ಸೋಮವಾರ, ನವೆಂಬರ್ 11, 2013

ನನ್ನ ಸಂಗೀತಾಸಕ್ತಿ

ನಮ್ಮ ಯಾವುದಾದರೊಂದು  ಆಸಕ್ತಿಯ ಬೆನ್ನಹಿಂದೆ ನಾವು ಜೀವನದಲ್ಲಿ ಹೋದಾಗ ಎಷ್ಟೆಲ್ಲಾ ಹೊಸ ಅನುಭವಗಳು ಆಗುತ್ತವೆ
ಎಂಬುದಕ್ಕೆ ನನ್ನ ಸಂಗೀತದ ಅನುಭವಗಳು ಒಂದು ಉತ್ತಮ ಉದಾಹರಣೆ. ಕೆಲಸ ಮಾಡ ಬೇಕೆಂಬ ನನ್ನ ಆಸೆ ನಾವು ವಿದೇಶಕ್ಕೆ ಬದುದರಿಂದ ಪಲಿಸದೇ ನಾನು ಗ್ರಹಿಣಿಯಾಗಿ ಕಾಲ ಕಳೆಯಬೇಕಾಗಿ ಬಂತು. ನನ್ನ ಒಂದು ಆಸಕ್ತಿಯಾದ ಕರ್ನಾಟಕ ಸಂಗೀತದ ಜಾಡು ಹಿಡಿದು ಹೊರಟೆ . ಈ ಪ್ರಯಾಣದ ವಿವಿದ ಅನುಭವಗಳನ್ನು ಒಮ್ಮೆ ನೆನಪಿಸಿಕೊಂಡಾಗ ಈ ಲೇಖನ ಸ್ರಷ್ಟಿಯಾಯಿತು.

ಕರ್ನಾಟಕ ಸಂಗೀತ ಕಲಿಸಲು ಸಂಗೀತ ಮಾಸ್ತರು ಮನೆಗೆ ಬರುತ್ತಿದ್ದರು. ಮಾಸ್ತರು ವಾರಕ್ಕೊಂದು ದಿನ ಬಂದು ಪಾಠ ಮಾಡುತ್ತಿದ್ದರು. ಮಾಡಿದ ಎಲ್ಲದನ್ನೂ ಗಂಭಿರವಾಗಿ ತೆಗೆದುಕೊಳ್ಳುತ್ತಿದ್ದ ನಾನು, ಸಂಗೀತದ ಜೂನಿಯಾರ್ ಪರೀಕ್ಷೆಯನ್ನು ಉತ್ತಮ ಅಂಕಗಳಿಂದಲೇ ತೇರ್ಗಡೆಯಾದೆ. ತಮ್ಮ,ತಂಗಿಯರೂ ನನ್ನೊಂದಿಗೆ ಸಂಗೀತ ಕಲಿತರು. ಎಲ್ಲರೂ ಸೇರಿ ಊರಿನ ದೇವಸ್ತಾನದ ಸಂಗೀತ ಸೇವೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆವು. ಹೀಗೆ ನನ್ನ ಸಂಗೀತಾಸಕ್ತಿಗೆ ಬಾಲ್ಯದಿಂದ ಒಂದು ಅಡಿಪಾಯ ಸಿಕ್ಕಿತು. ಮದುವೆಯಾಗಿ ವಾರಕ್ಕೊಂದು ದಿನ ಪಾಠ ಕೇಳುವ ಪರಿಪಾಟ ನಿಂತ ಮೇಲೆ ನನ್ನ ಸಂಗೀತಾಸಕ್ತಿ ಕ್ಯಾಸೆಟ್ಟುಗಳ, ಸಂಗೀತ  ಕಾರ್ಯಕ್ರಮಗಳ- ಕೆಳುವಿಕೆಗೆ ಸೀಮಿತವಾಗಿತ್ತು. ಈ ಆಸಕ್ತಿಗೆ ಒಂದು ದಿಕ್ಕನ್ನು ಕೊಟ್ಟಿದ್ದು ನನ್ನ ತಾಯ್ತನ. ಮಗಳು ಹುಟ್ಟಿದ ದಿನದಿಂದ ನನ್ನ ಸಂಗೀತ ಕಲಿಕೆ ಮತ್ತೆ ಮುನ್ದುವರೆಯಿತು. ಅವಳಿಗೆ ಲಾಲಿ ಹೇಳಲು ಹಲವು ಮೂಲಗಳಿಂದ ಲಾಲಿ ಹಾಡುಗಳನ್ನು ಕಲಿತೆ. ನನ್ನ ಲಾಲಿಗಳನ್ನೇ ಮಗುವಿನ  ತಂದೆಯೂ  ಮೂಲಕ ಹಾಕಿ ಮಲಗಿಸುವುದನ್ನು ಕೇಳಿ ಮುಗುಳ್ನಗುತ್ತಿದ್ದೆ. ಮಗಳಿಗೆ ಮಾತು ಬರಲು ಆರಂಭವಾದ ಮೇಲೆ ಅವಳಿಗೆ ಏನು ಕಲಿಸುವುದು ಏನು ಬಿಡುವುದೆಂಬ ಉತ್ಸಾಹ! ಆ ಮಗುವಿಗೂ ನಾ ಕಲಿಸಿದ್ದನ್ನೆಲ್ಲ ಕಲಿಯುವ ಅತ್ಯುತ್ಸಾಹ. ಹೀಗೆ ಅವಳಿಗೆ ಸಂಗೀತ, ನ್ರತ್ಯಗಳನ್ನು ನಾನೇ ಕಲಿಸಲು ಆರಂಭಿಸಿದೆ. ನಾವು ಇದ್ದ ಊರೂಗಳಲ್ಲಿ ಅಕ್ಕ ಪಕ್ಕದ ಮಕ್ಕಳನ್ನು ಸೇರಿಸಿಕೊಂಡು ಸಂಗೀತ ತರಗತಿಗಳನ್ನು ಮಾಡಿದೆ. ಈ ನಿಟ್ಟಿನಲ್ಲಿ ನನ್ನ ಅನುಭವಗಳನ್ನು ಸೌದಿಯ ಅನುಭವಗಳು ಮಾಲಿಕೆಯಲ್ಲಿ ಈ ಮೊದಲೇ ದಾಕಲಿಸಿದ್ದೇನೆ.  ನಾನು ಮರೆತ ಪಾಟಗಳನ್ನು ನೆನಪಿಸಿಕೊಂಡೆ ; ಸಂಗೀತದ ಪಟ್ಯಪುಸ್ತಕಗಳನ್ನು ಕೊಂಡೆ -ಹೀಗೆ ನನ್ನ ಮಗು ಸಂಗೀತದ ಮೂಲ ಪಾಟಗಳನ್ನು ತಾಳ ಬದ್ದವಾಗಿ ಹಾಡತೊಡಗಿದಳು.ನಾನು ಹೋಗುತ್ತಿದ್ದ ವಾರಾಂತ್ಯದ ತ್ಯಾಗರಾಜ ಸಮಿತಿಯ ಸಂಗೀತ ಪಾಟಗಳಿಗೆನನ್ನೊಂದಿಗೆ ಬಂದು ಕೇಳುತ್ತಿದ್ದಳು. ಅವಳಲ್ಲಿ ಸಂಗೀತದ ಆಸಕ್ತಿಯನ್ನು ಕುದುರಿಸಲು ನಾನು ಆರಂಭಿಸಿದ ಈ ಚಟುವಟಿಕೆ ನನ್ನ ಸಂಗೀತವನ್ನೂ
ಮುಂದುವರೆಸಿತು . ಮಸ್ಕತ್ತಿನ ಸಂಗೀತಾಸಕ್ತರ ಪರಿಚಯ ನನಗಾಯಿತು, ಹಲವು ಸ್ನೇಹಿತರನ್ನು ಒದಗಿಸಿತು. 
  
ಅಷ್ಟರಲ್ಲಿ ನಮ್ಮ ಹತ್ತಿರವೇ ಒಬ್ಬ ಉತ್ತಮ ಗುರು ಮಕ್ಕಳಿಗೆ ಪೀಟೀಲು ಕಲಿಸುತ್ತಾರೆಂದು ತಿಳಿದಿದ್ದೂ ಆಯಿತು; ನಾನು  ಅವರ ಹಿಂದೆ ಬಿದ್ದು, ಅವರೊಡನೆ ಮಾತನಾಡಿ ಮಗಳನ್ನು ಆ ತರಗತಿಗೆ ಸೇರಿಸಿದೆವು. ಅವರು ಇವಳನ್ನು ಸೇರಿಸಿಕೊಳ್ಳುವಾಗಲೇ ಅವರ ತರಗತಿಯಲ್ಲಿರಬೇಕಾದರೆ ಪಾಲಿಸಬೇಕಾದ ನಿಯಮಗಳ ಪಟ್ಟಿ ಕೊಟ್ಟಿದ್ದರು. ಎಲ್ಲವನ್ನೂ ಒಪ್ಪಿಕೊಂಡು ಮಗಳನ್ನು ಅಲ್ಲಿ ಸೇರಿಸಿದೆವು. ಅಲ್ಲಿಂದ ನಮ್ಮ ಕುಟುಂಬದ ದಿನಚರಿಯ ಒಂದು ಭಾಗವಾಗಿ ಅವಳ ಸಂಗೀತ ತರಗತಿಗಳು ಸೇರಿಕೊಂಡವು. ಗುರುಕುಲ ಮಾದರಿಯಲ್ಲಿ ಅವರು ನೀಡುತ್ತಿದ್ದ ಶಿಕ್ಷಣಕ್ಕೆ ಮಕ್ಕಳ ಹೆತ್ತವರ ಸಹಾಯ ಸಂಪೂರ್ಣವಾಗಿ ಬೇಕಿತ್ತು. ಅವರ ವಿಜಯ ದಶಮಿಯ ಪೂಜೆ, ಬಹುಳ ಪಂಚಮಿಯ ಪೂಜೆಗಳಲ್ಲಿ ನಾವುಗಳು ಹೋಗಿ ದೇವರ ಪಾತ್ರೆ ತೊಳೆಯುವುದು, ಹೂವು ಕಟ್ಟುವುದು ಮಾಡ ತೊಡಗಿದೆವು. ಅವರ ಪಂಚರತ್ನ ತರಗತಿಯಲ್ಲಿ ಹಲವು ಅಮ್ಮಂದಿರ ಜೊತೆಗೆ ನಾನೂ ಸೇರಿಕೊಂಡೆ. ನನ್ನ ಮಗಳ ಗುರುವಿನ ಹಿರಿಯ ವಿದ್ಯಾರ್ಥಿಗಳಿಂದನಡೆಸಲ್ಪಡುತ್ತಿದ್ದ ಈ ತರಗತಿಗಳುಮತ್ತೆ ನನ್ನನ್ನು ತರಗತಿಗಳಲ್ಲಿ ಕುಳ್ಳಿರಿಸಿತು. ನಡುವಿನಲ್ಲಿ ನಮ್ಮನ್ನೆಲ್ಲ ಒಬ್ಬೊಬ್ಬರೇ ಹೇಳಿಸುವಾಗ ಮಕ್ಕಳ ಮುಂದೆ ನಾವು ತಬ್ಬಿಬ್ಬು.
ಆದರೂ ಮಗಳೊಂದಿಗೆ ಪುನಃ ತರಗತಿಯಲ್ಲಿ ಕುಳಿತುಕೊಳ್ಳುವ ಅನುಭವವೇ ಬೇರೆ. ಎರಡು ವರ್ಷಗಳಲ್ಲಿ ಮಗಳು ಕಲಿಸುವವರಲ್ಲಿ ಒಬ್ಬಳಾಗಿ ಕುಳಿತು ಪಾಠ ಮಾಡಲು ಆರಂಭಿಸಿದಳು. ಹೆಮ್ಮೆಯಿಂದ ಮಗಳು ಕಲಿಸುವುದನ್ನು ಆಲಿಸುತ್ತಿದ್ದೆ. ಅವಳು ಕಲಿತ ಹಾಡುಗಳು,ಕೀರ್ತನೆಗಳು ಅವಳ ಅಪ್ಪನ ಸಿಳ್ಳೇಯಲ್ಲಿ ಮನೆಯೆಲ್ಲ ತುಂಬುವುದನ್ನು ಕೇಳಿ ಪುಳಕಗೊಳ್ಳುತ್ತಿದ್ದೆ. ಹೀಗೆ ಅವಳು ಒಂದು ಮಟ್ಟ ತಲುಪಿದಳು. ಅವಳ ಗುರುಗಳ ಬೈಗುಳ,೩-೪ ಗಂಟೆಗಳ ಸತತ ತರಗತಿಗಳು, ಹೋಗಿ ಚಿಕ್ಕ ಮಕ್ಕಳಿಗೆ ಪಾಠ ಮಾಡಬೇಕಾದ ಕಟ್ಟುನಿಟ್ಟು-ಯಾವುದೂ ಅವಳ ಆಸಕ್ತಿಯನ್ನು ಕುಂದಿಸಲಿಲ್ಲ.  ಪಿಟೀಲು, ಹಾಡುಗಾರಿಕೆ ಎರಡರಲ್ಲೂ ಕೀರ್ತನೆಗಳನ್ನು ಕಲಿಯಲು ಆರಂಭಿಸಿದಳು.   ಅವಳ ಸಂಗೀತ ಗುರುಗಳ ವಾರ್ಷಿಕ ಕಾರ್ಯಕ್ರಮವಾದ ತ್ಯಾಗರಾಜ ಆರಾಧನಾ ಕಾರ್ಯಕ್ರಮದಲ್ಲಿ ಹಾಡುವಷ್ಟು, ಪೀಟೀಲು  ನುಡಿಸುವಷ್ಟು ಕಲಿತಳು. ಎರಡು ಆರಾದನೆಗಳಲ್ಲಿ ಹಾಡನ್ನೂ, ಒಂದು ಅರಾದನೆಯಲ್ಲಿ  ಪಿಟೀಲನ್ನೂ ನುಡಿಸಿದಳು. ಈ ಆರಾಧನಾ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಸೇರಿ ನಿರ್ವಹಿಸುವ ಸಡಗರ ಒಂದು ಒಳ್ಳೆಯ ಅನುಭವ. ಎಲ್ಲ ಭಾಗವಹಿಸುವ ಮಕ್ಕಳ ಸಂಪೂರ್ಣ ಕುಟುಂಬ ಈ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದೆ. ಬೆಳಿಗ್ಗೆಯಿಂದ ಮದ್ಯಾಹ್ನದ ತನಕ ಕಾರ್ಯಕ್ರಮದ ಸಭಾಂಗಣವನ್ನು ಅಲಂಕರಿಸಿ ಓರಣಗೊಳಿಸಿ, ಸಂಜೆ ಪುನಃ ಬಂದು ಕಾರ್ಯಕ್ರಮ ಮುಗಿದಾಗ ಎಲ್ಲರಲ್ಲೂ ಒಂದು ಸಾರ್ಥಕ ಭಾವ! 
         
ಇವುಗಳ ನಡುವೆ ನನ್ನ ತಂದೆಯ ಇಲ್ಲವಾಗುವಿಕೆ ನನ್ನನ್ನು ಅನಾಥ ಪ್ರಜ್ನೆಯತ್ತ ನೂಕಿತು,ಅವರು ಪ್ರೀತಿಯಿಂದ ಕೊಡಿಸಿದ
ವೀಣೆಯನ್ನು ಮಸ್ಕತ್ತಿಗೆ ಹೊತ್ತುತಂದೆ. ಸಂಪೂರ್ಣ ಮರತೇ ಹೋಗಿದ್ದ ವಿದ್ಯೆಯನ್ನುಹೊಸ ಗುರುವಿನ ಸಹಾಯದಿಂದತೆ ನೆನಪಿಸಿ
ಕೊಂಡೆ. ಷಣ್ಮುಖ ಪ್ರಿಯದ ಸಿದ್ದಿ ವಿನಾಯಕಂ,ವಾತಾಪಿ,ಪಂಚರತ್ನ ಕೃತಿಗಳನ್ನೂಸಹ ವೀಣೆಯಲ್ಲಿ ಕಲಿತೆ. ಇಲ್ಲಿ ನಡೆಯುವ trinity-day ಕಾರ್ಯಕ್ರಮದಲ್ಲಿ ಪ್ರತಿವರ್ಷ ವೀಣಾವಾದನವನ್ನೂ ಮಾಡುತ್ತಿದ್ದೀನಿ. ಕಳೆದ ವರ್ಷ ಅಮ್ಮ ಬಂದಾಗ ಇಲ್ಲಿನ ಒಪೆರಾ ಹೌಸ್ನಲ್ಲಿ ವೀಣೆ ನುಡಿಸಿದ್ದಂತೂ ಜೀವನದ ಮರೆಯಲಾಗದ ಅನುಭವಗಳಲ್ಲಿ ಒಂದು. ಒಮಾನಿ ಊದ್, ಜನಪದ ಕಲೆಗಳ ಪ್ರದರ್ಶನದ ನಡುವೆ ನಮ್ಮ ಅಚ್ಚ ದಕ್ಷಿಣ ಭಾರತದ ಸಾಂಪ್ರದಾಯಿಕ ವಾದ್ಯ ವೀಣೆ ಎಲ್ಲರ ಗಮನ ಸೆಳೆಯಿತು . ಹಲವರಿಂದ ಮೆಚ್ಚುಗೆ ಗಳಿಸಿತು.  ಪಪ್ಪಾ ನಿಮಗಿದೇ  ನನ್ನ ಶ್ರಧಾಂಜಲಿ ಎಂದುಕೊಂಡೆ

ನಾವು ಮಧ್ಯದಲ್ಲಿ ಎರಡು ವರ್ಷ ಊರು ಬದಲಿಸ ಬೇಕಾಯಿತು. ನನ್ನ ಕಳಕಳಿ ಎಷ್ಟಿತ್ತೆಂದರೆ, ಮಗಳು ಎಲ್ಲಿ ಕಲಿತ ಸಂಗೀತ ಮರೆಯುತ್ತಾಳೋ  ಎಂದು ಅಲ್ಲಿಯೂ ಸಾಂಸ್ಕ್ರತಿಕ ವಾತಾವರಣಕ್ಕಾಗಿ ಹುಡುಕಾಡಿ ಅವಳು ಅಲ್ಲಿಯೂ ನಮ್ಮ ನ್ರತ್ಯ,ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿದೆ. ಅವಳು ಹಲವು ದಾಸ ಕೃತಿಗಳನ್ನು ಕಲಿತಳಲ್ಲದೆ ಹೊಸ ಗೆಳತಿಯರನ್ನು ಪಡೆದಳು .
 
ಈಗ ನಾನು ಒಂದು ಸಂಸ್ತೆಯ Legal Advisor. ನನ್ನ ಈ ಆಸಕ್ತಿ, ಮಗಳ ಓದು, ಸಂಗೀತ ಪಾಟಗಳು ಮನೆಯ ಕೆಲಸ- ಎಲ್ಲವನ್ನೂ ಸರಿದೂಗಿಸಿಗೊಂದು ಹೋಗಲು ಹೆಣಗುತ್ತಿದ್ದೇನೆ .  ಈ ವರ್ಷ ಮಗಳೂ ೯ನೆಯ ತರಗತಿಗೆ ಬಂದಿದ್ದಾಳೆ . ಮಗಳಿಗೆ ಶಾಲೆಯ ಅಭ್ಯಾಸದ ಭಾರವೂ ಹೆಚ್ಚಾಗಿರುವುದರಿಂದ, ಅವಳ ಸಂಗೀತ ತರಗತಿಯ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಅವಳಿಗೆ ಅವಳ ಸಂಗೀತ ತರಗತಿಗಳನ್ನು ನಿಲ್ಲಿಸಬೇಕಾಗಿ ಬಂದಿದೆ. ಆದರೆ ನನ್ನ ತುಡಿತ ಅವಳನ್ನು ರತ್ನಮಾಲ ಪ್ರಕಾಶ್ ಹತ್ತಿರ ಸುಗಮ ಸಂಗೀತದ ಪಾಟಕ್ಕೂ, ಅಲ್ಲಿಂದ ಕರ್ನಾಟಕ ಸರಕಾರ ನಡೆಸುವ ಸಂಗೀತ ಮಾಧ್ಯಮಿಕ ಪರೀಕ್ಷೆಗೂ ಒಯ್ದಿದೆ. ಈ ಪರೀಕ್ಷೆಗೆ ಅವಳಿಗೆ ಗುರುವಾಗಿ ಸಹಕರಿಸಿದ್ದು ಶ್ರೀಯುತ ವೆಂಕಟ ರಾಗವನ್ ಎಂಬ ಮಹಾವಿದ್ವಾಂಸ.ನಮಗೆ ಅವರ ಬಗೆಗೆ ಏನೂ ತಿಳಿಯದೆಯ ನಾವು ಆಕಸ್ಮಿಕವಾಗಿ ಅವರ ಬಳಿಗೆ ಹೋಗಿ ಪ್ರೀತಿ ಈಗ ಅವರ  ಶಿಷ್ಯೆ. ಅವರು ವಾರಕ್ಕೆ ಎರಡು ದಿನ  ಅವರಿಂದ ಅಂತರ್ಜಾಲದ ಮೂಲಕ ಸಂಗೀತ ಕಲಿಯುತ್ತಿದ್ದಾಳೆ.  ಅವಳು ಇನ್ನೂ ಹೆಚ್ಚಿನ ಹಂತಕ್ಕೆ ಏರುವಂತಾಗಲಿ ಎನ್ನುವುದು ನನ್ನ ಹಾರೈಕೆ.

ಬುಧವಾರ, ಏಪ್ರಿಲ್ 24, 2013

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ

ನಮ್ಮ ಮಸ್ಕತ್ ಕನ್ನಡ ಸಂಘ 'ಕನ್ನಡ ಸಾಹಿತ್ಯ' ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಲ್ಲಿ ನೆಲಸಿರುವ ಕನ್ನಡ ಸಾಹಿತ್ಯಾಸಕ್ತರು ಭಾಗವಹಿಸಿದ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಈ ವಿದೇಶಿ ನಾಡಿನಲ್ಲಿ ಬೆಳೆದ ನಮ್ಮ
ಮಕ್ಕಳು ಕನ್ನಡ ಸಾಹಿತ್ಯ ಚರಿತ್ರೆ, ವಚನ, ಗಾದೆಗಳು -ಎಲ್ಲವನ್ನೂ ಪ್ರೌಢವಾಗಿ ವೇದಿಕೆಯಲ್ಲಿ ವಾಚಿಸಿದ್ದಲದೆ, ಶುದ್ದ ಕನ್ನಡದಲ್ಲಿ ನಿರರ್ಗಳವಾಗಿ ಪ್ರಶ್ನಾವಳಿಯನ್ನು ಪ್ರಸ್ತುತಪಡಿಸಿದ್ದು.  ಈ ಕಾರ್ಯಕ್ರಮದಲ್ಲಿ ನಾನು ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಎಂಬ ವಿಚಾರವಾಗಿ ಮಾತನಾಡಿದ್ದೆ. ನನ್ನ ಭಾಷಣವನ್ನು ಇಲ್ಲಿ ದಾಖಲಿಸಿಡುತ್ತೇನೆ.
 
ಇಂದಿನ ದಿನ ಕರ್ನಾಟಕದ ಯಾವ ಚಿಕ್ಕ ಹಳ್ಳಿಯೂ ಇಂಟರ್ನೆಟ್ ಅಂದರೆ ಅಂತರ್ಜಾಲದ ,ಕಂಪ್ಯೂಟರ್ ಬಳಕೆ ಇಲ್ಲದೆ ಇಲ್ಲ ಅನಿಸುತ್ತದೆ. ನಮ್ಮ ಕೈಯ್ಯೊಳಗಿರುವ ಚಿಕ್ಕ ಸಾದನವಾದ ಮೊಬೈಲ್ ಫೋನುಗಳಂತೂ ಪ್ರಪಂಚವನ್ನೇ ನಮ್ಮ ಅಂಗೈಯೊಳಗೆ ತಂದಿದೆ. ಈ ಯಂತ್ರಗಳ ಬಳಕೆಗೆ ಇಂಗ್ಲಿಷ್ ಅನಿವಾರ್ಯ. ಈ ಯಂತ್ರಗಳು  ಸ್ರಷ್ಟಿಸಿರುವ ಉದ್ಯೋಗ ಮತ್ತು ದುಡಿಮೆಯ
ಅವಕಾಶಗಳೂ ಅಪಾರ. ಆದ್ದರಿಂದ ನಮ್ಮಮುಂದಿನ ತಲೆಮಾರಿನ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಇದರ ಮೋಡಿಗೆ  ಒಳಗಾಗುವುದು ಸಹಜ. ಆದ್ದರಿಂದಲೇ ಚಿಕ್ಕ ಚಿಕ್ಕ ಹಳ್ಳಿಗಳಲ್ಲಿಯೂ ಇಂದು ಪೋಷಕರು ತಮ್ಮಮಕ್ಕಳನ್ನು
ಇಂಗ್ಲಿಷ್ ಮಾದ್ಯಮದ ಶಾಲೆಗಳಿಗೆ ಸೇರಿಸುವ ತವಕದಲ್ಲಿದ್ದಾರೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ.ಕೇವಲ ೨೦-೩೦ ವರ್ಷಗಳ ಹಿಂದೆ ನಾವೆಲ್ಲಾ ಓದಿದ, ಶತಮಾನೋತ್ಸವವನ್ನು ಆಚರಿಸಿಕೊಂಡ ನಮ್ಮೂರಿನ ಶಾಲೆಗಳನ್ನು ಕೇಳುವವರಿಲ್ಲವಾಗಿದೆ. ಇವನ್ನೆಲ್ಲ ನೋಡಿದರೆ ಮಾಹಿತಿ ತಂತ್ರಜ್ನಾನದ ಈ ಜಾಗತಿಕ ಹಳ್ಳಿಯಲ್ಲಿ ನಮ್ಮ ಈ ಕನ್ನಡ ಉಳಿದೀತಾ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಮಾಹಿತಿ ತಂತ್ರಜ್ನಾನದ ವೇಗ, ಅದು ಜೀವನದ ಎಲ್ಲ ಭಾಗಗಳನ್ನು ಆವರಿಸಿಕೊಳ್ಳುತ್ತಿರುವ ರೀತಿ ನೋಡಿದರೆ  ಇನ್ನು ಹೆಚ್ಚು ಸಮಯ ನಮ್ಮ ಭಾಷೆ ಉಳಿಯಲಾರದು ಎಂದು ದಿಗಿಲಾಗುವುದು ಸಹಜ.
 
ಆದರೆ ತನ್ನ ಎರಡು ಸಾವಿರಕ್ಕೂ ಮಿಗಿಲಾದ ಇತಿಹಾಸದಲ್ಲಿ ಕನ್ನಡ ಇಂತಹ ಹತ್ತು ಹಲವು ಅಪಾಯಗಳ ನಡುವೆಯೇ ಇಷ್ಟು
ಸಮ್ರುಧ್ಧವಾಗಿ ಬೆಳೆದಿರುವಾಗ ಈ ಸವಾಲನ್ನೂ ದಾಟಿ ಕನ್ನಡ ಬೆಳೆಯ ಬಹುದೆಂಬ ಆಶಾವಾದ ಮೂಡುತ್ತದೆ. ಹಾಗೆ 
ನೋಡಿದರೆ ಯಾವ ಪ್ರಾಂತೀಯ ಭಾಷೆಯೂ ಈ ಮಾಹಿತಿ ತಂತ್ರಜ್ಞಾನದ ದಾಳಿಯಿಂದ ಹೊರತಾಗಿಲ್ಲ. ಆದ್ದರಿಂದ ಇದನ್ನು 
ನಾವು ಪ್ರಾಂತೀಯ ಭಾಷೆಗಳ ಸಂಕ್ರಮಣ ಕಾಲ ಎನ್ನಬಹುದು. ಎಲ್ಲ ಪ್ರಾಂತೀಯ ಭಾಷೆಗಳಂತೆ ಕನ್ನಡವೂ ಈ ಹೊಸ 
ತಂತ್ರಜ್ಞಾನದ ಸಹಾಯದಿಂದ ಹೊಸ ಯುಗಕ್ಕೆ ಕಾಲಿಡುತ್ತಿದೆ ಎನ್ನೋಣ. 
 
ಈಗ ನಮಗೆ ಕನ್ನಡ ಓದಲೇ ಬೇಕೆಂದಿದ್ದರೆ ಪುಸ್ತಕಗಳೇ ಬೇಕೆಂದಿಲ್ಲ. ಕನ್ನಡದ ಯಾವುದೇ ದಿನಪತ್ರಿಕೆ, ವಾರಪತ್ರಿಕೆ ಈಗ ಅಂತರ್ಜಾಲದಅತಿಯ ಲ್ಲಿ ಲಭ್ಯ. ಕುಮಾರವ್ಯಾಸ ಭಾರತದ ಪಿಡಿಎಫ್ ಅವತರಿಣಿಕೆ ಅಂತರ್ಜಾಲದಲ್ಲಿ ಓದಬಹುದು. ಪ್ರಪಂಚದ ಯಾವ ಮೂಲೆಯಲ್ಲಿದ್ದುಕೊಂಡೂ ಆಸಕ್ತರು ಕನ್ನಡವನ್ನು ಓದಬಹುದು. ಆಸಕ್ತರೂ ಬಹಳ ಸಂಖ್ಯೆಯಲ್ಲಿ ಇದ್ದಾರೆ ಎನ್ನುವುದಕ್ಕೆ ಅಂತರ್ಜಾಲದಲ್ಲಿ ಲಭ್ಯವಿರುವ ಕನ್ನಡದ ಮಾಹಿತಿಯ ಆಗಾಧತೆಯೇ ಸಾಕ್ಷಿಯಲ್ಲವೇ? ಕನ್ನಡದ ನಿಘಂಟುಗಳು, ಕನ್ನಡದ ಯಾವುದೇ ಸಾಹಿತಿಯ ಬಗೆಗಿನ ಮಾಹಿತಿ, ಯಾವುದೇ ಜನಪ್ರಿಯ ಕನ್ನಡ ಕವಿತೆಯ ಸಾಹಿತ್ಯ- ಹೀಗೆ ನಾವು ಹೆಸರಿಸಿದ ಎಲ್ಲ ಮಾಹಿತಿಯೂ ನಮ್ಮ ಎದುರಿರುವ ಚಿಕ್ಕ ಯಂತ್ರ ನಿಮಿಷದಲ್ಲಿ ಒದಗಿಸುತ್ತದೆ. 

ಕನ್ನಡ ಬರವಣಿಗೆ & ಮಾಹಿತಿ ತಂತ್ರಜ್ಞಾನ :

ಕನ್ನಡದಲ್ಲಿ ಬರವಣಿಗೆಯನ್ನೂ ಈ ಹೊಸ ತಂತ್ರಜ್ಞಾನ  ಸರಳಗೊಳಿಸಿದೆ. ಮೊದಲೆಲ್ಲ ನಾವು ಏನನ್ನಾದರೂ ಬರೆದರೆ ಅವುಗಳನ್ನು ಓದುಗರಿಗೆ ತಲುಪಿಸಲು ಯಾವುದಾದರೂ ಪತ್ರಿಕೆಗೆ ಕಳುಹಿಸಿ ಅದು ಪ್ರಾತಗೊಳ್ಳುವ ತನಕ ಕಾಯಬೇಕಾಗಿತ್ತು. ಆದರೆ ಈಗ ಮಾಹಿತಿ ತಂತ್ರಜ್ನಾನದ ಕೃಪೆಯಿಂದ ಯಾರು ಬೇಕಾದರೂ ಲೇಖನ ಬರೆದು ನಿಮಿಷಕ್ಕೆ ಸಾವಿರ ಜನರನ್ನು ತಲುಪಲೂಬಹುದು. ಅಂತರ್ಜಾಲ ಅದಕ್ಕೆ ನೂರು ದಾರಿಗಳನ್ನು ಕಲ್ಪಿಸಿದೆ, ಕಲ್ಪಿಸುತ್ತಿದೆ. ನಾವು ನಮ್ಮ ಲೇಖನವನ್ನು ನಮ್ಮ ಮುಖಪುಸ್ತಕದ ಗೋಡೆಯ ಮೇಲೆ ಹಂಚಬಹುದು; ನಮ್ಮದೇ ಬ್ಲಾಗ್ನಲ್ಲಿ ಬರೆಯಬಹುದು!........ 
 
ಭಾರತಿಯ ಭಾಷೆಗಳನ್ನು ಗಣಕಯಂತ್ರದ ಪರೆದೆಯ ಮೇಲೆ ಮೂಡಿಸಲು ಮೊದಲು ಸವಾಳದದ್ದು ಅಂಗ್ಲ ಕೀಲಿಮಣೆ. ಈಗಿನ ಪರಿಸ್ತಿತಿಯಲ್ಲಿ ಇಂಗ್ಲಿಷ್ ಬಾಷೆ ಮತ್ತು querty ಕಿಲಿಮಣೆ ಕಂಪ್ಯೂಟರ್ ಬಳಕೆಗೆ ಅನಿವಾರ್ಯ. ಈ ಕೀಲಿಮಣೆಯನ್ನು ಬಳಸಿಯೇ ಭಾಷೆಗಳನ್ನುಯಲು ಸಾಧ್ಯವಾಗಿಸಿದ್ದು ಬರಹದ ಸಾಧನೆ. ಈ ತಂತ್ರಾಂಶವನ್ನು ಬಳಸಿ ಕನ್ನಡವನ್ನು ಸಮರ್ಥವಾಗಿ ಎ-ಮೈಲ್ , ಫೆಸ್ ಬುಕ್ ,ಬ್ಲಾಗ್ಗಳಲ್ಲಿ ಬಳಸಬಹುದು. ಇದೆ ಮಾದರಿಯಲ್ಲಿ ' ನುಡಿ' ಮತ್ತು 'ಕನ್ನಡ ಸ್ಲೇಟ್' ತಂತ್ರಾಂಶಗಳಿವೆ.ಇವೆಲ್ಲವೂ ಇಂಗ್ಲಿಷ್ ಭಾಷೆಯ phonetics ಆದರಿಸಿ ಇರುವುದರಿಂದ ಉಪಯೋಗಿಸುವುದು ಬಹಳ ಸುಲಭ. ವಿದೇಶದಲ್ಲಿಯೇ ಬೆಳೆದ ನನ್ನ ಮಗಳು ಕನ್ನಡದಲ್ಲಿ ಅವರಿ ಅಜ್ಜಿಗೆ ಮೇಯ್ಲ್ ಬರೆಯುವುದನ್ನು ನೋಡುವಾಗ ತಂತ್ರಜ್ಞಾನದಲ್ಲಿ ಮಾನವ ಸಾದಿಸಿದ ಔನ್ನತ್ಯ ನನ್ನನ್ನು ಬೆರಗುಗೊಲಿಸುತ್ತದೆ. 
 
ನಮ್ಮಲ್ಲಿ ಬರೆಯುವ ಹವ್ಯಾಸವಿದ್ದರೆ, ಅದನ್ನು ಬೆಳೆಸಿಕೊಳ್ಳಲು ಬ್ಲಾಗ್ ಒಂದು ಉತ್ತಮ ಮಾದ್ಯಮ. google, wordpress ಮುಂತಾದ ತಾಣಗಳಲ್ಲಿ ನಾವು ನಿಮಿಷದಲ್ಲಿ ನಮ್ಮ ಬ್ಲಾಗ್ ಆರಂಭಿಸಿ ನಮ್ಮ ಹವ್ಯಾಸವನ್ನು ಮುಂದುವರೆಸಬಹುದು. ಲೇಖನ ಬರೆಯುವಷ್ಟು ಆಸಕ್ತಿ ಇಲ್ಲದಿದ್ದರೂ ನಾವು ಕನ್ನಡವನ್ನು ನಮ್ಮ ದಿನನಿತ್ಯದ ಮೇಯ್ಲ್, ಫೇಸ್ ಬುಕ್ ಸಂದೇಶಗಳಲ್ಲಿ ಬಳಸಿ ಈ ಮಾದ್ಯಮದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸಬಹುದು.
 
'ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಗಸು'ಎಂಬ ಡಿ.ವಿ.ಜಿ ಯವರ ಮಾತಿನಂತೆ ಕನ್ನಡ  ಮತ್ತು ಸಾಹಿತ್ಯ ಮಾಹಿತಿ ತಂತ್ರಜ್ಞಾನ ಎಂಬ ಹೊಸ ಚಿಗುರಿನೊಂದಿಗೆ ಇನ್ನೂ ಸತ್ವಯುತವಾಗಿ ಬೆಳೆಯುತ್ತಿದೆ ಎಂಬುದು ನನ್ನ ಅನಿಸಿಕೆ.  
 

ಬುಧವಾರ, ಫೆಬ್ರವರಿ 20, 2013

ನಾನೂ ಕೆಲಸ ಮಾಡಲು ಆರಂಭಿಸಿದೆ

ಇಷ್ಟು ವರ್ಷಗಳೂ ನನ್ನದು ಒಂದೇ ಗೋಳು . ಮಗಳ ಮೇಲೆ, ಗಂಡನ ಮೇಲೆ ಸಿಟ್ಟು ಬಂದಾಗಲೆಲ್ಲ , ನಾನೊಬ್ಬಳು ಇಲ್ಲಿ ಬಿಟ್ಟಿ ಇದ್ದೀನಿ; ನಾನು ಓದಿದಕ್ಕೆ ಕೆಲಸ ಮಾಡಿದರೆ ಇಷ್ಟು ಹೊತ್ತಿಗೆ ಎಲ್ಲಿರುತ್ತಿದೇನೋ, ಮನೆಯಲ್ಲಿದ್ದೇ  ಕೆಟ್ಟೆ ಎಂಬ ಕೊರಗು.
ಕೆಲಸಕ್ಕೆ ಹೋಗುತ್ತಿರುವ ಹೆಂಗಸರನ್ನು ನೋಡಿದರೆ ಎಲಿಲ್ಲದ ಗೌರವ. ಅವರ ಜಾಗದಲ್ಲಿ ನಾನಿದ್ದಿದ್ದರೆ ಎಂಬ ಆಸೆ.
ಅಂತೆಯೇ ನನ್ನ ಕೆಲಸ ಹುಡುಕುವ ಪ್ರಕ್ರಿಯೆಯೂ ನಿಲ್ಲಲಿಲ್ಲ. ಸಾಂಸಾರಿಕ ಜೀವನದ ೧೬ ವರ್ಷಗಳಲ್ಲಿ ನಾನು ಎಲ್ಲೆಲ್ಲ ಸಾದ್ಯವೋ ಅಲ್ಲೆಲ್ಲ ನಾನು ಕೆಲಸ ಮಾಡುವ ಅವಕಾಶಕ್ಕಾಗಿ ಹುಡುಕಿದ್ದೇನೆ, ಮಾಡಿದ್ದೇನೆ . ನಾನು ಕಲಿತ ಯಾವ ಕ್ಷೆತ್ರವಾದರೂ ನನಗೆ ಅಡ್ಡಿ ಇರಲಿಲ್ಲ.

ಪುಣೆಯಲ್ಲಿದ್ದಾಗ  ಪತ್ರಿಕೆಯಲ್ಲಿ ಬರುವ ಜಾಹಿರಾತಿನಲ್ಲಿ ಚಿಕ್ಕ ಮಗಳನ್ನು ಹಿಡಿದುಕೊಂಡು ಹುಡುಕುತ್ತಿದ್ದೆ.ನನಗೆ
ಸಿಗಬಹುದುಎಣಿಸಿದ ಕೆಲಸಗಳಿಗೆ ಅರ್ಜಿಯನ್ನೂ ಗುಜರಾಯಿಸುತ್ತಿದ್ದೆ. ನನ್ನಅರ್ಜಿಯನ್ನು ಗುರುತಿಸಿ ಬರುತ್ತಿದ್ದ ಕರೆಗಳಿಗೆ
ಮಗಳೊಡನೆ ಉತ್ತರಿಸಿ,ಅದಕ್ಕೆತಯಾರಿಯನ್ನೂ ಅವಳೊಡನೆ ಮಾಡುತ್ತಿದ್ದೆ.ಭಾರತದ ಸಂವಿದಾನದ ಬಗ್ಗೆ demolecture  ಕರೆ ಬಂದಾಗ,ಎರಡುವರ್ಷದ  ನನ್ನ ಕಂದಮ್ಮನನ್ನಪ್ರೇಕ್ಷಕಿ. ನಾನು ನನ್ನ ಪ್ರಾತ್ಯಕ್ಷಿಕೆಯನ್ನು ಕೊಡುವ ಹೊತ್ತಿಗೆ
ಅವಳೂ ಸಂವಿಧಾನದ ೧೯ನೆಯ ಕಲಮಿನ ಬಗೆಗೆ ಮಾತನಾಡುತ್ತಿದ್ದಳು. ಹೀಗೆ ನನ್ನ ಕೆಲಸದ ಬೇಟೆ ಮುಂದುವರೆಯಿತು.  ಪ್ರೇಮ ಕುಲಕರ್ಣಿ ಎಂಬ ವಕೀಲೆಯ ಪರಿಚಯನನ್ನ ವಕೀಲಿ ವ್ರತ್ತಿಯ ಆರಂಭಕ್ಕೆ ಕಾರಣವಾಯಿತು. 
ನನ್ನ   ಮಗಳ ಶಾಲೆಯ ಸಮಯದಲ್ಲಿ ಅವರ ಕಚೇರಿಯಲ್ಲಿ ಸಹಾಯಕಳಾಗಿ ಕೆಲಸ ಮಾಡಲಾರಂಭಿಸಿದೆ.ಮಗಳ ಶಾಲೆಯ ಸಮಯ ಹೆಚ್ಚಿದಂತೆ ನನ್ನ ಕೆಲಸದ ಅವಧಿಯೂ   ಹೆಚ್ಚಿತು.
                       
ಅಷ್ಟರಲ್ಲಿ ನಾವು ಪುಣೆ ನಗರಿಯನ್ನು ಬಿಟ್ಟು ಪತಿದೇವರ  ಉದ್ಯೋಗಕ್ಕಾಗಿ ಸೌದಿ ಸೇರಿದೆವು. ನನ್ನ ವಕೀಲಿ ವಿದ್ಯೆಗೆ ಆ ಊರಿನಲ್ಲಿ ಬೆಲೆ  ಇರಲಿಲ್ಲ. ನಾನು ಸೋಲು ಒಪ್ಪಲು ತಯಾರಿರಲಿಲ್ಲ. ನಾನು ಕಲಿತ ಸಂಗೀತವನ್ನು ಅಭ್ಯಾಸ ಮಾಡಲು ಆರಂಭಿಸಿದೆ. ಮಗಳೊಂದಿಗೆ ಕೆಲುವು ಸ್ನೇಹಿತರ ಮಕ್ಕಳನ್ನು ಸೇರಿಸಿಕೊಂಡು ಸಂಗೀತ ಕಲಿಸಲು ಆರಂಭಿಸಿದೆ. ಅಷ್ಟರಲ್ಲಿ ನನಗೆ ಅಲ್ಲಿನ ಭಾರತಿಯ ಶಾಲೆಯಲ್ಲಿ ಪಾಠ ಕಲಿಸುವ ಅವಕಾಶ ದೊರೆಯಿತು. ನಾನು ಅದ್ಯಾಪಕಿಯಾದೆ. ಆದರೆ ನನ್ನ ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ನನ್ನ ಪತಿದೇವರಿಗೆ ಮಸ್ಕತ್ತಿನಲ್ಲಿ ಒಳ್ಳೆಯ ಉದ್ಯೋಗ, ನಾವು ಸೌದಿಯನ್ನು ಬಿಟ್ಟೆವು.ನನ್ನ ಅದ್ಯಾಪನ ವ್ರತ್ತಿಗೆ ಸಂಚಕಾರ ಬಂದಿತು. ಮಸ್ಕತ್ತಿನಲ್ಲಿ ಅದ್ಯಾಪಕಿಯಾಗಲು ಬಿ.ಎಡ್ ಪದವಿಯೇ ಬೇಕಂತೆ. ಇಲ್ಲಿ ಶಾಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ಮನೆಯ ಹತ್ತಿರದ ಒಂದೆರಡು ಮಕ್ಕಳೊಂದಿಗೆ ನನ್ನ ಸಂಗೀತ ಪಾಠಶಾಲೆ ಮುಂದುವರೆಯಿತು. ಮಗಳಿಗೆ ಇದರಿಂದಾಗಿ ಕೆಲವು ಮಿತ್ರರೂ ದೊರೆತರು, ಅವಳು ಸಂಗೀತ ಅಭ್ಯಾಸಕ್ಕೆ ಇದು ಭದ್ರ ಭುನಾದಿಯನ್ನೂ  ಹಾಕಿತು. ಈಗ ಅವಳು ರಾಗ ಗುರುತಿಸಿ, ಆಲಾಪನೆಗಳನ್ನು ಮಾಡುವಾಗ, ಸುಶ್ರಾವ್ಯವಾಗಿ ಹಾಡುವಾಗ -ನನ್ನ ಸಂಗೀತ ಪಾಟಗಳು ಸಾರ್ಥಕ ವಾಯಿತೆಂದು ಮನಸ್ಸಿಗೆ ಹಿತವೆನಿಸುತ್ತದೆ.  
 
ಹೀಗೆ ಸಂತೋಷದಿಂದ ಜೀವನ ಮುಂದುವರೆಯುತ್ತಿದ್ದರೂ ಕೆಲಸ ಮಾಡಬೇಕೆಂಬ ನನ್ನ ತುಡಿತ ಮಾತ್ರ ಹಾಗೇ  ಇತ್ತು. ಒಮ್ಮೆ ಹಳೆ ಬಟ್ಟೆಗಳನ್ನು ದಾನಕ್ಕಾಗಿ ಒಟ್ಟುಮಾಡುವ ಪ್ರಜ್ಞಾ ಎಂಬವಳ ಮನೆಗೆ ಹಳೆ ಬಟ್ಟೆಗಳನ್ನು ಕೊಡಲು ಹೋದಾಗ, ಅನೌಪಚಾರಿಕವಾಗಿ ಮಾತನಾಡುತ್ತ ಅವಳೊಬ್ಬ ವಕೀಲೆ  ಮತ್ತು ಮಸ್ಕಿತ್ತನ್ನಿಲ್ಲಿ ಉತ್ತಮ ಕೆಲಸದಲ್ಲಿದ್ದಾಳೆಂದು  ತಿಳಿಯಿತು, ನಾನೂ ಒಬ್ಬಳು ವಕೀಲೆಯೆಂದು ಅವಳೊಡನೆ ಹೇಳಿಕೊಂಡೆ. ಅವಳು ಇಲ್ಲಿ ವಕೀಲರಿಗೆ ಉದ್ಯೋಗ ಅವಕಾಶಗಳ ಬಗೆಗೆ ಹೇಳಿ, ಕೆಲವು ವಿಳಾಸಗಳನ್ನು ಕೊಟ್ಟಳು. ಉತ್ಸಾಹದಿಂದ ಅರ್ಜಿ ಗುಜರಾಯಿಸಿದ ನಾನು ,ಈ ಅರ್ಜಿಗಳ ಉತ್ತರಕ್ಕಾಗಿ ಒಂದು ವರ್ಷ ಕಾಯಬೇಕಾಯಿತು. ಆದರೂ भगवान के घर ढेर है अन्दॆर नहीं ಎಂಬ ಹಿಂದಿ ನಾಣ್ನುಡಿಯಂತೆ ನನಗೆ ಒಂದು ಕೆಲಸ ನಾನೇ ನಂಬಲು ಆಗದಂತೆ ಸಿಕ್ಕಿತು. ನಾನೀಗ ಇಲ್ಲಿನ ಒಂದು ಉತ್ತಮ law firm ನಲ್ಲಿ legal advisor.ಈ ಅವಕಾಶಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತ ನನ್ನ ಹೊಸ ಜೀವನವನ್ನು ಅನಂದದಿಂದ ಅನುಭವಿಸುತ್ತಿದ್ದೆನೆ.