ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು
ಹೊಸ ಯುಕ್ತಿ ಹಳೆ ತತ್ವ ಒದಗೂಡೆ ಧರ್ಮ
ಋಷಿ ವಾಖ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜೀವನಕೆ ಮಂಕುತಿಮ್ಮ
ಕಗ್ಗದ ಈ ಸಾಲುಗಳು ನನಗೆ ಬಹಳ ಇಷ್ಟವಾದುವು. ಇವನ್ನು ಜೀವನದ ಹಲವು ಸನ್ನಿವೇಶಗಳಲ್ಲಿ ಅಳವಡಿಸಿಕೊಳ್ಳಬಹುದು. ನಮ್ಮ ಹಳೆಯ ಕಲಿಕೆಯ ಬುನಾದಿಯ ಮೇಲೆ ಹೊಸತಾಗಿ ಕಲಿತದ್ದನ್ನು ಸೇರಿಸಿಕೊಂಡಾಗ ಜೀವನ ಇನ್ನೂ ಅರ್ಥಪೂರ್ಣವೆನಿಸುತ್ತದೆ. ನಾವು ಹೊಸತನ್ನು ಕಲಿಯಬೇಕಾದರೆ ನಮ್ಮ ಹಿಂದಿನ ಸಂಸ್ಕಾರವನ್ನು ಮರೆಯಬೇಕೆಂದಿಲ್ಲ . ನಮ್ಮ ಮಕ್ಕಳು ಇಂಗ್ಲಿಶ್ ಕಲಿಯಬೇಕಾದರೆ ನಮ್ಮ ಭಾಷೆಯನ್ನೂ ಬಿಟ್ಟು ಅದನ್ನು ಕಲಿಸಬೆಕೆನ್ದಿಲ್ಲ.
ನನ್ನಲ್ಲಿ ನನ್ನ ಮಾತ್ರಭಾಷೆಯ ಬಗೆಗೆ ಇಷ್ಟೊಂದು ಅಭಿಮಾನವಿದೆ ಎಂದು ತಿಳಿದಿದ್ದೇ ನಾನು ನಮ್ಮೊರನ್ನು ಬಿಟ್ಟ ಮೇಲೆ. ಮಗಳು ಹುಟ್ಟಿದ ಮೇಲೆ ಅದು ಇನ್ನೂ ಜಾಸ್ತಿಯಾಯಿತು ಎನಿಸುತ್ತದೆ. ನಾವು ದೇಶ ಬಿಟ್ಟ ಕಳೆದ ಹತ್ತು ವರ್ಷಗಳಲ್ಲಿ, ನಮ್ಮ ಮಗಳು ವಿದೇಶದಲ್ಲಿ ಬೆಳೆದೂ ಕನ್ನಡಿಗಳಾಗಿ ಬೆಳೆಯಬೇಕೆಂಬ ನನ್ನ ಅಭಿಲಾಷೆ ನನ್ನನ್ನುಮಸ್ಕತ್ ಕನ್ನಡ ಸಂಘದ ಕನ್ನಡ ತರಗತಿಗೆ ಕರೆದುಕೊಂಡುಬಂದಿತು. ನಂತರ ನಾನೂ ಕನ್ನಡ ಕಲಿಸಲು ಸೇರಿಕೊಂಡೆ. ಹೀಗೆ ೨೦೦೮ ರಿಂದ ಇಲ್ಲಿಯತನಕ ಇಲ್ಲಿ ಕನ್ನಡ ಕಳಿಸುತ್ತಿದ್ದೇನೆ, ಅಲ್ಲದೆ ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಕರ್ನಾಟಕದ ಸಂಪೂರ್ಣ ಅರಿವು ಮೂಡಿಸಲು ಕನ್ನಡ ಕಲಿ-ನಲಿ ಚಳಿಗಾಲದ ಶಿಬಿರವನ್ನೂ ಮಾಡುತ್ತಿದ್ದೇವೆ. ಈ ನನ್ನ ಅನುಭವವು ನನಗೆ ಏನು ಹೇಳುತ್ತದೆಂದರೆ ನಾವು ಕಲಿಸುವುದೇ ತಡ, ಮಕ್ಕಳು ಕಲಿಯಲು ತಯಾರಿರುತ್ತಾರೆ . ಆದ್ದರಿಂದ ಯಾವ ಭಾಷೆಯ ಮಕ್ಕಳೇ ಆಗಿರಲಿ,ಮಕ್ಕಳಿಗೆ ಮಾತ್ರಭಾಷೆ ಬರುವುದಿಲ್ಲ ಎಂದರೆ ಮೊದಲಿಗೆ ಅವರ ತಂದೆ ತಾಯಿಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ . ಮಕ್ಕಳು ಹೊರಗಡೆಯಲ್ಲೆಲ್ಲ ಬರಿಯ ಇಂಗ್ಲಿಷ್ ಕೇಳುವುದರಿಂದ, ಸಹಜವಾಗಿ ಮನೆಯಲ್ಲಿ ಮಕ್ಕಳು ಇಂಗ್ಲೀಷ್ ಮಾತನಾಡುತ್ತಾರೆ ಆದರೆ ಅವರಿಗೆ ಮಾತ್ರಭಾಷೆಯಲ್ಲಿಯೇ ಉತ್ತರಕೊಟ್ಟು ಅವರನ್ನು ನಮ್ಮ ಭಾಷೆಯ ಅರಿವಿನೊಂದಿಗೆ ಬೆಳೆಸಬೇಕಾದುದು ತಂದೆ ತಾಯಿಯರ ಕರ್ತವ್ಯ .
ಇಂದಿನ ಮಾಹಿತಿ ತಂತ್ರಜ್ನಾದ ಯುಗದಲ್ಲಿ ನಮ್ಮ ಭಾಷೆಯನ್ನೂ ನಮ್ಮ ಮಕ್ಕಳಿಗೆ ಕಲಿಸುವುದು ವಿಷಯವಲ್ಲ . ನಮ್ಮ ಕೈಯ್ಯಲ್ಲಿರುವ ಅಧ್ಬುತ ಉಪಕರಣ ನಮ್ಮ ಮೊಬೈಲ್ ಫೋನುಗಳೇ ಸಾಕು. ಉಪಕರಣದ ಪ್ಲೆ ಸ್ಟೋರ್ ನಲ್ಲಿ ಹುಡುಕಿ....ಹತ್ತು ಕಲಿಕೆಯ ಆಪ್ಗಳು ಸಿಗುತ್ತವೆ. ಅದರಲ್ಲಿ ಆಸಕ್ತಿಯಿಂದ ಕನ್ನಡ ಕಲಿಯಲೋ ಆಗುತ್ತದೆ. ಕಲಿಸುವುದೆಂದರೆ ಅವರನ್ನು ಕಡ್ಡಾಯವಾಗಿ ಪುಸ್ತಕದ ಮುಂದೆ ಕೂರಿಸಿ ಶಿಕ್ಷೆ ಕೊಡಬೇಕೆಂದಿಲ್ಲ . ಕನ್ನಡ ಚಲನಚಿತ್ರಗಳನ್ನು ತೊರಿಸಬಹುದು. , ನಾವು ಈ ತೋರಿಸಿದ ಕನ್ನಡ ಚಲನಚಿತ್ರವನ್ನು ಮಕ್ಕಳು ಸಂತೋಷದಿಂದ ಸಂಭಾಷಣೆಯನ್ನು ಅರ್ಥಮಾಡಿಕೊಂಡು ನೊಡಿದರು ನಮಗೆ ಏನು ಇಷ್ಟವೂ ಅದನ್ನು ಮಕ್ಕಳೊಂದಿಗೆ ಮಾಡಿದರೆ ನಮ್ಮಭಾಷೆಯನ್ನು ನಮ್ಮ ಮಕ್ಕಳು ಗರ್ವದಿಂದ ಕಲಿಯುತ್ತಾರೆ.
ಈಗ ಈ ಕನ್ನಡ ತರಗತಿಗಳಿಂದ ಆರಂಭವಾದ ಕನ್ನಡ ಕಲಿಕೆಯು ನಿರಂ ಮುಂದುವರಿಯಲಿ,ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ೦

ಹೊರದೇಶದಲ್ಲಿದ್ದು ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ಪ್ರತ್ಯುತ್ತರಅಳಿಸಿnimma prashamsegaagi dhanyavaadagalu
ಅಳಿಸಿ