ನನಗೆ ಬಹಳ ಇಷ್ಟವಾದುವು. ಇವನ್ನು ಜೀವನದ  ಹಲವು ಸನ್ನಿವೇಶಗಳಲ್ಲಿ ಅಳವಡಿಸಿಕೊಳ್ಳಬಹುದು. ನಮ್ಮ ಹಳೆಯ ಕಲಿಕೆಯ ಬುನಾದಿಯ ಮೇಲೆ ಹೊಸತಾಗಿ ಕಲಿತದ್ದನ್ನು ಸೇರಿಸಿಕೊಂಡಾಗ ಜೀವನ ಇನ್ನೂ ಅರ್ಥಪೂರ್ಣವೆನಿಸುತ್ತದೆ. ನಾವು   ಹೊಸತನ್ನು ಕಲಿಯಬೇಕಾದರೆ ನಮ್ಮ ಹಿಂದಿನ ಸಂಸ್ಕಾರವನ್ನು ಮರೆಯಬೇಕೆಂದಿಲ್ಲ . ನಮ್ಮ ಮಕ್ಕಳು ಇಂಗ್ಲಿಶ್ ಕಲಿಯಬೇಕಾದರೆ ನಮ್ಮ ಭಾಷೆಯನ್ನೂ ಬಿಟ್ಟು ಅದನ್ನು ಕಲಿಸಬೆಕೆನ್ದಿಲ್ಲ. 

ನನ್ನಲ್ಲಿ ನನ್ನ  ಮಾತ್ರಭಾಷೆಯ ಬಗೆಗೆ ಇಷ್ಟೊಂದು ಅಭಿಮಾನವಿದೆ ಎಂದು ತಿಳಿದಿದ್ದೇ ನಾನು ನಮ್ಮೊರನ್ನು ಬಿಟ್ಟ ಮೇಲೆ. ಮಗಳು ಹುಟ್ಟಿದ ಮೇಲೆ   ಅದು ಇನ್ನೂ ಜಾಸ್ತಿಯಾಯಿತು  ಎನಿಸುತ್ತದೆ. ನಾವು ದೇಶ ಬಿಟ್ಟ ಕಳೆದ ಹತ್ತು ವರ್ಷಗಳಲ್ಲಿ, ನಮ್ಮ ಮಗಳು ವಿದೇಶದಲ್ಲಿ ಬೆಳೆದೂ ಕನ್ನಡಿಗಳಾಗಿ ಬೆಳೆಯಬೇಕೆಂಬ ನನ್ನ ಅಭಿಲಾಷೆ ನನ್ನನ್ನುಮಸ್ಕತ್ ಕನ್ನಡ ಸಂಘದ ಕನ್ನಡ ತರಗತಿಗೆ ಕರೆದುಕೊಂಡುಬಂದಿತು. ನಂತರ ನಾನೂ ಕನ್ನಡ ಕಲಿಸಲು ಸೇರಿಕೊಂಡೆ.   ಹೀಗೆ  ೨೦೦೮ ರಿಂದ ಇಲ್ಲಿಯತನಕ ಇಲ್ಲಿ ಕನ್ನಡ ಕಳಿಸುತ್ತಿದ್ದೇನೆ, ಅಲ್ಲದೆ ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಕರ್ನಾಟಕದ ಸಂಪೂರ್ಣ ಅರಿವು ಮೂಡಿಸಲು ಕನ್ನಡ ಕಲಿ-ನಲಿ ಚಳಿಗಾಲದ ಶಿಬಿರವನ್ನೂ ಮಾಡುತ್ತಿದ್ದೇವೆ. ಈ ನನ್ನ ಅನುಭವವು  ನನಗೆ ಏನು ಹೇಳುತ್ತದೆಂದರೆ ನಾವು ಕಲಿಸುವುದೇ ತಡ, ಮಕ್ಕಳು ಕಲಿಯಲು ತಯಾರಿರುತ್ತಾರೆ . ಆದ್ದರಿಂದ ಯಾವ ಭಾಷೆಯ ಮಕ್ಕಳೇ ಆಗಿರಲಿ,ಮಕ್ಕಳಿಗೆ ಮಾತ್ರಭಾಷೆ ಬರುವುದಿಲ್ಲ ಎಂದರೆ ಮೊದಲಿಗೆ ಅವರ ತಂದೆ ತಾಯಿಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ . ಮಕ್ಕಳು ಹೊರಗಡೆಯಲ್ಲೆಲ್ಲ ಬರಿಯ ಇಂಗ್ಲಿಷ್ ಕೇಳುವುದರಿಂದ,  ಸಹಜವಾಗಿ ಮನೆಯಲ್ಲಿ  ಮಕ್ಕಳು  ಇಂಗ್ಲೀಷ್ ಮಾತನಾಡುತ್ತಾರೆ ಆದರೆ ಅವರಿಗೆ ಮಾತ್ರಭಾಷೆಯಲ್ಲಿಯೇ   ಉತ್ತರಕೊಟ್ಟು    ಅವರನ್ನು ನಮ್ಮ ಭಾಷೆಯ ಅರಿವಿನೊಂದಿಗೆ ಬೆಳೆಸಬೇಕಾದುದು ತಂದೆ ತಾಯಿಯರ ಕರ್ತವ್ಯ .

 ಇಂದಿನ ಮಾಹಿತಿ ತಂತ್ರಜ್ನಾದ ಯುಗದಲ್ಲಿ ನಮ್ಮ  ಭಾಷೆಯನ್ನೂ ನಮ್ಮ ಮಕ್ಕಳಿಗೆ ಕಲಿಸುವುದು    ವಿಷಯವಲ್ಲ . ನಮ್ಮ ಕೈಯ್ಯಲ್ಲಿರುವ   ಅಧ್ಬುತ   ಉಪಕರಣ ನಮ್ಮ ಮೊಬೈಲ್ ಫೋನುಗಳೇ ಸಾಕು.  ಉಪಕರಣದ ಪ್ಲೆ ಸ್ಟೋರ್ ನಲ್ಲಿ ಹುಡುಕಿ....ಹತ್ತು  ಕಲಿಕೆಯ ಆಪ್ಗಳು ಸಿಗುತ್ತವೆ. ಅದರಲ್ಲಿ  ಆಸಕ್ತಿಯಿಂದ ಕನ್ನಡ ಕಲಿಯಲೋ ಆಗುತ್ತದೆ.  ಕಲಿಸುವುದೆಂದರೆ ಅವರನ್ನು ಕಡ್ಡಾಯವಾಗಿ ಪುಸ್ತಕದ ಮುಂದೆ ಕೂರಿಸಿ ಶಿಕ್ಷೆ ಕೊಡಬೇಕೆಂದಿಲ್ಲ .  ಕನ್ನಡ ಚಲನಚಿತ್ರಗಳನ್ನು ತೊರಿಸಬಹುದು. , ನಾವು ಈ  ತೋರಿಸಿದ ಕನ್ನಡ ಚಲನಚಿತ್ರವನ್ನು ಮಕ್ಕಳು  ಸಂತೋಷದಿಂದ ಸಂಭಾಷಣೆಯನ್ನು ಅರ್ಥಮಾಡಿಕೊಂಡು ನೊಡಿದರು ನಮಗೆ ಏನು ಇಷ್ಟವೂ ಅದನ್ನು ಮಕ್ಕಳೊಂದಿಗೆ ಮಾಡಿದರೆ  ನಮ್ಮಭಾಷೆಯನ್ನು ನಮ್ಮ ಮಕ್ಕಳು  ಗರ್ವದಿಂದ ಕಲಿಯುತ್ತಾರೆ.    

ಈಗ ಈ ಕನ್ನಡ     ತರಗತಿಗಳಿಂದ ಆರಂಭವಾದ ಕನ್ನಡ ಕಲಿಕೆಯು ನಿರಂ ಮುಂದುವರಿಯಲಿ,ಎಲ್ಲಾದರೂ  ಇರು ಎಂತಾದರೂ  ಇರು ಎಂದೆಂದಿಗೂ ನೀ ಕನ್ನಡವಾಗಿರು                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                            ೦