ಭಾನುವಾರ, ಸೆಪ್ಟೆಂಬರ್ 4, 2016

ಬ್ಯಾಡ್ ಮಿಂಟನ್ ಆಟ ಮತ್ತು ನಾವು

ಮಗಳಿಗೆ ಆಟ   ಹೇಳಿಕೊಡಲು  ಮೂರು ಬ್ಯಾಟ್ಗಳನ್ನು ತೆಗೆದುಕೊಂಡು ನಮ್ಮ ಮನರಂಜನಾ ಕ್ಲಬ್ಬಿನ ಆಟದ ಅಕಾಡಕ್ಕೆ ನಾವು ಪರಿವಾರ ಸಮೇತರಾಗಿ  ಆಡಲು ಆರಂಭಿಸಿದೆವು .  ಸ್ವಲ್ಪದಿನದಲ್ಲಿ ನಾನು ಆಡುವ ಹೆಂಗಸರ ಗುಂಪನ್ನು ಸೇರಿಕೊಂಡೆ. ಶಶಿ ಅವನ ಗೆಳೆಯರ ಗುಂಪನ್ನು ಸೇರಿಕೊಂಡ. ನಾನೂ ಮಗಳನ್ನು ಕರೆದುಕೊಂಡು ಸಾಧ್ಯವಾದಾಗಲೆಲ್ಲ ಆಡಲು ಹೋಗಲಾರ೦ಭಿಸಿದೆ . ಹೀಗೆ ಬ್ಯಾಡ್ಮಿಂಟನ್ ನಮ್ಮ ದಿನಚರಿಯ ಒಂದು ಮುಖ್ಯ ಭಾಗವನ್ನು ಪಡೆದುಕೊಂಡಿತು, ನಮ್ಮ ಆಟದ   ಗುಣಮಟ್ಟವೂ ಉತ್ತಮಗೊಂಡಿತು. ಇಲ್ಲಿನ ವಾರ್ಷಿಕ ಪಂದ್ಯಾವಳಿಯಲ್ಲಿ ಭಾಗವಹಿಸ  ತೊಡಗಿದೆವು, ಗೆಲ್ಲಲೂ ತೊಡಗಿದೆವು.  ನಾನೂ  ಮಹಿಳೆಯರ ವಿಭಾಗದಲ್ಲಿ ಉತ್ತಮ ಆಟಗಾತಿಯಾಗಿ ಗುರುತಿಸಿಕೊಂಡೆ. ಹೀಗೆ ಮಸ್ಕತ್ತಿನ ನಮ್ಮ  ಜೀವನದಲ್ಲಿ ಕಳೆದ ಐದು ವರ್ಷಗಳಲ್ಲಿ ಬ್ಯಾಡ್ಮಿಂಟನ್ ಆಟ ಬಹುಮುಖ್ಯ  ಸ್ಥಾನ ಪಡೆದುಕೊಂಡಿರುವ ಚಟುವಟಿಕೆ .  

ನಮ್ಮ ಕ್ರೀಡಾಂಗಣ

ದಿನ  ಕಳೆದಂತೆ ಈ  ಆಟ ನಮ್ಮ ಜೀವನದ ಗಂಭೀರ ಬಾಗವಾಯಿತು. ಶಶಿಯಂತೂ ಏನೇ ಆಗಲಿ ಈ ಆಟವನ್ನು ನಿಲ್ಲಿಸಲಾರೆ ಎಂಬ ಸ್ಥಿತಿ ತಲುಪಿದ. ನನ್ನ ಬೇಸರ, ಕೋಪ, ತಾಪ, ರಾತ್ರಿಯಲ್ಲಿ ನಾನೂಬ್ಬಳೇ  ಹೋಗಿ ಮಗಳನ್ನು ಮನೆಪಾಟಗಳಿಂದ ಕರೆದು ತರುವುದು ಯಾವುದೂ ಅವನ ಆಟಕ್ಕೆ ಭಂಗ ತರಲಾರದಾಯಿತು ಯಾರ ಮನೆಯಲ್ಲಾದರೂ ಇವನ ಆಟದ ದಿನ ಊಟಕ್ಕೆ ಕರೆದರೆ, ಅವರೆಲ್ಲ ಇವನು ಆಟ ಮುಗಿಸಿ ಬರುವ ತನಕ ಕುಳಿತು ಕಾಯಬೇಕಾಗುತ್ತಿತ್ತು !!


ದೀಪಾವಳಿ ಆಚರಣೆ

 ಈ ಚಟುವಟಿಕೆ ನಮಗೆ ಅನೇಕ ವಿಶಿಷ್ಠ ಅನುಭವ ಗಳನ್ನು ನೀಡಿತು. ಈ ಆಟದಿಂದ ನಮಗೆ ಆದ ಅತ್ಯಂತ ದೊಡ್ಡ ಉಪಯೋಗವೆಂದರೆ ಆದು  ನಮಗೆ ಒದಗಿಸಿದ ಹಲವು ದೇಶಗಳ ಸ್ನೇಹಿತರು. ನನ್ನ ಸ್ನೇಹಿತೆಯರ ಪಟ್ಟಿಯಲ್ಲಿ ಈಗ ಒಮಾನ್, ಇಂಗ್ಲಂಡ್, ನೆಥೆರ್ಲಂಡ್, ಇಂಡೋನೇಶಿಯ-ಹೀಗೆ ಬೇರೆ ಬೇರೆ ದೇಶದ ಜನರು ಸೇರಿಕೊಂಡರು. ಆ ನಮ್ಮ ಹಬ್ಬಗಳಿಗೆ ಒಮಾನಿ ಸ್ನೇಹಿತೆಯರ ಸಂದೇಶಗಳು ಬಂದಾಗ ನನ್ನ ಹೃದಯ ತುಂಬಿ ಬಂದಿತು . ಬ್ಯಾಡ್ಮಿಂಟನ್ ಮಹಿಳೆಯರೆಲ್ಲ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಹೊರಟಾಗ ನಾನು ಮೂಕವಿಸ್ಮಿತಳಾದೆ . ಒಂದು ಕ್ರೀಡೆಗೆ ಇರುವ ಶಕ್ತಿಯನ್ನು ಕಂಡು  ಅಚ್ಚರಿಗೊಂಡೆ . ದೀಪಾವಳಿಯನ್ನು ನನ್ನ ಆಟಗಾತಿ ಗೆಳತಿಯರೊಡನೆ  ಆಚರಿಸಲು ನನ್ನ ಮಗಳನ್ನು ಕರೆದುಕೊಂಡು ಹೋದೆ. ಹಣತೆಗಳನ್ನು ಜೋಡಿಸಿ  ಹಚ್ಚಿ ತೋರಿಸಿ,ದೀಪಾವಳಿ ಹಬ್ಬದ ಬಗೆಗೆ ನನ್ನ ಬಹುರಾಷ್ಟ್ರೀಯ  ವಿವರಿಸ ಎಲ್ಲರೂ ತಂದ ತಿಂಡಿಗಳನ್ನು ಹಂಚಿ ತಿಂದೆವು. ಹಿಂದಿ ಹಾಡುಗಳಿಗೆ ನರ್ತಿಸಿದೆವು. 

 ಮೊದಲ ಬಾರಿ ಒಟ್ಟಿಗೆ ಗೆದ್ದಿದ್ದು
ಶಶಿ ಇಲ್ಲಿನ ಬ್ಯಾಡ್ಮಿಂಟನ್ ಸೆಕ್ಷನ್ನಿನ ಸದಸ್ಯನಾದ ಅದರೊಂದಿಗೆ ಆ ಆಟದ ಹತ್ತು ಹಲವು ಜವಾಬ್ದಾರಿಗಳು ಅವನೊಂದಿಗೆ ನಮ್ಮ ಮೇಲೂ ಬಂದವು . ಈ ಆಟದ ವಿಚಾರವಾಗಿ ನಡೆಯುವ ರಾಜಕರಾಜಕೀಯದ ಪರಿಚಯವಾಯಿತು. ವರ್ಷದಲ್ಲಿ ಒಮ್ಮೆ ನಡೆಸುವ ವಾರ್ಷಿಕ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊರುವಂತಾಯಿತು. ಇಬ್ಬರು ಭಾರತೀಯರು ಮತ್ತು ಒಬ್ಬ ಮಲೇಷ್ಯಾದವರನ್ನು  ಒಳಗೊಂಡ   ಬ್ಯಾಡ್ಮಿಂಟನ್ ಪದಾಧಿಕಾರಿಗಳ ತಂಡ ವಾರ್ಷಿಕ ಪಂದ್ಯಾವಳಿಯನ್ನು ಆಯೋಜಿಸಿ  ಹಲವು ದೇಶದ ಜನರೆಲ್ಲ ಒಟ್ಟಿಗೆ ಆಡುವಂತಾಯಿತು. ಪಾಕಿಸ್ತಾನದ ಸಹ ಕ್ರೀಡಾಳುವಿನೊಂದಿಗೆ   ಶಶಿ , ಇಂಡೋನೇಷಿಯಾದ ಕ್ರೀಡಾಳುವಿನೊಂದಿಗೆ ನಾನು ಆಡಿ ಪಂದ್ಯಾವಳಿಯನ್ನುಗೆದ್ದಿದ್ದು, ಮನುಷ್ಯರ ಭೇದಭಾವಗಳನ್ನು ಮರೆಮಾಡುವಲ್ಲಿ ಕ್ರೀಡೆಗೆ ಇರುವ ಶಕ್ತಿಯ   ಒಂದು ಚಿಕ್ಕ ನಿದರ್ಶನ.                                                                                                                                                                                                                                                                                                               
ಬಹುರಾಷ್ಟ್ರೀಯ ಕ್ರೀಡಾಳುಗಳು 
                                                                                                                                                                                                                                                                                                                                     ಸುಮ್ಮನೆ ಮೋಜಿಗಾಗಿ, ವ್ಯಾಯಾಮಕ್ಕಾಗಿ ಆರಂಭಿಸಿದ ಈ ಚಟುವಟಿಕೆ ನಮ್ಮ ಜೀವನದಲ್ಲಿ ಹಲವು ವಿಶಿಷ್ಟ ಹೊಸ  ಅನುಭವಗಳಿಗೆ ಕಾರಣವಾಯಿತು. ಕ್ರೀಡೆಗೆ ಯಾವುದೇ   ಪ್ರಾಶಸ್ತ್ಯವಿಲ್ಲದ ವಾತಾವರಣದಲ್ಲಿ ಬೆಳೆದು ಬಂದ ನನಗೆ ಒಂದು ಕ್ರೀಡೆಯಿಂದಾಗುವ  ಅನುಭವಗಳ ವಿಶ್ವರೂಪ     ದರ್ಶನವನ್ನು ಈ ಆಟ ಮಾಡಿಸಿತು. ನಾನಂತೂ ಚಿಕ್ಕ ಮಕ್ಕಳಿಗೆ ಈ ಆಟವನ್ನು ಪರಿಚಯಯಿಸಲು ಅವಕಾಶ ಸಿಕ್ಕಾಗಲೆಲ್ಲ ಕಲಿಸುತ್ತೇನೆ. 






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ